ಉಜಿರೆ ಎಸ್‌ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸಂಧಿ ವಾತ ಚಿಕಿತ್ಸಾ ಶಿಬಿರ

| Published : Apr 08 2025, 12:31 AM IST

ಉಜಿರೆ ಎಸ್‌ಡಿಎಂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸಂಧಿ ವಾತ ಚಿಕಿತ್ಸಾ ಶಿಬಿರ
Share this Article
  • FB
  • TW
  • Linkdin
  • Email

ಸಾರಾಂಶ

ಉಜಿರೆಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹುಟ್ಟುಹಬ್ಬದ ಸಂದರ್ಭ ಆಯೋಜಿಸಲಾಗಿದ್ದ, ಸಂಧಿವಾತ ಮತ್ತು ಅಟೋಇಮ್ಯೂನ್ ತೊಂದರೆಗಳಿಗೆ ಉಚಿತ ಚಿಕಿತ್ಸಾ ಶಿಬಿರ ಇತ್ತೀಚೆಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಉಜಿರೆಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿಆಸ್ಪತ್ರೆಯಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹುಟ್ಟುಹಬ್ಬದ ಸಂದರ್ಭ ಆಯೋಜಿಸಲಾಗಿದ್ದ, ಸಂಧಿವಾತ ಮತ್ತು ಅಟೋಇಮ್ಯೂನ್ ತೊಂದರೆಗಳಿಗೆ ಉಚಿತ ಚಿಕಿತ್ಸಾ ಶಿಬಿರ ಇತ್ತೀಚೆಗೆ ನಡೆಯಿತು.

ಮಂಗಳೂರು ಅತ್ತಾವರ ಕೆ.ಎಂ.ಸಿ. ಆಸ್ಪತ್ರೆಯ ಸಂಧಿವಾತ ತಜ್ಞ ಡಾ.ಶಿವರಾಜ್ ಪಡಿಯಾರ್ ಶಿಬಿರ ಉದ್ಘಾಟಿಸಿ ಮಾತನಾಡಿ, ದೇಹದ ರೋಗನಿರೋಧಕ ಅವ್ಯವಸ್ಥೆಯಿಂದ ಆರೋಗ್ಯಕರ ಅಂಗಾಂಶಗಳ ಮೇಲೆ ಪರಿಣಾಮ ಬೀಳುತ್ತದೆ. ಇದರಿಂದಆಟೋಇಮ್ಯೂನ್ ಕಾಯಿಲೆಗಳು ಸಂಭವಿಸುತ್ತವೆ. ರುಮಟಾಯ್ಡ್ ಸಂಧಿವಾತ, ಮಲ್ಟಿಪಲ್ ಸ್ಕೆರೋಸಿಸ್ ಇತ್ಯಾದಿ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಈ ಎಲ್ಲಾ ತೊಂದರೆಗಳಿಗೆ ಈ ಶಿಬಿರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದರು.

ಉಜಿರೆ ಎಸ್.ಡಿ.ಎಂ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಮೂಳೆ ಶಸ್ತಚಿಕಿತ್ಸಾತಜ್ಞ ಡಾ.ಪ್ರತೀಕ್ಷ್ ಪಿ. ಮಾತನಾಡಿ, ಮಂಗಳೂರು ಅತ್ತಾವರ ಕೆಎಂ.ಸಿ ಆಸ್ಪತ್ರೆಯಖ್ಯಾತ ಸಂಧಿವಾತ ತಜ್ಞ ಡಾ. ಶಿವರಾಜ್ ಪಡಿಯಾರ್ ಮತ್ತು ಪ್ರತ್ಯೂಷ ಮಣಿಕುಪ್ಪಂ ಸಂಧಿವಾತ, ಅಟೋಇಮ್ಯೂನ್ ತೊಂದರೆಗಳಿಗೆ ಚಿಕಿತ್ಸೆ ನೀಡುವ ನುರಿತತಜ್ಞ ವೈದ್ಯರಾಗಿದ್ದು, ಎಲ್ಲರೂ ಈ ಶಿಬಿರದ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.

ಅಧ್ಯಕ್ಷತೆ ವಹಿಸಿದ ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಜನಾರ್ದನ್‌ ಮಾತನಾಡಿ, ಹಲವಾರು ಜನರ ಕಾಯಿಲೆಗಳನ್ನು ಪ್ರಾರಂಭದ ಹಂತದಲ್ಲಿಯೇ ಪತ್ತೆ ಹಚ್ಚಲು ಸಾಧ್ಯವಾಗುವುದರಿಂದ ರೋಗಿಗಳಿಗೆ ಚಿಕಿತ್ಸಾ ವೆಚ್ಚ ಕಡಿಮೆಯಾಗುವುದಲ್ಲದೇ ಅತ್ಯಂತ ಶೀಘ್ರವಾಗಿ ಗುಣಮುಖರಾಗುತ್ತಾರೆ ಎಂದರು.

ಉಜಿರೆ ಎಸ್.ಡಿ.ಎಂ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದೇವೇಂದ್ರಕುಮಾರ್ ಶಿಬಿರಕ್ಕೆ ಶುಭ ಹಾರೈಸಿದರು.

ಫಿಸಿಷಿಯನ್ ಡಾ.ಯಶಸ್ವಿನಿ, ಮೂಳೆ ಶಸ್ತ್ರಚಿಕಿತ್ಸಾ ತಜ್ಞ ಡಾ. ರಜತ್ ಇದ್ದರು. ವಿಮಾ ವಿಭಾಗದ ಜಗನ್ನಾಥ್‌ ನಿರೂಪಿಸಿದರು.

ಶಿಬಿರದಲ್ಲಿ ಮಂಗಳೂರು ಅತ್ತಾವರ ಕೆಎಂ.ಸಿ ಆಸ್ಪತ್ರೆಯ ಸಂಧಿವಾತ ತಜ್ಞ ಡಾ.ಶಿವರಾಜ್ ಪಡಿಯಾರ್ ಮತ್ತು ಪ್ರತ್ಯೂಷ ಮಣಿಕುಪ್ಪಂ ಭಾಗವಹಿಸಿದ್ದರು.

ಸಂಧಿವಾತ, ಅಸ್ಥಿ ಸಂಧಿವಾತ, ಮಕ್ಕಳ ಸಂಧಿವಾತ, ರುಮಟಾಯ್ಡ್, ಆರ್ಥೈಟಿಸ್, ಸ್ಟಾಂಡಿಲೋಆರ್ಥೈಟಿಸ್, ಸಿಸ್ಟಮಿಕ್ ಲೂಪಸ್‌ಎರಿಥೆಮಾಟೋಸಸ್, ಸೋರಿಯಾಸಿಸ್, ವಾಸ್ಕುಲೈಟಿಸ್ ಮುಂತಾದ ತೊಂದರೆಗಳಿಂದ ಬಳಲುತ್ತಿರುವವರು ಪಾಲ್ಗೊಂಡರು.