ಸಾರಾಂಶ
- ಯಾಂತ್ರೀಕೃತ ಭತ್ತ ನಾಟಿಗೆ ಚಾಲನೆ ನೀಡಿ ನಾಗರಾಜ್ - - - ಚನ್ನಗಿರಿ: ರೈತರಿಗೆ ಅನುಕೂಲವಾಗುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಯಾಂತ್ರೀಕೃತ ಭತ್ತ ಬೇಸಾಯಕ್ಕೆ ವ್ಯವಸ್ಥೆ ಮಾಡಿರುವುದು ರೈತರಿಗೆ ವರದಾನವಾಗಿದೆ ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಕಾಕನೂರು ಎಂ.ಬಿ.ನಾಗರಾಜ್ ಹೇಳಿದರು.
ತಾಲೂಕಿನ ಸಂತೆಬೆನ್ನೂರು ಯೋಜನಾ ಕಚೇರಿ ವ್ಯಾಪ್ತಿಯ ತಣಿಗೆರೆ ಗ್ರಾಮದ ರೈತ ವೇದಮೂರ್ತಿ ಅವರ ಜಮೀನಿನಲ್ಲಿ ಯಾಂತ್ರೀಕೃತ ಭತ್ತ ಬೇಸಾಯದ ನಾಟಿ ಮಾಡುವ ಯಂತ್ರ ಪ್ರಾತ್ಯಕ್ಷಿಕೆಗೆ ಚಾಲನೆ ನೀಡಿ ಅವರು ಮಾತನಾಡಿದರು.ಗ್ರಾಮಾಭಿವೃದ್ಧಿ ಯೋಜನೆ ಅಧ್ಯಕ್ಷರಾದ ಧರ್ಮಸ್ಥಳ ಕ್ಷೇತ್ರ ಧರ್ಮಾಧಿಕಾರಿ ಡಾ. ಡಿ.ವಿರೇಂದ್ರ ಹೆಗ್ಗಡೆ ಅವರು ಕೃಷಿಯಲ್ಲಿ ಕೂಲಿ ಆಳುಗಳ ಕೊರತೆಯಿಂದ ಆಗುತ್ತಿರುವ ಸಮಸ್ಯೆಗಳನ್ನು ಕಂಡಿದ್ದಾರೆ. ಈ ಹಿನ್ನೆಲೆ ಭತ್ತ ಕೃಷಿ ಮಾಡುವ ರೈತರು ಯಂತ್ರದ ಮೂಲಕ ಭತ್ತದ ಸಸಿ ನಾಟಿ ಮಾಡುವ ಯಂತ್ರವನ್ನು ಕಡಿಮೆ ದರದಲ್ಲಿ ಬಾಡಿಗೆಗೆ ನೀಡಿ ರೈತರಿಗೆ ನೆರವಾಗುತ್ತಿರುವ ಸೇವೆ ಶ್ಲಾಘನೀಯ ಎಂದರು.
ತಾಲೂಕು ರೈತ ಸಂಘದ ಮಾಜಿ ಉಪಾಧ್ಯಕ್ಷ ರಂಗಪ್ಪ ಮಾತನಾಡಿ, ಗದ್ದೆ ನಾಟಿ ಕಾರ್ಯಕ್ಕೆ ಕೂಲಿ ಆಳುಗಳ ಸಮಸ್ಯೆಗೆ ಪರಿಹಾರವಾಗಿ ಯಂತ್ರ ಬಳಕೆ ಸೂಕ್ತ. ಭತ್ತ ನಾಟಿ ಯಂತ್ರದಿಂದ ರೈತರಿಗೆ ಅನುಕೂಲವಾಗಿದೆ. ಕಡಿಮೆ ಖರ್ಚಿನಲ್ಲಿ ನಾಟಿ ಚುರುಕಿನ ಕೆಲಸ ಆಗುತ್ತಿರುವುದು ಒಳ್ಳೆಯ ಬೆಳವಣಿಗೆ. ಮುಂದಿನ ದಿನಗಳಲ್ಲಿ ಎಲ್ಲ ರೈತರು ಇದರ ಪ್ರಯೋಜನ ಪಡೆಯಬೇಕು. ಆಗ ಭತ್ತದ ನಾಟಿ ಮಾಡುವ ಕೆಲಸ ಬೇಗನೆ ಮುಗಿಸಬಹುದು ಎಂದರು.ಯೋಜನೆ ಮೇಲ್ವಿಚಾರಕ ಮಂಜುನಾಥ್, ಕೃಷಿ ಅಧಿಕಾರಿ ಅಜ್ಜಪ್ಪ, ಪ್ರಬಂಧಕರಾದ ದಿನೇಶ್, ವಲಯ ಮೇಲ್ವಿಚಾರಕಿ ಸುಧಾ, ಗ್ರಾಮದ ಪ್ರಮುಖರಾದ ರಂಗಸ್ವಾಮಿ, ನಾಗರಾಜ್, ಹಾಲೇಶ್, ಸಂದೀಪ್, ರಾಜು, ಚನ್ನಬಸಪ್ಪ, ಸುರೇಶ್, ಮಹೇಶ್, ಬಸವರಾಜ್, ಪರಮೇಶ್ವರಪ್ಪ ಹಾಜರಿದ್ದರು.
- - - -5ಕೆಸಿಎನ್ಜಿ3.ಜೆಪಿಜಿ:ತಣಿಗೆರೆ ಗ್ರಾಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಕಾಕನೂರು ಎಂ.ಬಿ.ನಾಗರಾಜ್ ಯಾಂತ್ರೀಕೃತ ಭತ್ತ ನಾಟಿಗೆ ಚಾಲನೆ ನೀಡಿದರು.