ಶ್ರೀಮಂತ ಕುಟುಂಬವಾದ್ರು, ಸಾಮಾನ್ಯರೊಂದಿಗೆ ಜೀವನ

| Published : Oct 13 2024, 01:01 AM IST

ಶ್ರೀಮಂತ ಕುಟುಂಬವಾದ್ರು, ಸಾಮಾನ್ಯರೊಂದಿಗೆ ಜೀವನ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ನಾನು ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದವನು. ಬಲದಿನ್ನಿ ನಾಡಗೌಡ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದರೂ ಸಾಮಾನ್ಯನಾಗಿ ಬಡವರ ಜೊತೆ ಬೆಳೆದಿದ್ದೇನೆ. ಅವರ ಕಷ್ಟಗಳನ್ನು ರೈತರ ಪರಿಸ್ಥಿತಿ ಏನು ಎಂಬುದರ ಬಗ್ಗೆ ತಿಳಿದಿದ್ದೇನೆ. ಆಡಂಭರದ ಜೀವನ ಯಾವತ್ತು ನಡೆಸಿದವನಲ್ಲ. ಬಡವರು, ರೈತರಲ್ಲಿ ದೇವರನ್ನು ಕಾಣುವ ಸ್ವಭಾವದವನು ನಾನು. ಹಾಗಾಗಿಯೇ ಜನರು ನನ್ನನ್ನು ಆರು ಬಾರಿ ಶಾಸಕನನ್ನಾಗಿ ಮಾಡಿದ್ದಾರೆ. ಕ್ಷೇತ್ರದ ಅಭಿವೃದ್ದಿಯ ಮೂಲಕ ಅವರ ಋಣ ತೀರಿಸುತ್ತೇನೆ ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ (ಅಪ್ಪಾಜಿ) ಅಂತರಾಳವನ್ನು ತೆರೆದಿಟ್ಟರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ನಾನು ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದವನು. ಬಲದಿನ್ನಿ ನಾಡಗೌಡ ಶ್ರೀಮಂತ ಕುಟುಂಬದಲ್ಲಿ ಹುಟ್ಟಿದರೂ ಸಾಮಾನ್ಯನಾಗಿ ಬಡವರ ಜೊತೆ ಬೆಳೆದಿದ್ದೇನೆ. ಅವರ ಕಷ್ಟಗಳನ್ನು ರೈತರ ಪರಿಸ್ಥಿತಿ ಏನು ಎಂಬುದರ ಬಗ್ಗೆ ತಿಳಿದಿದ್ದೇನೆ. ಆಡಂಭರದ ಜೀವನ ಯಾವತ್ತು ನಡೆಸಿದವನಲ್ಲ. ಬಡವರು, ರೈತರಲ್ಲಿ ದೇವರನ್ನು ಕಾಣುವ ಸ್ವಭಾವದವನು ನಾನು. ಹಾಗಾಗಿಯೇ ಜನರು ನನ್ನನ್ನು ಆರು ಬಾರಿ ಶಾಸಕನನ್ನಾಗಿ ಮಾಡಿದ್ದಾರೆ. ಕ್ಷೇತ್ರದ ಅಭಿವೃದ್ದಿಯ ಮೂಲಕ ಅವರ ಋಣ ತೀರಿಸುತ್ತೇನೆ ಎಂದು ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ (ಅಪ್ಪಾಜಿ) ಅಂತರಾಳವನ್ನು ತೆರೆದಿಟ್ಟರು.

ಪಟ್ಟಣದ ಹುಡ್ಕೋ ಬಡಾವಣೆಯ ಶ್ರೀ ಗವಿ ಸಿದ್ದೇಶ್ವರ ವೇದಿಕೆಯಲ್ಲಿ ತಮ್ಮ 67ನೇ ವರ್ಷದ ಜನ್ಮ ದಿನದ ಕಾರ್ಯಕ್ರಮದಲ್ಲಿ ನಾಗರಿಕರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. 1981ರಿಂದ ರಾಜಕೀಯ ಜೀವನ ಪ್ರಾರಂಭವಾಗಿದೆ. ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ, ಎಸ್.ಎಂ.ಕೃಷ್ಣಾ, ಜೆ.ಎಚ್.ಪಟೇಲ ಕಾಲದಲ್ಲಿ ಅವರ ಗರಡಿಯಲ್ಲಿ ಬೆಳೆದು ರಾಜಕಾರಣಕ್ಕೆ ಬಂದವನು. ರಾಜ್ಯದ ಮತಕ್ಷೇತ್ರಗಳ ಶ್ರೇಯೋಭಿವೃದ್ಧಿಗೆ ಮತ್ತು ಜನರ ಕಷ್ಟ ಸುಖಕ್ಕೆ ಸ್ಪಂದಿಸುವ ಮೂಲಕ ಜನಪರ ಆಡಳಿತ ನಡೆಸುವ ಉದ್ದೇಶವಾಗಿತ್ತು. ಇಂದು ರಾಜಕಾರಣ ಎಂದರೆ ಸ್ವಾರ್ಥ, ವೈಷಮ್ಯ ಹಾಗೂ ಅಧಿಕಾರಿಗಳ ವರ್ಗಾವಣೆ ಮಾಡುವುದಕ್ಕಾಗಿ ರಾಜಕೀಯಕ್ಕೆ ಬರಬೇಕಾಗಿದೆ. ಅಂದಿನ ರಾಜಕಾರಣಕ್ಕೂ ಇಂದಿನ ರಾಜಕಾರಣಕ್ಕೂ ತುಂಬ ವ್ಯತ್ಯಾಸವಿದೆ. ಹೀಗಾಗಿಯೇ ನಿಜವಾದ ಮಾನವಿಯ ಮೌಲ್ಯ ಇಲ್ಲದೇ ಲುಷಿತವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.ಜನರಿಗಾಗಿ ಜನರಗೋಸ್ಕರ ಭಾರತದ ಸಂವಿದಾನ ರಚಿತಗೊಂಡಿದೆ ಎಂಬುದನ್ನು ಅರಿತು ಜನರ ಒಳಿತಿಗಾಗಿ ಜನಪರ ಆಡಳಿತ ನೀಡುವ ಜನಪ್ರತಿನಿಧಿಯಾಗಬೇಕು. ಅಲ್ಲಿಂದ, ಇಲ್ಲಿತನಕವೂ ನಾನು ಒಂದೇ ಪಕ್ಷದಲ್ಲಿದ್ದು ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದೇನೆ, ನನಗೆ ಮಂತ್ರಿ ಮಾಡಿಲ್ಲ ಎಂಬ ಬೇಸರ ನನ್ನನ್ನು ಕಾಡುತ್ತಿತ್ತು. ಆದರೆ, ನಾನು ಎಂದು ಪಕ್ಷವಿರೋಧಿ ಚಟುವಟಿಕೆ ನಡೆಸಿ ದ್ರೋಹ ಬಗೆಯಲಿಲ್ಲ. ಇಂದು ಯುವ ಮುಖಂಡರು ಕಾರ್ಯಕರ್ತರು ಅಸಮದಾನ ಮಾಡಿಕೊಳ್ಳುವುದು ಸಹಜ ಎಂದರು.ರಾಜ್ಯದಲ್ಲಿ ನಮ್ಮದೇ ಸರ್ಕಾರ ಅಧಿಕಾರದಲ್ಲಿದೆ. ಸಿಎಂ ಸಿದ್ರಾಮಯ್ಯನವರು ಜನಪರ ಆಡಳಿತ ನೀಡುತ್ತಿದ್ದಾರೆ, ಸರ್ಕಾರ ಬಂದ ಕೆಲವೇ ದಿನಗಳಲ್ಲಿ ಎಲ್ಲ ಅಭಿವೃದ್ಧಿ ಮಾಡಲು ಯಾವ ಸರ್ಕಾರಕ್ಕೂ ಸಾಧ್ಯವಿಲ್ಲ, ಅಭಿವೃದ್ಧಿ ವಿಷಯದಲ್ಲಿ ಸ್ವಲ್ಪ ನಿಧಾನ ಸಾಮಾನ್ಯ. ಮುಂದಿನ ಬಜೆಟ್‌ನಲ್ಲಿ 4 ಲಕ್ಷ ಕೋಟಿಗೂ ಮೀರಿ ಬಜೆಟ್‌ ಮಂಡನೆಯಾಗಲಿದೆ. ಆಗ ಯಾವ ಮತಕ್ಷೇತ್ರಕ್ಕೆ ಎಷ್ಟು ಅನುದಾನ ಬೇಕೋ ನೀರಾವರಿ, ರಸ್ತೆ, ಕುಡಿಯುವ ನೀರು ಹೀಗೆ ಅನುದಾನ ಹರಿದು ಬರಲಿದೇ ಎಂದು ಹೇಳಿದರು.

ಯುವಕರು ಚುನಾವಣೆಗಳು ಬಂದಾಗ ಮಾತ್ರ ಭಾಗವಹಸಿ. ಪ್ರಸ್ತುತ ಕಲುಷಿತ ರಾಜಕೀಯ ವ್ಯವಸ್ಥೆಯಲ್ಲಿ ತಮ್ಮ ಮನೆ ಮಠಗಳನ್ನು ಬಿಟ್ಟು ರಾಜಕಾರಣವನ್ನೇ ವೃತ್ತಿಯಾಗಿ ಮಾಡಿಕೊಂಡು ಭವಿಷ್ಯವನ್ನು ಹಾಳು ಮಾಡಿಕೊಳ್ಳಬೇಡಿ, ಯಾವುದಾದರೂ ಉದ್ಯೋಗ ಮಾಡಿ ಶಿಕ್ಷಣವಂತರಾಗಿ ಉತ್ತನ ನಾಗರಿಕರಾಗಿ ಬೆಳೆಯಲು ಪ್ರಯತ್ನಿಸಿ ಎಂದರು.ಮುದ್ದೇಬಿಹಾಳ, ತಾಳಿಕೋಟಿ, ನಾಲತವಾಡ ನಗರಗಳ ಮುಖಂಡರು, ಗಣ್ಯರು, ಪಕ್ಷಾತೀತವಾಗಿ ಎಲ್ಲರೂ ಒಗ್ಗಟ್ಟಾಗಿ ಹುಟ್ಟುಹಬ್ಬ ಆಚರಿಸುವ ಮೂಲಕ ಅಪಾರ ಗೌರವ ನೀಡಿದ್ದೀರಿ. ಕುಟುಂಬದ ಪರವಾಗಿ ಎಲ್ಲರಿಗೂ ಹೃದಯಪೂರ್ವಕವಾಗಿ ಧನ್ಯವಾದಗಳನ್ನು ತಿಳಿಸಿದರು.ಈ ವೇಳೆ ಬಸವನ ಬಾಗೇವಾಡಿಯ ಇಂಗಳೇಶ್ವರ ಹೋರಿಮಟ್ಟ ಗುಡ್ಡದ ತ್ರಿವಿಧ ದಾಸೋಹಿ ಶ್ರೀ ಚನ್ನಬಸವ ಸ್ವಾಮೀಜಿ, ಕುಂಟೋಜಿ ಹಿರೇಮಠ ಸಂಸ್ಥಾನ ಡಾ.ಗುರು ಚನ್ನವೀರ ಸ್ವಾಮೀಜಿಗಳು ಮಾತನಾಡಿ, ಸಿ.ಎಸ್.ನಾಡಗೌಡರು ರಾಜ್ಯದ 224 ಕ್ಷೇತ್ರಗಳಲ್ಲಿನ ರಾಜಕಾರಣದಲ್ಲಿ ಒಂದು ಕಪ್ಪು ಚುಕ್ಕೆ ಇಲ್ಲದ ಹಿರಿಯ ಹಾಗೂ ಸಜ್ಜನಿಕೆಯ ರಾಜಕಾರಣಿಯಾಗಿದ್ದಾರೆ. ಯಾವುದೇ ಜಾತಿ ಮತ, ಪಂಥ ಎನ್ನದೇ ಸರ್ವರೂ ಒಂದೇ ಎನ್ನುವ ಬಸವಾದಿ ಶರಣ ಆದರ್ಶಗಳನ್ನು ಮೈಗೂಡಿಸಿಕೊಂಡು ಜನಸೇವಕರಾಗಿ ದಾನಶೂರರಾಗಿ ಉತ್ತಮ, ಆಡಳಿತ ನೀಡಿದ್ದಾರೆ. 67 ವರ್ಷ ಹೇಗೆ ಕಳೆಯಿತು ಎಂಬುದು ಗೊತ್ತಾಗಲಿಲ್ಲ. ಅವರ ಸಾಮಾಜಿಕ ಕಾರ್ಯಕ್ಕೆ ಇನ್ನಷ್ಟು ಶಕ್ತಿ ನೀಡಲಿ ಎಂದು ಹಾರೈಸಿದರು.ಈ ವೇಳೆ ಬಿ.ಎಸ್‌.ಪಾಟೀಲ(ಯಾಳಗಿ), ಮುಖಂಡರಾದ ಎಂ.ಬಿ.ನಾವದಗಿ, ಶರಣು ಸಜ್ಜನ, ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ಸಂಗಣ್ಣ ಬಿರಾದಾರ(ಜಟಿಸಿ), ಬಸವರಾಜ ಮೋಟಗಿ, ತಾಲೂಕು ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ಕೆಯುಸಿ ಬ್ಯಾಂಕಿನ ಅಧ್ಯಕ್ಷ ಸತೀಶ ಓಸ್ವಾಲ್, ಪಿಎಲ್ ಡಿ ಬ್ಯಾಂಕ್‌ ಅಧ್ಯಕ್ಷ ಬಿ.ಕೆ.ಬಿರಾದಾರ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ರಾಯನಗೌಡ ತಾತರಡ್ಡಿ, ಗುರುಸ್ವಾಮಿ ಬೂದಿಹಾಳಮಠ, ರಾಜು ಕರಡ್ಡಿ, ಸುರೇಶ ಪಾಟೀಲ, ರುದ್ರಗೌಡ ಅಂಗಡಗೇರಿ, ತಾಳಿಕೋಟಿ ಮುಖಂಡರಾದ ಪ್ರಭುಗೌಡ ಮದರಕಲ್ಲ, ಸಿದ್ದನಗೌಡ ಪಾಟೀಲ, ಬಾಬುರಾವ ಶಿಂಧೆ, ಹಂಪಿ ಹಿರೇಮಠ, ಬಿ.ಎನ್.ಹಿಪ್ಪರಗಿ, ಸಿ.ಎಸ್.ಮಾಳಿ, ವೈ.ಎಚ್.ವಿಜಯಕರ, ಸಿ.ಬಿ.ಅಸ್ಕಿ, ಗಣೇಶ ಅನ್ನಗೋನಿ ಮುಂತಾದವರು ಹಾಜರಿದ್ದರು.

ಕೋಟ್‌

ನನ್ನ ಕಿರುಬೆರಳು ಹಿಡಿದು ಬರುವವರೆಲ್ಲ ಇಂದು ನಾನು ಸಿಎಂ ಆಗುತ್ತೇನೆ ಎಂದು ಓಡಾಡುತ್ತಿದ್ದಾರೆ. ಇಂದು ಗಿಡದಿಂದ ಗಿಡಕ್ಕೆ ಹಾರುವ ಮಂಗನಂತೆ ಒಂದು ಪಕ್ಷದಿಂದ ಇನ್ನೊಂದು ಪಕ್ಷ, ಅವಕಾಶವಾದಿ ರಾಜಕಾರಣಿಗಳು ಹೆಚ್ಚಾಗಿದ್ದಾರೆ. ಅಂದು ರಾಮಕೃಷ್ಣ ಹೆಗಡೆಯವರು ಜನತಾದಳಕ್ಕೆ ಬರಬೇಕೆಂದು ಒತ್ತಾಯಿಸಿದರು. ನೀನು ನಮ್ಮ ಪಕ್ಷಕ್ಕೆ ಬಂದರೆ ಉನ್ನತ ಖಾತೆಯ ಮಂತ್ರಿಯನ್ನಾಗಿ ಮಾಡುತ್ತೇನೆ ಎಂದು ಭರವಸೆಯನ್ನು ನೀಡಿದ್ದರು. ಆದರೆ, ನಾನು ಕಾಂಗ್ರೆಸ್‌ ಬಿಟ್ಟು ಹೋಗಲಿಲ್ಲ. ಪಕ್ಷನಿಷ್ಠನಾಗಿ ಇನ್ನು ಇಲ್ಲಿಯೇ ಇದ್ದೇನೆ.

ಸಿ.ಎಸ್‌.ನಾಡಗೌಡ(ಅಪ್ಪಾಜಿ), ಶಾಸಕ, ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ