ಸಾರಾಂಶ
ಟೈರ್ ಪಂಚರ್ ಆಗಿ ನಿಯಂತ್ರಣ ತಪ್ಪಿ ರಸ್ತೆ ಮೇಲೆ ಬಿದ್ದ ಬೈಕ್ ಸವಾರನ ಮೇಲೆ ಅಪರಿಚಿತ ವಾಹನ ಹರಿದು ಸವಾರ ಸಾವಿಗೀಡಾದ ಘಟನೆ ತಾಲೂಕಿನ ಕರೆ ಕ್ಯಾತನಹಳ್ಳಿ ರಸ್ತೆಯಲ್ಲಿ ನಡೆದಿದೆ
ಪಾವಗಡ : ಟೈರ್ ಪಂಚರ್ ಆಗಿ ನಿಯಂತ್ರಣ ತಪ್ಪಿ ರಸ್ತೆ ಮೇಲೆ ಬಿದ್ದ ಬೈಕ್ ಸವಾರನ ಮೇಲೆ ಅಪರಿಚಿತ ವಾಹನ ಹರಿದು ಸವಾರ ಸಾವಿಗೀಡಾದ ಘಟನೆ ತಾಲೂಕಿನ ಕರೆ ಕ್ಯಾತನಹಳ್ಳಿ ರಸ್ತೆಯಲ್ಲಿ ನಡೆದಿದೆ. ಮೃತ ಸವಾರನನ್ನ ಕುಮಾರ್ (28) ಎಂದು ಗುರುತಿಸಲಾಗಿದೆ.
ಅರಸೀಕೆರೆ ಗ್ರಾಮದ ವಾಸಿ ಕುಮಾರ್ ಜೆಸಿಬಿ ಚಾಲಕನಾಗಿ ಜೀವನ ನಡೆಸುತ್ತಿದ್ದರು. ಶ್ರಾವಣಮಾಸದ ಹಿನ್ನಲೆಯಲ್ಲಿ ಶನಿವಾರ ಪಾವಗಡ ಪಟ್ಟಣದ ಶ್ರೀ ಶನಿಮಹಾತ್ಮ ಸ್ವಾಮಿ ದರ್ಶನಕ್ಕೆ ಬಂದಿದ್ದರು. ದೇವರ ಪೂಜೆ ಬಳಿಕ ಸ್ವಗ್ರಾಮ ಅರಸೀಕೆರೆ ಗ್ರಾಮಕ್ಕೆ ವಾಪಸ್ ವಾಪಸ್ಸಾಗುತ್ತಿದ್ದ ವೇಳೆ ಕರೆಕ್ಯಾತನಹಳ್ಳಿ ರಸ್ತೆಯಲ್ಲಿ ದ್ವಿಚಕ್ರ ವಾಹನದ ಟೈರ್ ಪಂಕ್ಚರ್ ಆಗಿ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದಿದ್ದಾರೆ. ಇದೇ ವೇಳೆ ರಸ್ತೆ ಮಾರ್ಗದಲ್ಲಿ ಬರುತ್ತಿದ್ದ ದೊಡ್ಡ ವಾಹನವೊಂದು ನೆಲಕ್ಕೆ ಬಿದ್ದಿದ್ದ ಬೈಕ್ ಸಾವರನ ತಲೆ ಮೇಲೆ ಹತ್ತಿದ ಪರಿಣಾಮ ಆತ ಸ್ಥಳದಲ್ಲೇ ಸಾವನ್ನಪಿರುವುದಾಗಿ ತಿಳಿದುಬಂದಿದೆ.
ಘಟನೆ ಮಾಹಿತಿ ತಿಳಿದು ತಾಲೂಕಿನ ಅರಸೀಕೆರೆ ಠಾಣೆಯ ಪಿಎಸ್‌ಐ ತಾರಾಸಿಂಗ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಾಗಿದೆ.