ಸಾರಾಂಶ
ಕನ್ನಡಪ್ರಭ ವಾರ್ತೆ ರಿಪ್ಪನ್‌ಪೇಟೆ
14 ಮತ ಕದ್ದುಕೊಂಡು ಗದ್ದಿಗೆ ಏರಿದವರು ಪ್ರಜಾಪ್ರಭುತ್ವಕ್ಕೆ ಧಕ್ಕೆ ತಂದಿದ್ದಾರೆ. ಜನರ ಹಕ್ಕು ಕದ್ದುಕೊಂಡು ಕುರ್ಚಿಯಲ್ಲಿ ಕೂತವರೇ ನಿಮ್ಮ ದಿನಗಳು ಎಣಿಕೆಯಲ್ಲಿವೆ ಎಂದು ಜಿಲ್ಲಾ ಮಹಿಳಾ ಕಾಂಗ್ರೆಸ್ ಅದ್ಯಕ್ಷೆ ಶ್ವೇತಾ ಬಂಡಿ ತೀವ್ರವಾಗಿ ಕೇಂದ್ರದ ಬಿಜೆಪಿ ಸರ್ಕಾರವನ್ನು ತರಾಟೆಗೆ ತಗೆದುಕೊಂಡರು.ಈ ಆಭಿಯಾನವನ್ನು ಶಾಸಕ ಗೋಪಾಲಕೃಷ್ಣ ಬೇಳೂರು ಇವರ ಮಾರ್ಗದರ್ಶದಂತೆ ಸೋಮವಾರ ಸಂಜೆ ರಿಪ್ಪನ್‍ಪೇಟೆಯ ವಿನಾಯಕ ಸರ್ಕಲ್ ನಲ್ಲಿ ನಡೆದ ``ವೋಟ್ ಚೋರ್ ಗದ್ದಿ ಚೋಡ್’’ ಸಹಿ ಸಂಗ್ರಹ ಅಭಿಯಾನದಲ್ಲಿ ಮಾತನಾಡಿ, ಜನರ ಪವಿತ್ರ ಮತವನ್ನು ಕಳವು ಮಾಡಿಕೊಂಡು ಅಧಿಕಾರದಲ್ಲಿರುವುದು ಪ್ರಜಾಪ್ರಭುತ್ವದ ಮೇಲಿನ ದೊಡ್ಡ ಅಪರಾಧ ಈ ಕಳಂಕದ ವಿರುದ್ದ ಕಾಂಗ್ರೆಸ್ ಪಕ್ಷ ಜನಶಕ್ತಿ ಬಳಸಿ ಹೋರಾಟ ಅರಂಭಿಸಿದೆ. ಮತದ ಗೌರವ ಕಾಪಾಡುವ ಹೋರಾಟದಲ್ಲಿ ಪ್ರತಿಯೊಬ್ಬ ಪ್ರಜೆಯೂ ಕೈಜೋಡಿಸಬೇಕು ಎಂದ ಅವರು ಪ್ರಜಾಪ್ರಭುತ್ವ ಉಳಿಸುವ ಹೋರಾಟ ಕಾಂಗ್ರೆಸ್ ಕರ್ತವ್ಯವಲ್ಲ ಜನರ ಶಪಥ ಎಂದು ಘೋಷಿಸಿದರು.
ಸತ್ಯವನ್ನು ಒತ್ತಿ ಮುಚ್ಚಲು ಯತ್ನಿಸುವ ಅಧಿಕಾರಿಗಳಿಗೆ ಜನರಕೋಪ ತಟ್ಟದೇ ಇರದು. ಕಾಂಗ್ರೆಸ್ ಪಕ್ಷ ಪ್ರಜಾಪ್ರಭುತ್ವದ ಪರವಾಗಿ ಸತ್ಯದ ಪರವಾಗಿ ಹೋರಾಟ ಮುಂದುವರಿಸುತ್ತದೆ. ಮತಕದ್ದುಕೊಂಡು ಗದ್ದಿಗೆ ಕೂತವರು ಜನರ ನ್ಯಾಯಾಲಯದಲ್ಲಿ ತಪ್ಪಿತಸ್ಥರಾಗುತ್ತಾರೆ ಎಂದು ಹೇಳಿದರು.``ವೋಟ್ ಚೋರ್ ಗದ್ದಿ ಚೋಡ್’’ ಸಹಿ ಸಂಗ್ರಹ ಅಭಿಯಾನದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಂಡಿ ರಾಮಚಂದ್ರ, ತಾಲೂಕು ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಚಂದ್ರುಮೌಳಿಗೌಡರು, ಎ.ಪಿ.ಎಂ.ಸಿ.ಮಾಜಿ ಅಧ್ಯಕ್ಷ ಹೆಚ್.ವಿ.ಈಶ್ವರಪ್ಪಗೌಡ, ಕಾಂಗ್ರೆಸ್ ಘಟಕದ ಅಧ್ಯಕ್ಷ ಗಣಪತಿ, ಮುಖಂಡರಾದ ಡಿ.ಈ.ಮಧುಸೂದನ್, ಆಶಿಫ್‍ಭಾಷಾ, ಅರ್.ವಿ.ನಿರೂಫ್, ಸಾಕಮ್ಮ, ವಾಣಿ ಗೋವಿಂದಪ್ಪಗೌಡ, ಹಾಗೂ ಪಕ್ಷದ ಕಾರ್ಯಕರ್ತರು ಮುಖಂಡರು ಹಾಜರಿದ್ದರು.