70ರ ಕಾಲಘಟ್ಟದ ಕಥೆ ಆಗಿದೆ. ಕ್ರಾಂತಿಕಾರಿ ಯುವಕನ ಪಾತ್ರದಲ್ಲಿ ಸತೀಶ್ ನೀನಾಸಂ ಇದ್ದಾರೆ.

ಹೊಸಪೇಟೆ: ಕಾಂತಾರ ಚಿತ್ರ ಖ್ಯಾತಿಯ ನಟಿ ಸಪ್ತಮಿ ಗೌಡ ಹಾಗೂ ನಾಯಕ, ನಿರ್ಮಾಪಕ ನೀನಾಸಂ ಸತೀಶ್ ನಟಿಸಿರುವ ರೈಸ್ ಆಫ್ ಅಶೋಕ ಮುಂದಿನ ವರ್ಷ ಫೆಬ್ರವರಿ ಎರಡನೇ ವಾರದಲ್ಲಿ ಬಿಡುಗಡೆಯಾಲಿದೆ ಎಂದು ಚಿತ್ರ ನಟ ನೀನಾಸಂ ಸತೀಶ್ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ಚಿತ್ರದಲ್ಲಿ ಸಪ್ತಮಿ ಗೌಡ ಮತ್ತು ಸತೀಶ್ ನೀನಾಸಂ ಅಭಿನಯದ ಈ ಚಿತ್ರ 70ರ ಕಾಲಘಟ್ಟದ ಕಥೆ ಆಗಿದೆ. ಕ್ರಾಂತಿಕಾರಿ ಯುವಕನ ಪಾತ್ರದಲ್ಲಿ ಸತೀಶ್ ನೀನಾಸಂ ಇದ್ದಾರೆ. ಸಪ್ತಮಿ ಗೌಡ ಇಲ್ಲಿ ಸತೀಶ್‌ಗೆ ಜೋಡಿ ಆಗಿದ್ದಾರೆ.

ಸತೀಶ್ ನೀನಾಸಂ ಸಿನಿಮಾ ಕರಿಯರ್ ಅಲ್ಲಿ ಈ ಚಿತ್ರ ಅತಿದೊಡ್ಡ ಚಿತ್ರವೇ ಆಗಿದೆ. ಬಹುಕೋಟಿ ಬಜೆಟ್ ನಲ್ಲಿಯೇ ಈ ಚಿತ್ರ ತಯಾರಾಗಿದೆ. ಈ ಚಲನಚಿತ್ರವು ಕನ್ನಡ, ತೆಲುಗು, ತಮಿಳು ಭಾಷೆಯಲ್ಲೂ ಮೂಡಿ ಬರಲಿದೆ ಎಂದರು.

ಈ ಚಿತ್ರದ ಕಥೆಯನ್ನು ದಯಾನಂದ್ ಬರೆದಿದ್ದಾರೆ. ನಿರ್ಮಾಪಕರಾಗಿ ವರ್ಧನ ಹರಿ, ಪೂರ್ಣಚಂದ್ರ ತೇಜಸ್ವಿ ಸಂಗೀತವಿದೆ. ಲವಿತ್ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದಾರೆ. ವಿಕ್ರಮ್ ಮೋರ್ ಹಾಗೂ ರವಿ ವರ್ಮ ಸಾಹಸ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಬಿ.ಸುರೇಶ್, ಸಂಪತ್ ಮೈತ್ರೇಯಾ, ರವಿಶಂಕರ್, ಅಚ್ಯುತಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಮಂಜು ಅಭಿನಯಿಸಿದ್ದಾರೆ ಎಂದರು.ಹೊಸಪೇಟೆಯಲ್ಲಿ ಗುರುವಾರ ಕಾಂತಾರ ಖ್ಯಾತಿಯ ಸಪ್ತಮಿಗೌಡ, ನೀನಾಸಂ ಸತೀಶ್ ಆಗಮಿಸಿದ್ದರು.