ರಿಷಿಕಾಂತ್ ಚಿಗುರುಪಾಟಿಗೆ ಡೈರೆಕ್ಟರ್ಸ್‌ ಗೋಲ್ಡ್ ಮೆಡಲ್ ಗೌರವ

| Published : Sep 01 2025, 01:04 AM IST

ರಿಷಿಕಾಂತ್ ಚಿಗುರುಪಾಟಿಗೆ ಡೈರೆಕ್ಟರ್ಸ್‌ ಗೋಲ್ಡ್ ಮೆಡಲ್ ಗೌರವ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಪ್ರತಿಭಾವಂತ ವಿದ್ಯಾರ್ಥಿ ರಿಷಿಕಾಂತ್ ಚಿಗುರುಪಾಟಿ ಪಾಟ್ನಾದ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ (ಐಐಟಿ)ಯಲ್ಲಿ ಬಿಟೆಕ್ (ಕಂಪ್ಯೂಟರ್ ಸೈನ್ಸ್ ಆ್ಯಂಡ್‌ ಎಂಜಿನಿಯರಿಂಗ್) ಪದವಿಯಲ್ಲಿ ಮೂರನೇ ರ‍್ಯಾಂಕ್ ಗಳಿಸಿ ಡೈರೆಕ್ಟರ್ಸ್‌ ಗೋಲ್ಡ್ ಮೆಡಲ್ ಹಾಗೂ ಶ್ರೀ ಕೇದಾರ್‌ನಾಥ ದಾಸ್ ಮೆಮೋರಿಯಲ್ ಸಿಲ್ವರ್ ಮೆಡಲ್ ಪಡೆದಿದ್ದಾನೆ.

ಕನ್ನಡಪ್ರಭ ವಾರ್ತೆ ಕಂಪ್ಲಿ

ರಿಷಿಕಾಂತ್, ಕೃಷ್ಣ ಚಿಗುರುಪಾಟಿ ಹಾಗೂ ವೃತಿಕಾ ಚಿಗುರುಪಾಟಿ ದಂಪತಿಯ ಪುತ್ರ. ಬಾಲ್ಯದಿಂದಲೇ ವಿದ್ಯಾಭ್ಯಾಸದಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದ ಅವರು ದಾವಣಗೆರೆಯ ಯುರೋ ಕಿಡ್ಸ್ ಶಾಲೆಯಲ್ಲಿ ಪ್ರಾಥಮಿಕ, ತರಳಬಾಳು ಶಾಲೆಯಲ್ಲಿ 9 ಮತ್ತು 10ನೇ ತರಗತಿ, ಬೆಂಗಳೂರಿನ ದೀಕ್ಷಾ ಕಾಲೇಜಿನಲ್ಲಿ ಪಿಯುಸಿ ಪೂರ್ಣಗೊಳಿಸಿ, ಆನಂತರ ಪಾಟ್ನಾದ ಐಐಟಿಯಲ್ಲಿ ಬಿಟೆಕ್ ವ್ಯಾಸಂಗ ಮಾಡಿದರು.

ಅಲ್ಲಿ ಅವರು ಮೂರನೇ ರ‍್ಯಾಂಕ್ ಪಡೆದು, ಕೇವಲ ಶೈಕ್ಷಣಿಕ ಸಾಧನೆ ಮಾತ್ರವಲ್ಲದೆ ಕ್ರೀಡೆ, ಸಾಂಸ್ಕೃತಿಕ, ಸಾಮಾಜಿಕ ಸೇವೆ, ಸಂಶೋಧನೆ, ಪ್ರಬಂಧ ಮಂಡನೆ ಹಾಗೂ ನಾಯಕತ್ವ ಕ್ಷೇತ್ರಗಳಲ್ಲಿಯೂ ಮೆರಗು ತೋರಿದ ಕಾರಣಕ್ಕೆ ಗೋಲ್ಡ್ ಮೆಡಲ್ ಹಾಗೂ ಸಿಲ್ವರ್ ಮೆಡಲ್‌ಗಳಿಗೆ ಅರ್ಹರಾದರು.

ಮಶೀನ್ ಲರ್ನಿಂಗ್ ಮತ್ತು ಎಐ ಕುರಿತು ಅವರ ಸಂಶೋಧನಾ ಪ್ರಬಂಧವು ಅಂತಾರಾಷ್ಟ್ರೀಯ ಸಮ್ಮೇಳನ ಪತ್ರಿಕೆಯಲ್ಲಿ (International Conference Journal) ಪ್ರಕಟಗೊಂಡಿದೆ. ಜೆಇಇ ಅಡ್ವಾನ್ಸ್ ಪರೀಕ್ಷೆಯಲ್ಲಿ 2543ನೇ ರ‍್ಯಾಂಕ್, ಕೆಸಿಇಟಿಯಲ್ಲಿ 18ನೇ ರ‍್ಯಾಂಕ್ ಗಳಿಸಿದ್ದೇ ಇವರ ಮತ್ತೊಂದು ಸಾಧನೆ.

ಪ್ರಸ್ತುತ ರಿಷಿಕಾಂತ್ ಗುರುಗಾಂವ್‌ನ ಸ್ಪಿಂಕ್ಲರ್ ಕಂಪನಿಯಲ್ಲಿ ಉದ್ಯೋಗನಿರತನಾಗಿದ್ದು, ಮುಂದಿನ ದಿನಗಳಲ್ಲಿ ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಲು ಗುರಿ ಹೊಂದಿದ್ದಾರೆ.