ಮನಸ್ಕ ಯುವಕರ ನೇತೃತ್ವದಲ್ಲಿ ನದಿ ಸ್ವಚ್ಛತೆ

| Published : Apr 01 2024, 12:50 AM IST / Updated: Apr 01 2024, 12:51 AM IST

ಸಾರಾಂಶ

ರಾಮದುರ್ಗ: ತಾಲೂಕಿನ ಜೀವನದಿ ಮಲಪ್ರಭೆ ಮಲೀನವಾಗಿದ್ದನ್ನು ಗಮನಿಸಿದ ಸಮಾನ ಮನಸ್ಕ ಯುವಕರು ಭಾನುವಾರ ಪಟ್ಟಣದ ವೆಂಕಟೇಶ್ವರ ದೇವಸ್ಥಾನದ ಸಮೀಪ ಮಲಪ್ರಭಾ ನದಿಯನ್ನು ಸ್ವಚ್ಛ ಮಾಡುವ ಮೂಲಕ ಗಮನ ಸೆಳೆದರು.

ಕನ್ನಡಪ್ರಭ ವಾರ್ತೆ ರಾಮದುರ್ಗತಾಲೂಕಿನ ಜೀವನದಿ ಮಲಪ್ರಭೆ ಮಲೀನವಾಗಿದ್ದನ್ನು ಗಮನಿಸಿದ ಸಮಾನ ಮನಸ್ಕ ಯುವಕರು ಭಾನುವಾರ ಪಟ್ಟಣದ ವೆಂಕಟೇಶ್ವರ ದೇವಸ್ಥಾನದ ಸಮೀಪ ಮಲಪ್ರಭಾ ನದಿಯನ್ನು ಸ್ವಚ್ಛ ಮಾಡುವ ಮೂಲಕ ಗಮನ ಸೆಳೆದರು.

ಸಮಾನ ಮನಸ್ಕ ಯುವಕರು ಸೇರಿ ಫೇಸ್‌ಬುಕ್ ಮತ್ತು ವ್ಯಾಟ್ಸಪ್ ಮುಖಾಂತರ ಪಟ್ಟಣದ ಜನರಿಗೆ ಮನವಿ ಮಾಡಿದ್ದರು. ಭಾನುವಾರ ಬೆಳಗ್ಗೆ ನೂರಾರು ಮಹಿಳೆಯರು ಮಕ್ಕಳು ಸೇರಿ ಎಲ್ಲ ವಯೋಮಾನದವರು ಆಗಮಿಸಿ ಸ್ವಚ್ಛತೆ ಕಾರ್ಯ ಕೈಗೊಂಡರು. ಇವರಿಗೆ ಪುರಸಭೆಯ ಸ್ವಚ್ಚತಾ ಸಿಬ್ಬಂದಿ ಕೈಜೋಡಿಸಿದರು.ಈ ವೇಳೆ ನದಿಯಲ್ಲಿ ದೇವರ ಪೂಜೆಗೆ ಬಳಸಿದ ಹೂ, ಮಾಲೆ, ಒಡೆದ ದೇವರ ಪೋಟೋ, ಹಳೆಯ ಬಟ್ಟೆ, ಗಾಜು, ನೀರಿನ ಪ್ಲಾಸ್ಟಿಕ್ ಬಾಟಲಿ ಸೇರಿದಂತೆ ಹಲವು ನಿರುಪಯುಕ್ತ ವಸ್ತುಗಳ ನದಿಯಲ್ಲಿದ್ದವು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೇಯಸ್, ಶಾಸಕರು ಮಲಪ್ರಭಾ ನದಿಯ ಹೂಳೆತ್ತುವ ಕೆಲಸ ಮಾಡುವ ಮೂಲಕ ನದಿಯ ಪಾತ್ರ ಹೆಚ್ಚಿಸಿರುವುದು ಸ್ವಾಗತಾರ್ಹ. ಆದರೆ ಈ ಭಾರಿ ಮಾತ್ರ ನದಿಯ ಸ್ವಚ್ಛತೆಗೆ ಗಮನ ಹರಿಸಿಲ್ಲ ಎಂದು ಹೇಳಿದರು.ಪುರಸಭೆಯ ಆರೋಗ್ಯ ಅಧಿಕಾರಿ ಚಂದನ ಪಾಟೀಲ ಮಾತನಾಡಿ, ಮಲಪ್ರಭಾ ನದಿಯ ಸ್ವಚ್ಛತೆಗೆ ಸಾರ್ವಜನಿಕರು ಸಹಕಾರ ನೀಡಬೇಕು. ಮೂಢನಂಬಿಕೆ ಬಿಟ್ಟು ಪೂಜೆಗೆ ಬಳಸಿದ ವಸ್ತುಗಳನ್ನು ನದಿಯಲ್ಲಿ ಎಸೆಯದೆ ನಿಮ್ಮ ಮನೆ ಬಾಗಿಲಿಗೆ ಬರುವ ಪುರಸಭೆಯ ವಾಹನದಲ್ಲಿ ಹಾಕಬೇಕು, ಯಾವದೇ ತ್ಯಾಜ್ಯ ನದಿಯಲ್ಲಿ ಎಸೆಯಬೇಡಿ ಎಂದು ಮನವಿ ಮಾಡಿದರು.