ಆರ್.ಎಂ. ಪಾಟೀಲರ ಸಮಾಜ ಸೇವೆ ಅಪಾರ: ಸಂಗಮೇಶ ಕಲೆಹಾಳ

| Published : Dec 18 2024, 12:50 AM IST

ಸಾರಾಂಶ

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಹಾಗೂ ವೈದ್ಯರಾಗಿ ಆರ್.ಎಂ. ಪಾಟೀಲ್ ಹಲವಾರು ಸಮಾಜಮುಖಿ ಕಾರ್ಯ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಕೊಪ್ಪಳ

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಹಾಗೂ ವೈದ್ಯರಾಗಿ ಆರ್.ಎಂ. ಪಾಟೀಲ್ ಹಲವಾರು ಸಮಾಜಮುಖಿ ಕಾರ್ಯ ಮಾಡಿದ್ದಾರೆ. ಆರ್.ಎಂ. ಪಾಟೀಲರ ಸಮಾಜ ಸೇವೆ ಅಪಾರವಾದುದು. ಅವರ ಅಗಲಿಕೆ ಜಿಲ್ಲೆಯ ಜನರಿಗೆ ನೋವು ತಂದಿದೆ ಎಂದು ನಿವೃತ್ತ ವೈದ್ಯಾಧಿಕಾರಿ ಸಂಗಮೇಶ ಕಲೆಹಾಳ ಹೇಳಿದರು.

ನಗರದ ಆರ್.ಎಂ. ಪಾಟೀಲರ ಮನೆಯಲ್ಲಿ ಜಿಲ್ಲಾ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಆರ್.ಎಂ.ಪಾಟೀಲರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಬಸವ ಸಮಿತಿ ಜಿಲ್ಲಾಧ್ಯಕ್ಷ ಬಸವರಾಜ್ ಬೊಳ್ಳೊಳ್ಳಿ ಮಾತನಾಡಿ, ಆರ್.ಎಂ. ಪಾಟೀಲ್ ಎಲ್ಲರನ್ನೂ ಸಮನಾಗಿ ಕಾಣುವ ಗುಣವುಳ್ಳವರಾಗಿದ್ದರು. ಅವರು ಹಳ್ಳಿ ಹಳ್ಳಿಗೆ ತೆರಳಿ ಜನರಲ್ಲಿ ಆರೋಗ್ಯ ಮತ್ತು ಶರಣರ ಸಾಹಿತ್ಯದ ಜಾಗೃತಿ ಮೂಡಿಸುತ್ತಿದ್ದರು ಎಂದರು.

ಸುನಂದಾ ಎಸ್. ಪಾಟೀಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಭಾವನಾ ಎಸ್. ಪಾಟೀಲ್ ವಚನ ಹಾಡಿದರು. ಜಾಗತಿಕ ಲಿಂಗಾಯತ ಮಹಾಸಭಾದ ಜಿಲ್ಲಾ ಕಾರ್ಯದರ್ಶಿ ರಾಜೇಶ್ ಸಸಿಮಠ ವಂದಿಸಿದರು.

ಜಿಲ್ಲಾ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಕಾರ್ಯದರ್ಶಿ ಸೋಮನಗೌಡ ಹೊಗರನಾಳ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ಕಾರ್ಯಕಾರಿ ಸಮಿತಿ ಸದಸ್ಯರು, ನಿವೃತ್ತ ಪೊಸ್ಟ್ ಮಾಸ್ಟರ್ ರವಿಕಾಂತನವರ್, ದಾನಪ್ಪ ಶೆಟ್ಟರ್, ಜಾಗತಿಕ ಲಿಂಗಾಯತ ಮಹಾಸಭಾದ ತಾಲೂಕು ಪ್ರಧಾನ ಕಾರ್ಯದರ್ಶಿ ಶರಣಬಸನಗೌಡ, ಆರ್.ಎಂ. ಪಾಟೀಲ್ ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಸೇರಿದಂತೆ ಇತರರು ಇದ್ದರು.