ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಆರ್‌ಎಂಎಂ ಬಣದ ಜಯಭೇರಿ

| Published : Jun 29 2024, 12:33 AM IST

ಸಾರಾಂಶ

ಶಿವಮೊಗ್ಗ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಆರ್. ಎಂ. ಮಂಜುನಾಥಗೌಡರ ಬಣದವರು ವಿಜಯದ ನಗೆ ಬೀರಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಪ್ರತಿಷ್ಠಿತ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ, ಕೆಪಿಸಿಸಿ ರಾಜ್ಯ ಸಹಕಾರ ಸೆಲ್ ನ ಸಂಚಾಲಕ ಆರ್. ಎಂ.ಮಂಜುನಾಥಗೌಡರ ಬಣ ಭರ್ಜರಿ ಜಯ ಸಾಧಿಸಿದೆ.

ಒಟ್ಟು 13 ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಸೇರಿ

ಮಂಜುನಾಥಗೌಡರ ಬಣದ 11 ಮಂದಿ ಗೆದ್ದರೆ, ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಲ್ಲಿ ಕೇವಲ ಒಬ್ಬರು ಮಾತ್ರ ಗೆಲುವು ಸಾಧಿಸಿದ್ದಾರೆ. ಯಾವ ಬಣಕ್ಕೂ ಸೇರದ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಗುಂಪಿನಲ್ಲಿ ಗುರುತಿಸಿಕೊಂಡಿದ್ದ ಓರ್ವರು ಗೆಲುವು ಸಾಧಿಸಿದ್ದಾರೆ.ಗೆಲುವು ಸಾಧಿಸಿದವರು:

ಶಿವಮೊಗ್ಗ ಉಪ ವಿಭಾಗ ಕ್ಷೇತ್ರ-1:

ಕೆ. ಪಿ. ದುಗ್ಗಪ್ಪಗೌಡ[13] ಅವರು ಶಿವನಂಜಪ್ಪ[12] ಅವರ ವಿರುದ್ಧ ಒಂದು ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ಶಿವಮೊಗ್ಗ ಉಪ ವಿಭಾಗದ ಕ್ಷೇತ್ರ-2:

ಹಾಲಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ[15] ಅವರು ವಿರೂಪಾಕ್ಷ[3] ಅವರ ವಿರುದ್ಧ 12 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದರು.

ಶಿವಮೊಗ್ಗ ಉಪ ವಿಭಾಗ ಕ್ಷೇತ್ರ-3:

ಎಸ್. ಕೆ. ಮರಿಯಪ್ಪ[39] ಅವರು ಎಸ್. ಪಿ. ದಿನೇಶ್ [16] ವಿರುದ್ಧ 23 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದರು.

ಶಿವಮೊಗ್ಗ ಉಪ ವಿಭಾಗ ಕ್ಷೇತ್ರ-4:

ಮಹಾಲಿಂಗ ಶಾಸ್ತ್ರಿ[47] ಯವರು ಕೆ. ಎಲ್. ಜಗದೀಶ್ವರ್ [45] ಅವರ ವಿರುದ್ಧ 2 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ಸಾಗರ ಉಪ ವಿಭಾಗ-1

ಜಿ. ಎನ್.ಸುಧೀರ್[23] ಅವರು ಬಿ. ಡಿ. ಭೂಕಾಂತ್ [21] ಅವರನ್ನು ಎರಡು ಮತಗಳ ಅಂತರದಿಂದ ಸೋಲಿಸಿದರು.

ಸಾಗರ ಉಪ ವಿಭಾಗ-2:

ಪಿ. ಎಲ್. ಬಸವರಾಜ್[32] ಅವರು ಹೆಚ್. ಎಸ್. ರವೀಂದ್ರ[21] ಅವರ ವಿರುದ್ಧ 11 ಮತಗಳ ಅಂತರದಿಂದ ಗೆಲುವು ದಾಖಲಿಸಿದರು.

ಸಾಗರ ಉಪ ವಿಭಾಗ-3:

ಟಿ. ಶಿವಶಂಕರಪ್ಪ [75] ಅವರು ಎಂ. ಡಿ. ಹರೀಶ್[61] ಅವರನ್ನು 14 ಮತಗಳ ಅಂತರದಿಂದ ಸೋಲಿಸಿದರು.

ಭದ್ರಾವತಿ ತಾಲೂಕು:

ಸಿ. ಹನುಮಂತಪ್ಪ[9] ಅವರು ಹೆಚ್. ಎಲ್. ಷಡಾಕ್ಷರಿ[7] ಅವರನ್ನು 2 ಮತಗಳ ಅಂತರದಿಂದ ಮಣಿಸಿದರು.

ತೀರ್ಥಹಳ್ಳಿ ತಾಲೂಕು:

ಬಸವಾನಿ ವಿಜಯದೇವ್[14] ಅವರು ಕೆ. ಎಸ್. ಶಿವಕುಮಾರ್[9] ವಿರುದ್ಧ 5 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ಸಾಗರ ತಾಲೂಕು:

ಶಾಸಕ ಬೇಳೂರು ಗೋಪಾಲಕೃಷ್ಣ [15] ಅವರು ರತ್ನಾಕರ್ ಹನಗೋಡು[14] ಅವರ ವಿರುದ್ಧ 1 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ಶಿಕಾರಿಪುರ ತಾಲೂಕು:

ಎಸ್. ಪಿ. ಚಂದ್ರಶೇಖರ ಗೌಡ[26] ಅವರು ಅಗಡಿ ಅಶೋಕ್ [11] ಅವರನ್ನು 15 ಮತಗಳ ಅಂತರದಿಂದ ಸೋಲಿಸಿದರು.

ಸೊರಬ ತಾಲೂಕು:

ಕೆ. ಪಿ.ರುದ್ರಗೌಡ[14] ಅವರು ಶಿವಮೂರ್ತಿಗೌಡ[10] ವಿರುದ್ಧ 4 ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ಹೊಸನಗರ ತಾಲೂಕು:

ಎಂ. ಎಂ. ಪರಮೇಶ್ ಅವಿರೋಧವಾಗಿ ಆಯ್ಕೆಯಾದರು.

ಒಟ್ಟು 621 ಮತಗಳು ಚಲಾವಣೆಯಾಗಿದ್ದು, ಇದರಲ್ಲಿ 5 ಮತಗಳು ತಿರಸ್ಕರಿಸಲ್ಪಟ್ಟಿವೆ.

ಖಾತೆ ತೆರೆದ ರಾಷ್ಟ್ರಭಕ್ತರ ಬಳಗ

ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಬಂಡೆದ್ದು ರಾಷ್ಟ್ರಭಕ್ತರ ಬಳಗದಿಂದ ಸ್ಪರ್ಧಿಸಿದ್ದ ಕೆ.ಎಸ್.ಈಶ್ವರಪ್ಪ ಅವರ ಜೊತೆ ಗುರುತಿಸಿಕೊಂಡಿದ್ದ ಮಹಾಲಿಂಗಶಾಸ್ತ್ರಿಯವರು ಅನಿರೀಕ್ಷಿತವಾಗಿ ಗೆಲುವು ಸಾಧಿಸಿದ್ದು, ಜಿಲ್ಲೆಯಲ್ಲಿ ಮೊದಲ ಬಾರಿಗೆ ರಾಷ್ಟ್ರಭಕ್ತರ ಬಳಗವು ಚುನಾವಣೆಯೊಂದರಲ್ಲಿ ಖಾತೆ ತೆರೆದಂತಾಗಿದೆ.

ಶಿವಮೊಗ್ಗ ಉಪ ವಿಭಾಗ ಕ್ಷೇತ್ರ-4 ರಲ್ಲಿ ಮಹಾಲಿಂಗ ಶಾಸ್ತ್ರಿ ಸ್ಪರ್ಧಿಸಿದ್ದರು. ಇಲ್ಲಿ ಮಂಜುನಾಥಗೌಡರ ಬಣದಿಂದ ಕೆ. ಎಲ್.ಜಗದೀಶ್ವರ್, ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಡಿ.ಆನಂದ ಮತ್ತು ಹಿರಿಯ ಸಹಕಾರಿ ಜೆಡಿಎಸ್ ಮುಖಂಡ ಜೆ. ಪಿ. ಯೋಗೀಶ್ ಸ್ಪರ್ಧಿಸಿದ್ದರು. ಇಲ್ಲಿ ಮಂಜುನಾಥಗೌಡರ ಬಣ ಗೆಲ್ಲುವ ನಿರೀಕ್ಷೆ ಇದ್ದು, ಮಹಾಲಿಂಗ ಶಾಸ್ತ್ರಿ ಯವರನ್ನು ಎರಡೂ ಬಣದವರು ಉಪೇಕ್ಷೆ ಮಾಡಿದ್ದರು. ಆದರೆ ಫಲಿತಾಂಶ ಬಂದಾಗ ಎಲ್ಲರಿಗೂ ಶಾಕ್! ಮಹಾಲಿಂಗ ಶಾಸ್ತ್ರಿ 47 ಮತ ಪಡೆದರು. ಎದುರಾಳಿಯಾಗಿದ್ದ ಕೆ. ಎಲ್. ಜಗದೀಶ್ವರ್ 45 ಮತ ಪಡೆದರೆ, ಡಿ. ಆನಂದ 16 ಮತ್ತು ಜಿ. ಪಿ. ಯೋಗೀಶ್ 14 ಪಡೆದರು.

ಬಿಜೆಪಿಗೆ ತೀವ್ರ ಮುಖಭಂಗ

ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿದೆ. ಈ ಬಾರಿ ಹೇಗಾದರೂ ಡಿಸಿಸಿ ಬ್ಯಾಂಕ್ ಕೈ ವಶ ಮಾಡಿಕೊಂಡು ಮಂಜುನಾಥಗೌಡರ ವಿರುದ್ಧ ಜಯ ಸಾಧಿಸಬೇಕೆಂದ ಬಿಜೆಪಿ ಯೋಜನೆ ವಿಫಲವಾಗಿದೆ. ಕೇವಲ ಒಂದು ಸ್ಥಾನ ಮಾತ್ರ ಗೆಲ್ಲಲು ಸಾಧ್ಯವಾಗಿದೆ.