ಲಾರಿ, ಬೈಕ್ ಮುಖಾಮುಖಿ ಡಿಕ್ಕಿ: ಒಂದೇ ಕುಟುಂಬದ ಐವರ ಸಾವು

| Published : Nov 03 2023, 12:32 AM IST

ಲಾರಿ, ಬೈಕ್ ಮುಖಾಮುಖಿ ಡಿಕ್ಕಿ: ಒಂದೇ ಕುಟುಂಬದ ಐವರ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಚಕ್ರ ವಾಹನವೊಂದರಲ್ಲೇ ಕುಟುಂಬದ ಐವರು ಪ್ರಯಾಣ ಮಾಡುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿಯಾದ ಪರಿಣಾಮ ದ್ವಿಚಕ್ರ ವಾಹನದ ಮೇಲಿದ್ದ ಐವರು ಸ್ಥಳದಲ್ಲಿ ಮೃತ ಪಟ್ಟ ಘಟನೆ ಅಫಜಲ್ಪುರ ಬಳೂರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಅಫಜಲ್ಪುರ: ದ್ವಿಚಕ್ರ ವಾಹನವೊಂದರಲ್ಲೇ ಕುಟುಂಬದ ಐವರು ಪ್ರಯಾಣ ಮಾಡುತ್ತಿದ್ದಾಗ ಎದುರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿಯಾದ ಪರಿಣಾಮ ದ್ವಿಚಕ್ರ ವಾಹನದ ಮೇಲಿದ್ದ ಐವರು ಸ್ಥಳದಲ್ಲಿ ಮೃತ ಪಟ್ಟ ಘಟನೆ ಅಫಜಲ್ಪುರ ಬಳೂರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಮೃತರೆಲ್ಲ ನೇಪಾಳ ಮೂಲದವರೆಂದು ಪ್ರಾಥಮಿಕ ಹಂತದ ಮಾಹಿತಿಯಲ್ಲಿ‌ ತಿಳಿದು ಬಂದಿದ್ದು, ಇವರೆಲ್ಲ ಬಳೂರ್ಗಿ ಗ್ರಾಮದಲ್ಲಿ ಇತ್ತಿಚಿಗೆ ಆರಂಭವಾಗಿದ್ದ ತಮ್ಮ ಸಂಬಂಧಿಕರ ಚೈನಿಸ್ ಫಾಸ್ಟ್ ಫುಡ್ ಅಂಗಡಿಯವನಿಗೆ ಭೇಟಿಯಾಗಲು ಬಂದಿದ್ದರು. ಭೇಟಿಯಾಗಿ ಮರಳಿ ಅಫಜಲ್ಪುರ ಪಟ್ಟಣದ ಕಡೆ ಹೊರಟಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಆಂದ್ರ ಪ್ರದೇಶ ಆರ್.ಟಿ.ಒ ಸಂಖ್ಯೆಯ ಲಾರಿಗೆ ದ್ವಿಚಕ್ರ ವಾಹನ ಡಿಕ್ಕಿಯಾಗಿದೆ. ಇಬ್ಬರು ಮಹಿಳೆಯರು, ಇಬ್ಬರು ಮಕ್ಕಳು ಹಾಗೂ ದ್ವಿಚಕ್ರ ವಾಹನ ಸವಾರ ಎಲ್ಲರೂ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಅಫಜಲ್ಪುರ ಪಿಎಸ್ಐ ಮಡಿವಾಳಪ್ಪ ಬಾಗೋಡಿ ಸೇರಿದಂತೆ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಪ್ರಕ್ರೀಯೆ ಮತ್ತು ಮೃತರ ಕುಟುಂಬಸ್ಥರನ್ನು ಸಂಪರ್ಕಿಸುವ ಕೆಲಸ ಮುಂದುವರಿಸಿದ್ದಾರೆ. ಮೃತರನ್ನೆಲ್ಲಾ ಪೋಸ್ಟ್ ಮಾರ್ಟ್ಂ ಮಾಡುವುದಕ್ಕಾಗಿ ಅಫಜಲ್ಪುರ ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ದ್ವಿಚಕ್ರ ವಾಹನ ಸವಾರ ಕುಡಿದ ಅಮಲಿನಲ್ಲಿದ್ದ, ಐವರನ್ನು ಒಂದೇ ವಾಹನದಲ್ಲಿ ಕರೆದುಕೊಂಡು ಹೋಗುವುದು ಸರಿಯಲ್ಲ ಎಂದು ಬಳೂರ್ಗಿ ಗ್ರಾಮದ ಫಾಸ್ಟ್ ಫುಡ್ ಅಂಗಡಿಯ ಬಳಿ ಇದ್ದವರು ಎಚ್ಚರಿಸಿದ್ದರು. ಜನರ ಎಚ್ಚರಿಕೆ ಮೀರಿ ದ್ವಿಚಕ್ರ ವಾಹನದಲ್ಲಿ ಐವರನ್ನು ಕರೆದುಕೊಂಡು ಹೋಗಿದ್ದು ದುರ್ಘಟನೆಗೆ ಕಾರಣವಾಗಿರಬಹುದು ಎಂದು‌ ಜನ ಶಂಕಿಸಿದ್ದಾರೆ.