ರಸ್ತೆ ಅಪಘಾತ: ಬೈಕ್‌ ಸವಾರರು ಸಾವು

| Published : Nov 08 2023, 01:03 AM IST

ಸಾರಾಂಶ

ಸುಂಟಿಕೊಪ್ಪ ಮಧುರಮ್ಮ ಬಡಾವಣೆಯ ನಿವಾಸಿಗಳಾದ ಏಳುಮಲೈ ಅವರ ಪುತ್ರ ಉದಯ(21) ಹಾಗೂ ದಿವಂಗತ ಗಣಪತಿ ಪೊನ್ನವ್ವ ಇವರ ಪುತ್ರ ಚಂದನ್ (20) ಮೃತರು ಎಂದು ಗುರುತಿಸಲಾಗಿದೆ.

ಸುಂಟಿಕೊಪ್ಪ: ಸೋಮವಾರ ತಡ ರಾತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಬೈಕ್ ಅಪಘಾತದಲ್ಲಿ ಇಬ್ಬರು ಮೃತಪಟ್ಟಿರುವ ಘಟನೆ ಅಂದಗೋವೆ ಜಂಕ್ಷನ್‌ ಬಳಿ ನಡೆದಿದೆ.

ಸುಂಟಿಕೊಪ್ಪ ಮಧುರಮ್ಮ ಬಡಾವಣೆಯ ನಿವಾಸಿಗಳಾದ ಏಳುಮಲೈ ಅವರ ಪುತ್ರ ಉದಯ(21) ಹಾಗೂ ದಿವಂಗತ ಗಣಪತಿ ಪೊನ್ನವ್ವ ಇವರ ಪುತ್ರ ಚಂದನ್ (20) ಮೃತರು ಎಂದು ಗುರುತಿಸಲಾಗಿದೆ. ಸುಂಟಿಕೊಪ್ಪಕ್ಕೆ ಆಗಮಿಸುತ್ತಿದ್ದಾಗ ಕೂರ್ಗಳ್ಳಿ ರೆಸಾರ್ಟ್ ಬಳಿಯ ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಹಾಗೂ ಹಿಬ್ಬಂದಿ ಸವಾರ ಹೆದ್ದಾರಿಯಲ್ಲಿ ಬೆಳೆದು ನಿಂತಿದ್ದ ಪೊದೆಯೊಳಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ. ತಡರಾತ್ರಿ ಘಟನೆ ನಡೆದ ಕಾರಣ ಮಂಗಳವಾರ ಮುಂಜಾನೆಯವರೆಗೆ ಯಾರ ಗಮನಕ್ಕೂ ಬಂದಿಲ್ಲ. ತೋಟಕ್ಕೆ ಕೂಲಿ ಕಾರ್ಮಿಕರನ್ನು ಸಾಗಿಸುವ ಜೀಪ್ ಚಾಲಕ ಅಪಘಾತ ನಡೆದಿರುವುದನ್ನು ಗಮನಿಸಿ ಕೂಡಲೇ ಪೊಲೀಸ್ ಠಾಣೆಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದರು. ಕುಶಾಲನಗರ ವೃತ್ತನಿರೀಕ್ಷಕರಾದ ರಾಜೇಶ್‌ ಕೋಟ್ಯಾನ್, ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿ ಎಂ.ಸಿ. ಶ್ರೀಧರ್ ಹಾಗೂ ಸಿಬ್ಬಂದಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಮರಣೋತ್ತರ ಪರೀಕ್ಷೆಯನ್ನು ನಡೆಸಿ ಮೃತದೇಹಗಳನ್ನು ಕುಟುಂಬದವರಿಗೆ

ಹಸ್ತಾಂತರಿಸಲಾಯಿತು.