ಸಾರಾಂಶ
ಕನಕಪುರ: ಪ್ರೇಮಿಗಳಿಬ್ಬರು ಕಾರಿನಲ್ಲಿ ತೆರಳುತ್ತಿರುವ ವೇಳೆ ಶಾಲಾ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಮೃತಪಟ್ಟಿರುವ ಘಟನೆ ತಾಲೂಕಿನ ಕೋಡಿಹಳ್ಳಿ ಮುಖ್ಯರಸ್ತೆ ಕೆಬ್ಬಳ್ಳಿ ಗ್ರಾಮದ ಬಳಿ ಸಂಭವಿಸಿದೆ. ಅಪಘಾತದಲ್ಲಿ ಮೃತಪಟ್ಟ ಪ್ರೇಮಿಗಳನ್ನು ಕೆಬ್ಬಳ್ಳಿ ಗ್ರಾಮದ ದೀಪು (25) ಹಾಗು ತಿಪ್ಪೂರು ಗ್ರಾಮದ ಶೈಲ(20) ಎಂದು ಗುರುತಿಸಲಾಗಿದೆ. ಕನಕಪುರಕ್ಕೆ ಕಾರಿನಲ್ಲಿ ಬಂದು ಮತ್ತೆ ವಾಪಸ್ಸು ತೆರಳುವ ವೇಳೆ ನಾರಾಯಣಪುರ ಮತ್ತು ಕೆಬ್ಬಳ್ಳಿ ಮಾರ್ಗಮಧ್ಯೆ ಎದುರಿನಿಂದ ಬಂದ ಶಾಲಾ ವಾಹನಕ್ಕೆ ಪ್ರೇಮಿಗಳಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಪ್ರೇಮಿಗಳು ಚಿಂತಾಜನಕ ಸ್ಥಿತಿಯಲ್ಲಿದ್ದ ವಿಷಯ ತಿಳಿದ ಕೋಡಿಹಳ್ಳಿ ಸಬ್ ಇನ್ಸ್‌ಪೆಕ್ಟರ್ ರವಿಕುಮಾರ್ ಮತ್ತು ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ರಕ್ತದ ಮಡುವಿನಲ್ಲಿದ್ದ ಇಬ್ಬರನ್ನೂ ಕೂಡಲೇ ದಯಾನಂದ ಸಾಗರ ಆಸ್ಪತ್ರೆಗೆ ಸಾಗಿಸಿದ್ದಾರೆ. ಶೈಲ ಮಾರ್ಗಮಧ್ಯದಲ್ಲಿಯೇ ಮೃತಪಟ್ಟರೆ, ದೀಪು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಯುವತಿ ಶೈಲಳ ತಂದೆ ಶಿವಬೊಮ್ಮೇಗೌಡ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
;Resize=(128,128))
;Resize=(128,128))
;Resize=(128,128))