ರಸ್ತೆ ಅಪಘಾತ: ಮಗುಚುತ್ತಿದ್ದ ಲಾರಿಯಿಂದ ಹಾರಿದ ಚಾಲಕ ಚಕ್ರಕ್ಕೆ ಸಿಲುಕಿ ಸಾವು

| Published : Jan 04 2025, 12:30 AM IST

ರಸ್ತೆ ಅಪಘಾತ: ಮಗುಚುತ್ತಿದ್ದ ಲಾರಿಯಿಂದ ಹಾರಿದ ಚಾಲಕ ಚಕ್ರಕ್ಕೆ ಸಿಲುಕಿ ಸಾವು
Share this Article
  • FB
  • TW
  • Linkdin
  • Email

ಸಾರಾಂಶ

ಚಾಲನೆ ಮಾಡುತ್ತಿದ್ದಾಗ ಲಾರಿ ಮಗುಚಿ ಬೀಳಬಹುದೆಂಬ ಮುಂದಾಲೋಚನೆಯಿಂದ ಲಾರಿಯಿಂದ ಹಾರಿದ ಚಾಲಕ ಲಾರಿಯ ಚಕ್ರಕ್ಕೆ ಸಿಲುಕಿ ಸ್ಥಳದಲ್ಲಿ ಮೃತ ಪಟ್ಟ ಘಟನೆ ಶುಕ್ರವಾರ ಮಧ್ಯಾಹ್ನ ಗುಡುಗಳಲೆ- ಬೆಳ್ಳಾರಳ್ಳಿ ತಿರುವುವಿನಲ್ಲಿ ನಡೆದಿದೆ. ಆಂಧ್ರಪ್ರದೇಶ ಮೂಲದ ಲಾರಿ ಚಾಲಕ ಸುಂಕಣ್ಣ (38) ಮೃತ ದುರ್ದೈವಿ.

ಕನ್ನಡಪ್ರಭ ವಾರ್ತೆ ಶನಿವಾರಸಂತೆ

ಚಾಲನೆ ಮಾಡುತ್ತಿದ್ದಾಗ ಲಾರಿ ಮಗುಚಿ ಬೀಳಬಹುದೆಂಬ ಮುಂದಾಲೋಚನೆಯಿಂದ ಲಾರಿಯಿಂದ ಹಾರಿದ ಚಾಲಕ ಲಾರಿಯ ಚಕ್ರಕ್ಕೆ ಸಿಲುಕಿ ಸ್ಥಳದಲ್ಲಿ ಮೃತ ಪಟ್ಟ ಘಟನೆ ಶುಕ್ರವಾರ ಮಧ್ಯಾಹ್ನ ಗುಡುಗಳಲೆ- ಬೆಳ್ಳಾರಳ್ಳಿ ತಿರುವುವಿನಲ್ಲಿ ನಡೆದಿದೆ. ಆಂಧ್ರಪ್ರದೇಶ ಮೂಲದ ಲಾರಿ ಚಾಲಕ ಸುಂಕಣ್ಣ (38) ಮೃತ ದುರ್ದೈವಿ.

ಆಂಧ್ರಪ್ರದೇಶದಿಂದ ಸೋಮವಾರಪೇಟೆಗೆ ಸಿಮೆಂಟ್ ತುಂಬಿದ ಲಾರಿ ಬೆಳ್ಳಾರಳ್ಳಿ -ಗುಡುಗಳಲೆ ತಿರುವಿನಲ್ಲಿ ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿದ ಲಾರಿ ರಸ್ತೆ ಬದಿಗೆ ಮಗುಚಿದೆ.ಚಾಲಕನ ನಿಯಂತ್ರಣ ತಪ್ಪುತ್ತಿದ್ದಂತೆ ಲಾರಿ ಸಂಪೂರ್ಣವಾಗಿ ಮಗುಚಿ ಬೀಳಬಹುದೆಂಬ ಮುಂದಾಲೋಚನೆ ಹಿನ್ನಲೆ ಲಾರಿ ಚಲಾಯಿಸುತ್ತಿದ್ದ ಚಾಲಕ ಸುಂಕಣ್ಣ ಮತ್ತು ಲಾರಿಯೊಳಗೆ ಕುಳಿತಿದ್ದ ಮತ್ತೊಬ್ಬ ಚಾಲಕ ನರೇಶ್ ಇಬ್ಬರೂ ಲಾರಿಯಿಂದ ಹಾರಿದ್ದಾರೆ ಈ ಸಂದರ್ಭ ಲಾರಿ ಚಾಲನೆ ಮಾಡುತ್ತಿದ್ದ ಸುಂಕಣ್ಣ ಚಲಿಸುತ್ತಿದ್ದ ಲಾರಿಯಿಂದ ಹಾರಿದಾಗ ಹಿಂಬದಿ ಚಕ್ರ ಸುಂಕಣ್ಣನ ಮೇಲೆ ಹರಿದು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ.

ಲಾರಿಯಿಂದ ಹಾರಿದ ಮತ್ತೊಬ್ಬ ಚಾಲಕ ನರೇಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಶನಿವಾರಸಂತೆ ಪೊಲೀಸರು ಬೇಟಿ ನೀಡಿ ಪರಿಶೀಲಿಸಿದರು. ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಾಹನ ಅಪಘಾತ ಗಾಯಾಳು ವ್ಯಕ್ತಿ ಸಾವು

ಸುಂಟಿಕೊಪ್ಪ: ಸುಂಟಿಕೊಪ್ಪ ಸಮೀಪದ ಕೆದಕಲ್‌ನಲ್ಲಿ ಬುಧವಾರ ಸಂಜೆ ಸಂಭವಿಸಿದ ವಾಹನ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಿಲಾಗಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಗುರುವಾರ ಮೃತಪಟ್ಟರು. ಮೂಲತಃ ಚೆಟ್ಟಳ್ಳಿ ಅಬ್ಯಾಲ ಗ್ರಾಮದವರಾಗಿದ್ದು ಕೆದಕಲ್ ಡಿ ಬ್ಲಾಕ್ ತೋಟದಲ್ಲಿ ರೈಟರ್ ಆಗಿದ್ದ ಬಲ್ಲಾರಂಡ ಹರೀಶ್ ತಮ್ಮಯ್ಯ (55) ಮೃತರು. ಬುಧವಾರ ಸುಂಟಿಕೊಪ್ಪಕ್ಕೆ ಬಂದಿದ್ದ ಅವರು ಡಿ ಬ್ಲಾಕ್ ತೋಟದಲ್ಲಿರುವ ವಸತಿ ಗೃಹಕ್ಕೆ ಹಿಂತಿರುಗಲು ರಾತ್ರಿ 7.15 ರ ಸಮಯದಲ್ಲಿ ಸಿಟಿ ಬಸ್‌ನಲ್ಲಿ ಪ್ರಯಾಣಿಸಿದ್ದರು. ಕೆದಕಲ್ ನಲ್ಲಿ ಇಳಿದು ರಸ್ತೆ ದಾಟುತ್ತಿದ್ದ ಸಂದರ್ಭ ಅತೀ ವೇಗವಾಗಿ ಧಾವಿಸಿ ಬಂದ ಅಪರಿಚಿತ ಕಾರು ಅವರಿಗೆ ಬಲವಾಗಿ ಅಪ್ಪಳಿಸಿ ಪರಾರಿ ಆಗಿತ್ತು. ಗಂಭೀರ ಗಾಯಗೊಂಡು ಚಿಂತಾಜನಕರಾಗಿದ್ದ ಹರೀಶ್ ಅವರನ್ನು ಮಂಗಳೂರು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಗುರುವಾರ ಸಂಜೆ ಸಾವು ಸಂಭವಿಸಿದೆ.