ಸಾರಾಂಶ
ಕನ್ನಡಪ್ರಭ ವಾರ್ತೆ ನಾಪೋಕ್ಲು
ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾಗಿ ಅಪಘಾತಕ್ಕೆ ಒಳಗಾದ ಘಟನೆ ಶನಿವಾರ ಇಲ್ಲಿಗೆ ಸಮೀಪದ ಬೆಟ್ಟಗೇರಿಯಲ್ಲಿ ನಡೆದಿದೆ.ಮಡಿಕೇರಿ - ಭಾಗ ಮಂಡಲ ಮುಖ್ಯ ರಸ್ತೆಯ ಬೆಟ್ಟಗೇರಿ ಗ್ರಾಮದಲ್ಲಿ ರಸ್ತೆ ಸಂಪೂರ್ಣವಾಗಿ ಗುಂಡಿಮಯವಾಗಿದ್ದು ಕಾರೊಂದು ರಸ್ತೆ ಗುಂಡಿಯನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅಪಘಾತಕ್ಕೆ ಒಳಗಾದ ಕುಟುಂಬಸ್ಥರನ್ನು ಖಾಸಗಿ ದೃಶ್ಯ ವಾಹಿನಿಯ ತಂಡ ರಕ್ಷಣೆ ಮಾಡಿದ್ದಾರೆ. ನಂತರ ಕಾರಿನಲ್ಲಿ ಇದ್ದ ಮಕ್ಕಳು ವಯೋವೃದ್ಧೆ ಹಾಗೂ ಕಾರಿನ ಚಾಲಕನನ್ನು ಗ್ರಾಮಸ್ಥರ ನೆರವಿನಿಂದ ಕುಟುಂಬಸ್ಥರನ್ನು ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಲಾಯಿತು. ಬೆಳಿಗ್ಗೆ ಉಡುಪಿಯಿಂದ ಮಡಿಕೇರಿ ತಾಲೂಕಿನ ಎಮ್ಮೆಮಾಡು ಗ್ರಾಮದಲ್ಲಿರುವ ದರ್ಗಾಕ್ಕೆ ತೆರಳುವ ವೇಳೆಯಲ್ಲಿ ಈ ಘಟನೆ ಸಂಭವಿಸಿದ್ದು ಕುಟುಂಬ ಸದಸ್ಯರು ಜೀವಪಾಯದಿಂದ ಪಾರಾಗಿದ್ದಾರೆ. ಅಪಘಾತದಿಂದ ಕಾರಿನ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜು ಆಗಿದೆ. ಘಟನೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು ಪೊಲೀಸ್ ಮುಂದಿನ ಕ್ರಮ ಕೈಗೊಂಡಿದ್ದಾರೆ. ಅಪಘಾತಕ್ಕೆ ಒಳಗಾದ ಕುಟುಂಬಸ್ಥ ರನ್ನು ರಕ್ಷಣೆ ಮಾಡಿದ ಖಾಸಗಿ ದೃಶ್ಯ ಮಾಧ್ಯಮದ ಮಲ್ಲಿಕಾರ್ಜುನ್ ಹಾಗೂ ಕ್ಯಾಮರಾ ಮ್ಯಾನ್ ಶೀವು ತಂಡಕ್ಕೆ ಬೆಟ್ಟಗೇರಿ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.