ರಸ್ತೆ ಅಪಘಾತ: ಗಾಯಾಳು ಸಾವು

| Published : Jun 01 2024, 12:48 AM IST

ಸಾರಾಂಶ

ಚೇರಂಬಾಣೆ ಬಳಿ ಗುರುವಾರ ಸ್ಕೂಟಿ ಮತ್ತು ಮಾರುತಿ ಕಾರಿನ ನಡುವೆ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ಕೂಟಿ ಸವಾರ ಚಿಕಿತ್ಸೆ ಫಲಿಸದೆ ಮೃತಪಟ್ಟರು. ಕಕ್ಕಬ್ಬೆ ಯುವಕಪಾಡಿ ಗ್ರಾಮದ ನಿವಾಸಿ ಸಂತೋಷ್ (29) ಮೃತರು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಇಲ್ಲಿಗೆ ಸಮೀಪದ ಚೇರಂಬಾಣೆ ಬಳಿ ಗುರುವಾರ ಸ್ಕೂಟಿ ಮತ್ತು ಮಾರುತಿ ಕಾರಿನ ನಡುವೆ ನಡೆದ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸ್ಕೂಟಿ ಸವಾರ ಚಿಕಿತ್ಸೆ ಫಲಿಸದೆ ಮೃತಪಟ್ಟರು. ಕಕ್ಕಬ್ಬೆ ಯುವಕಪಾಡಿ ಗ್ರಾಮದ ನಿವಾಸಿ ಸಂತೋಷ್ (29) ಮೃತರು.

ಗುರುವಾರ ಬೆಳಗ್ಗೆ ಮಡಿಕೇರಿಯಿಂದ ಚೇರಂಬಾಣೆ ಕಡೆಗೆ ತನ್ನ ಸ್ಕೂಟಿಯಲ್ಲಿ ತೆರಳುವಾಗ ಚೇರಂಬಾಣೆ ಕಡೆಯಿಂದ ಇದೇ ಮಾರ್ಗದಲ್ಲಿ ಬರುತ್ತಿದ್ದ ಕರ್ತಮಯ್ಯ ಎಂಬವರ ಮಾರುತಿ ಕಾರಿನ ನಡುವೆ ಕಾರುಗುಂದ ಗೌಡ ಸಮಾಜದ ಬಳಿ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಅಪಘಾತದಿಂದ ಗಂಭೀರ ಗಾಯಗೊಂಡಿದ್ದ ಸಂತೋಷ್‌ನ್ನು ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಸಂತೋಷ್ ಮೃತಪಟ್ಟಿದ್ದಾರೆ. ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ಕೂಟಿ-ಆಮ್ನಿ ಡಿಕ್ಕಿ: ಸವಾರರಿಗೆ ಗಂಭೀರ ಗಾಯ

ನಾಪೋಕ್ಲು ಸಮೀಪದ ಚೇರಂಬಾಣೆಯ ಕಾರುಗುಂದ ಎಂಬಲ್ಲಿ ಸ್ಕೂಟಿ ಮತ್ತು ಮಾರುತಿ ಓಮ್ನಿ ವ್ಯಾನ್ ನಡುವೆ ಗುರುವಾರ ಬೆಳಗ್ಗೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ಸ್ಕೂಟಿ ಸವಾರರಿಗೆ ಗಂಭೀರ ಗಾಯಗಳಾಗಿವೆ.ಕಕ್ಕಬೆ ಯವಕಪಾಡಿಯ ನಿವಾಸಿ ಸಂತೋಷ್ (29) ಸ್ಕೂಟಿಯನ್ನು ಬೆಟಗೇರಿಯಿಂದ ಚೇರಂಬಾಣೆ ಕಡೆಗೆ ಚಲಾಯಿಸುತ್ತಿದ್ದ ಸಂದರ್ಭ ಚೇರಂಬಾಣೆಯಿಂದ ಬೆಟಗೇರಿಯತ್ತ ಕರ್ತಮ್ಮಯ್ಯ ಅವರು ಚಲಾಯಿಸುತ್ತಿದ್ದ ಮಾರುತಿ ಓಮ್ನಿ ವ್ಯಾನ್‌ಗೆ ಪರಸ್ಪರ ಡಿಕ್ಕಿ ಸಂಭವಿಸಿ ಎರಡು ವಾಹನಗಳು ಜಖಂಗೊಂಡಿವೆ.ಚೇರಂಬಾಣೆ ಯ ಕಾರುಗುಂದ ಗೌಡ ಸಮಾಜದ ಬಳಿ ಅವಘಡ ಸಂಭವಿಸಿದ್ದು ಗಾಯಾಳುಗಳನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯ ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿಗೆ ಕರೆದೊಯ್ಯಲಾಗಿದೆ. ಭಾಗಮಂಡಲ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.