ಸಾರಾಂಶ
ಚಿಕ್ಕಮಗಳೂರು- ಶೃಂಗೇರಿ ಸಂಪರ್ಕ ರಾಜ್ಯ ಹೆದ್ದಾರಿ ಮೆಣಸೆ ಶಿಡ್ಲೆ ಸಮೀಪ ಕಾರು ಹಾಗೂ ಟಿಟಿ ನಡುವೆ ಡಿಕ್ಕಿ ಸಂಭವಿಸಿ ಓರ್ವ ವ್ಯಕ್ತಿ ಮೃತಪಟ್ಟು ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ಸಂಭವಿಸಿದೆ.
ಶೃಂಗೇರಿ: ಚಿಕ್ಕಮಗಳೂರು- ಶೃಂಗೇರಿ ಸಂಪರ್ಕ ರಾಜ್ಯ ಹೆದ್ದಾರಿ ಮೆಣಸೆ ಶಿಡ್ಲೆ ಸಮೀಪ ಕಾರು ಹಾಗೂ ಟಿಟಿ ನಡುವೆ ಡಿಕ್ಕಿ ಸಂಭವಿಸಿ ಓರ್ವ ವ್ಯಕ್ತಿ ಮೃತಪಟ್ಟು ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಶನಿವಾರ ಸಂಭವಿಸಿದೆ.
ಧರ್ಮಪುರಿ ಮೂಲದ ಭುವನ್ (65) ಮೃತ ದುರ್ದೈವಿ.ಶೃಂಗೇರಿಯಿಂದ ತಮಿಳುನಾಡು ಕಡೆ ತೆರಳುತ್ತಿದ್ದ ಕಾರು ಬೆಂಗಳೂರಿನಿಂದ ಶೃಂಗೇರಿಯತ್ತ ಬರುತ್ತಿದ್ದ ಟಿಟಿ ವಾಹನ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಕಾರಿನಲ್ಲಿದ್ದ ಭುವನ್ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಇನ್ನಿಬ್ಬರು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಎರಡೂ ವಾಹನಗಳು ಸಂಪೂರ್ಣ ಜಖಂಗೊಂಡಿದ್ದು ಪೋಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ವಹಿಸಿದ್ದಾರೆ.
28 ಶ್ರೀ ಚಿತ್ರ 5-ಶೃಂಗೇರಿ ಮೆಣಸೆ ಶಿಡ್ಲೆ ಬಳಿ ಕಾರ್ ಹಾಗೂ ಟಿಟಿ ನಡುವೆ ಅಪಘಾತ ಸಂಭವಿಸಿರುವುದು.