ಟೋಲ್ ಗೇಟ್ ರದ್ದು ಪಡಿಸಿಲು ಒತ್ತಾಯಿಸಿ ರಸ್ತೆ ತಡೆ

| Published : Feb 26 2025, 01:03 AM IST

ಸಾರಾಂಶ

Road Blockade Demanding Toll Gate Cancellation

-ರಾಯಚೂರು-ತಿಂಥಣಿ ಮಾರ್ಗದಲ್ಲಿ ಅವೈಜ್ಞಾನಿಕ, ಅನಾವಶ್ಯಕ ಟೋಲ್ ಗೇಟ್‌ ನಿರ್ಮಾಣಕ್ಕೆ ಖಂಡನೆ ।ಸಂಸದ ಜಿ.ಕುಮಾರ ನಾಯಕಗೆ ಮನವಿ

----

ಕನ್ನಡಪ್ರಭ ವಾರ್ತೆ ದೇವದುರ್ಗ

ರಾಯಚೂರು-ತಿಂಥಣಿ ರಸ್ತೆ ಮಾರ್ಗದಲ್ಲಿ ಅವೈಜ್ಞಾಣಿಕ ಹಾಗೂ ಅನಾವಶ್ಯಕ ಟೋಲ್ ಗೇಟ್‌ ನಿರ್ಮಾಣ ಖಂಡಿಸಿ, ರಾಜ್ಯ ರಸ್ತೆ ಸಂಘಟನೆ ಪದಾಧಿಕಾರಿಗಳು ದಿಢೀರ ರಸ್ತೆ ತಡೆ ಮಾಡಿ ಪ್ರತಿಭಟಿಸಿದರು.

ರಾಯಚೂರು ರಸ್ತೆ ಮಾರ್ಗದಲ್ಲಿ ಕಾಕರಗಲ್ ಹೊರವಲಯದಲ್ಲಿರುವ ಟೋಲ್ ಗೇಟ್‌ಗಳ ಬಳಿ ಮಂಗಳವರ ರಸ್ತೆ ತಡೆ ನಡೆಸಿ, ಸಂಸದ ಜಿ.ಕುಮಾರ ನಾಯಕ ಹಾಗೂ ತಹಸೀಲ್ದಾರ ಚನ್ನಮಲ್ಲಪ್ಪ ಘಂಟಿರಿಗೆ ಪ್ರತಿಭಟನಾನಿರತರು ಮನವಿ ಸಲ್ಲಿಸಿದರು. ಕೇವಲ 73 ಕಿ.ಮೀ ಅಂತರದಲ್ಲಿ ಎರಡು ಟೋಲ್ ಗೇಟ್‌ ಗಳನ್ನು ನಿಯಮಬಾಹಿರ ನಿರ್ಮಿಸಲಾಗುತ್ತದೆ. ಈ ಪ್ರದೇಶದಲ್ಲಿ ವಾಣಿಜ್ಯ, ಕೈಗಾರಿಕೆ ಸೇರಿದಂತೆ ಹೆಚ್ಚುವರಿ ವಾಹನಗಳ ಸಂಚಾರವೇ ಇರುವದಿಲ್ಲ.

ಈ ರಸ್ತೆ ಮಾರ್ಗದಲ್ಲಿ ಬಸ್ ಸಂಚಾರ ಮತ್ತು ಕೃಷಿ ಚಟುವಟಿಕೆಗಳಿಗಾಗಿ ಟಂಟಂ ಮತ್ತು ಟಾಟಾ ಏಸಿ ಯಂತಹ ಲಘು ವಾಹನಗಳ ಸಂಚಾರವೇ ಹೆಚ್ಚು. ಹೀಗಾಗಿ ರೈತರೇ ಕರದ ರೂಪದಲ್ಲಿ ದಂಡ ಕಟ್ಟುವ ಪರಿಸ್ಥಿತಿ ನಿರ್ಮಾಣವಾಗಲಿದೆ.

ಅತಿವೃಷ್ಠಿ, ಅನಾವೃಷ್ಠಿ ಹಾಗೂ ನೀರಿನ ಲಭ್ಯತೆ ಇರದೇ ರೈತರು ಬೆಳೆ ಹಾನಿ, ಬೆಳೆಗೆ ತಕ್ಕ ದರ ದೊರಕದೇ ಕಂಗಾಲಾಗಿದ್ದಾರೆ. ಇಂತಹ ಸಂಕಷ್ಠ ಪರಿಸ್ಥಿತಿಯಲ್ಲಿ ರೈತರಿಗೆ ಗಾಯದ ಮೇಲೆ ಬರೆ ಯೆಳೆದಂತಾಗಿದೆ. ಕೂಡಲೇ 15ದಿನಗಳ ಒಳಗಾಗಿ ಈ ಟೋಲ್ ಗೇಟ್‌ಗಳನ್ನು ರದ್ದು ಪಡಿಸಬೇಕು, ಇಲ್ಲದೇ ಹೋದಲ್ಲಿ ರೈತರೇ ಮುಂದಾಗಿ ತೆರವುಗೊಳಿಸಲಾಗುತ್ತದೆ ಎಂದು ಮನವಿ ಪತ್ರದಲ್ಲಿ ತಿಳಿಸಲಾಗಿದೆ.

ಸ್ಥಳೀಯ ವಿಧಾನ ಸಭಾ ಕ್ಷೇತ್ರದಲ್ಲಿ ಪ್ರವಾಸದಲ್ಲಿರುವ ಸಂಸದ ಜಿ.ಕುಮಾರನಾಯಕ, ಪ್ರತಿಭಟನಾ ಸ್ಥಳದಲ್ಲಿ ರೈತ ಸಂಘದ ಮುಖಂಡರೊಂದಿಗೆ ಚರ್ಚಿಸಿದರು.

ಬೇಡಿಕೆ ನ್ಯಾಯಯುತವಾಗಿದ್ದು, ಈ ರಸ್ತೆ ಮಾರ್ಗದಲ್ಲಿ ಟೋಲ್ ಗೇಟ್‌ಗಳ ನಿರ್ಮಾಣ ಅನಾವಶ್ಯಕ. ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಸ ಪಾಟೀಲ್, ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್ ಇಂಗಳದಾಳ, ಪದಾಧಿಕಾರಿಗಳಾದ ಸೂಗರಯ್ಯ ಸ್ವಾಮಿ, ಹಾಜಿ ಮಸ್ತಾನ ನಾಯಕ, ಬೂದೆಯ್ಯ ಸ್ವಾಮಿ, ಮಲ್ಲಪ್ಪ ಗೌಡ, ಹೆಚ್.ಶಂಕ್ರಪ್ಪ ಗೌಡ, ಉಮ್ಮಣ್ಣ ನಾಯಕ, ಶಿವಪ್ಪ, ಪುತ್ರಪ್ಪ ನಾರಬಂಡಿ, ಹುಚ್ಚುಪೀರಸಾಬ್ ಹಾಗೂ ಅನೇಕ ರೈತರು ಪಾಲ್ಗೊಂಡಿದ್ದರು.

-------------------------

ಫೋಟೊ: ದೇವದುರ್ಗ ತಾಲೂಕಿನ ರಾಯಚೂರು ರಸ್ತೆ ಮಾರ್ಗದಲ್ಲಿ ಕಾಕರಗಲ್ ಹೊರವಲಯದಲ್ಲಿರುವ ಟೋಲ್ ಗೇಟ್‌ಗಳ ಬಳಿ ರೈತ ಸಂಘದ ಮುಖಂಡರು ಸಂಚಾರ ತಡೆ ನಡೆಸಿ ಸಂಸದ ಜಿ.ಕುಮಾರ ನಾಯಕ ಅವರಗೆ ಮನವಿ ಸಲ್ಲಿಸಿದರು.