ಕನ್ನಡಪ್ರಭ ವಾರ್ತೆ ಕೋಲಾರಮಧ್ಯ ಪ್ರಾಚ್ಯ ಯುದ್ಧದಿಂದ ಸೃಷ್ಠಿಯಾಗಿರುವ ಸಿಲಿಂಡರ್ ಸಮಸ್ಯೆ ಹಾಗೂ ಏರಿಕೆಯಾಗಿರುವ ಕೃಷಿ ಪರಿಕರಣಗಳ ಬೆಲೆ ನಿಯಂತ್ರಣಕ್ಕೆ ವಿಶೇಷ ತಂಡ ರಚನೆ ಮಾಡಬೇಕೆಂದು ರೈತರ ಸಂಘದಿಂದ ಪಲ್ಲವಿ ವೃತ್ತದಲ್ಲಿ ಕಟ್ಟಿಗೆ ಖಾಲಿ ಸಿಲಿಂಡರ್ ತರಕಾರಿ ಸಮೇತ ಹೋರಾಟ ಮಾಡಿ ಕಂದಾಯ ಇಲಾಖೆಯ ಆರ್‌ಐ ರಾಜುರಿಗೆ ಮುಖಾಂತರ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಯುದ್ಧದ ಆಟ-ಚಟ ಮನುಕುಲಕ್ಕೆ ನರಳಾಟ ದಂಧೆ ಕೋರರಿಗೆ ಹಣ ಮಾಡುವ ಕಳ್ಳಾಟ ಬೆಳೆದ ಬೆಳೆಗೆ ಬೆಲೆ ಇಲ್ಲದೇ ಬೀದಿಗೆ ಬಿಳುತ್ತಿರುವ ರೈತರಿಗೆ ಸ್ವಾಭಿಮಾನದ ಹೋರಾಟವಾಗಿದೆ. ಶ್ರೀಮಂತ ಜಗತ್ತಿಗೆಲ್ಲಾ ನೀತಿ ಪಾಠಹೇಳುವ ಮಾನವಿತ್ಯೆ ಇಲ್ಲದ ರಾಷ್ಟ್ರಗಳ ಯುದ್ದ ಇಡೀ ದೇಶವೇ ಅಲ್ಲೋಲ್ಲ-ಕಲೋಲ್ಲವಾಗುತ್ತಿದೆ. ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಬಗೆಹರಿಸಬೇಕಾದ ವಿಶ್ವ ಸಂಸ್ಥೆ ನಾಪತ್ತೆಯಾಗಿರುವುದು ದುರಷ್ಠಕರ ವಿಚಾರವಾಗಿದೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಅವ್ಯವಸ್ಥೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ತಪ್ಪು ಮಾಡದ ಅಮಾಯಕರು ಇಂದು ಬಲಿತ ರಾಷ್ಟ್ರಗಳು ಪ್ರತಿಷ್ಠೆಗಾಗಿ ಯುದ್ದಗಳನ್ನು ಸೃಷ್ಠಿಸಿಕೊಂಡು ಅಶಾಂತಿ ಸೃಷ್ಠಿಮಾಡಿ ಜೀವಗಳನ್ನು ಬಲಿಕೊಡುತ್ತಿರುವ ಜೊತೆಗೆ ಯುದ್ಧದ ನೆಪದಲ್ಲಿ ಕೃಷಿ ಕ್ಷೇತ್ರವನ್ನು ನಾಶ ಮಾಡಿ ಆಹಾರ ಅಭದ್ರತೆ ಸೃಷ್ಠಿಸುತ್ತಿರುವುದು ಪ್ರಜಾಪ್ರಭುತ್ವದ ಕಗ್ಗೊಲೆ ಅಸಮಾಧಾನ ವ್ಯಕ್ತಪಡಿಸಿದರು. ಎಲ್.ಪಿ.ಜಿ ಕೊರತೆಯಿಂದ ಎಲ್ಲಾ ಪ್ರೀತಿಯ ಉದ್ಯಮಗಳಿಗೆ ಹೊಡೆತ ಬೀಳುವ ಜೊತೆಗ ಅತಿ ಹೆಚ್ಚು ಹೊಡೆತ ಬಿದ್ದಿರುವುದು ರೈತರಿಗೆ ಲಕ್ಷಾಂತರ ರುಪಾಯಿ ಬಂಡವಾಳ ಹಾಕಿ ಬೆಳೆದಿರುವ ಸಾವಿರಾರು ಹೆಕ್ಟೇರ್ ಕೃಷಿ ಜಮೀನಲ್ಲಿನ ವಿವಿಧ ವಾಣಿಜ್ಯ ಬೆಳೆಗಳಾದ ಟೊಮೆಟೋ, ಕ್ಯಾಪ್ಸಿಕಾಮ್, ಸೌತೆಕಾಯಿ, ಅಲೂಗಡ್ಡೆ ಬೀನ್ಸ್ ಮತ್ತು ಇತರ ಬೆಳೆಗಳನ್ನು ಮಾರುಕಟ್ಟೆಗೆ ತಂದರೆ ಅಲ್ಲಿ ಹರಾಜುನಲ್ಲಿ ಭಾಗವಹಿಸುವ ವ್ಯಾಪಾರಸ್ಥರು ಇಲ್ಲದಂತಾಗಿದೆ. ಸಿಲಿಂಡರ್ ಸಮಸ್ಯೆಯಿಂದ ಹೋಟೆಲ್ ಉದ್ಯಮಕ್ಕೆ ಹೊಡೆತ ಬೀಳುವ ಜೊತೆಗೆ ತರಕಾರಿ ಬೆಳೆದ ರೈತನು ಬೀದಿಗೆ ಬಿದ್ದಿರುವ ಜೊತೆಗೆ ಹಾಕಿದ ಬಂಡವಾಳ ಕೈಗೆ ಸಿಗದೆ ತೋಟದಲ್ಲಿಯೇ ಬೆಳೆ ನಷ್ಟವಾಗುತ್ತಿದ್ದು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕಾದ ಸರ್ಕಾರ ಸಿಲಿಂಡರ್ ಹೆಸರಿನಲ್ಲಿ ಆರೋಪ ಪ್ರತ್ಯಾರೋಪ ಮಾಡಿಕೊಂಡು ಬಡ ರೈತ ಕೂಲಿ ಕಾರ್ಮಿಕರ ಜೀವನ ಚೆಲ್ಲಾಟ ವಾಡುತ್ತಿದ್ದಾರೆಂದು ಕಿಡಿಕಾರಿದರು.ಪ್ರತಿಭಟನೆಯಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ ಕಮ್ಮದಟ್ಟಿ ಚಲಪತಿ ಮಂಜುನಾಥ. ಮಂಗಸಂದ್ರ ತೆರ್ನಹಳ್ಳಿ ಅಂಜಿನಪ್ಪ ತಿಮ್ಮಣ್ಣ ಕುವಣ್ಣ, ಗೋವಿಂದಪ್ಪ, ಸುಪ್ರಿಂ ಚಲ ಪುತ್ತೇರಿ ರಾಜು ಗಿರೀಶ್ ಚಂದ್ರಪ್ಪ ಯಲ್ಲಣ್ಣ ವೆಂಕಟೇಶ ಶೈಲಜ, ಪವಿತ್ರ ರತ್ನಮ್ಮ ನಯನ ಗೌರಮ್ಮ ಪದ್ಮಮ್ಮ ಮುನಿಚೌಡಮ್ಮ ಇದ್ದರು.
ಎಲ್ಪಿಜಿ, ಕೃಷಿ ಪರಿಕರಣಗಳ ಬೆಲೆಯೇರಿಕೆ ಖಂಡಿಸಿ ರಸ್ತೆ ತಡೆ
ಯುದ್ಧದ ಆಟ-ಚಟ ಮನುಕುಲಕ್ಕೆ ನರಳಾಟ ದಂಧೆ ಕೋರರಿಗೆ ಹಣ ಮಾಡುವ ಕಳ್ಳಾಟ ಬೆಳೆದ ಬೆಳೆಗೆ ಬೆಲೆ ಇಲ್ಲದೇ ಬೀದಿಗೆ ಬಿಳುತ್ತಿರುವ ರೈತರಿಗೆ ಸ್ವಾಭಿಮಾನದ ಹೋರಾಟವಾಗಿದೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.