ಸಾರಾಂಶ
ಮರಿಯಮ್ಮನಹಳ್ಳಿ: ಮರಿಯಮ್ಮನಹಳ್ಳಿ ಹೋಬಳಿಯಲ್ಲಿ ಶುಕ್ರವಾರ ಒಂದೇ ದಿನ ಸುಮಾರು ₹8 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಎಲ್ಲ ರಸ್ತೆಗಳನ್ನು ಗುಣಮಟ್ಟದ ಕಾಮಗಾರಿಯಾಗಿ ನಡೆಯಲಿದೆ ಎಂದು ಶಾಸಕ ಕೆ.ನೇಮಿರಾಜ್ ನಾಯ್ಕ್ ಹೇಳಿದರು.
ಇಲ್ಲಿಗೆ ಸಮೀಪದ ಜಿ.ನಾಗಲಾಪುರದಲ್ಲಿ ಶುಕ್ರವಾರ ಸಿಸಿ ರಸ್ತೆ ಕಾಮಗಾರಿಯ ಭೂಮಿಪೂಜೆ ನೆರವೇರಿಸಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ಮರಿಯಮ್ಮನಹಳ್ಳಿ ಹೋಬಳಿಯ ತಾಳೆಸಬಾಸಪುರ ತಾಂಡದಲ್ಲಿ ₹50 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿ, ತಿಮ್ಮಲಾಪುರ ಗ್ರಾಮದಲ್ಲಿ ₹50 ಲಕ್ಷ ಸಿಸಿ ರಸ್ತೆ ಕಾಮಗಾರಿ, ಪೋತಲಕಟ್ಟೆ ಗ್ರಾಮದಲ್ಲಿ ₹50 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿ, ಚಿಲಕನಹಟ್ಟಿ ಗ್ರಾಮದಲ್ಲಿ ₹50 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿ, ಹರುವನಹಳ್ಳಿ ಗ್ರಾಮದಲ್ಲಿ ₹50 ಲಕ್ಷ ಸಿಸಿ ರಸ್ತೆ ಕಾಮಗಾರಿ, ಜಿ.ನಾಗಲಾಪುರ ಗ್ರಾಮದಲ್ಲಿ ₹50 ಲಕ್ಷ ಸಿಸಿ ರಸ್ತೆ ಕಾಮಗಾರಿ ಸೇರಿದಂತೆ ಮರಿಯಮ್ಮನಹಳ್ಳಿ ಹೋಬಳಿಯಲ್ಲಿ ಸುಮಾರು ₹8 ಕೋಟಿ ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಗುತ್ತಿಗೆದಾರರು ತಮಗೆ ನೀಡಿದ ಅವಧಿಯಲ್ಲಿ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸುವಂತೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.
ಬನ್ನಿಗೋಳ್ ಗ್ರಾಮದಲ್ಲಿ ಒಂದು ಕೋಟಿ ರು.ಗಳ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮರಿಯಮ್ಮನಹಳ್ಳಿಯಲ್ಲಿ 17ನೇ ವಾರ್ಡ್‌ನಲ್ಲಿ ₹50 ಲಕ್ಷದ ರಸ್ತೆ ಸಿಸಿ ರಸ್ತೆ ಕಾಮಗಾರಿ, 18ನೇ ವಾರ್ಡ್‌ನಲ್ಲಿ ₹50 ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಕಾಮಗಾರಿ, ಇಂದಿರಾನಗರದಲ್ಲಿ ₹50 ಲಕ್ಷ ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಅವರು ಹೇಳಿದರು.ಜಿ.ನಾಗಲಾಪುರದಲ್ಲಿ ದೊಡ್ಡಹಳ್ಳ ದಾಟಲು ಜನರಿಗೆ ಅನೇಕ ದಿನಗಳಿಂದ ಸಮಸ್ಯೆಇರುವುದನ್ನು ಮನಗೊಂಡು ಎರಡು ಕಾಲು ಕೋಟಿ ರು. ಸೇತುವೆಗೆ ಹಣ ಬಿಡುಗಡೆಯಾಗಿದೆ. ಜಿ.ನಾಗಲಾಪುರದಿಂದ ಗುಂಡಾಗೆ ಸೇರುವ ರಸ್ತೆಗೆ ಹಣ ಬಿಡುಗಡೆಯಾಗಿದೆ. ಇದೇ ತಿಂಗಳ ಕೊನೆಯಲ್ಲಿ ಈ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಕಾಮಗಾರಿಯನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಗರಗದಿಂದ ರಾ.ಹೆ. 50 ರಸ್ತೆಗೆ ₹46 ಕೋಟಿ ವೆಚ್ಚದಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿ ಕೈಗೊಳ್ಳಲಾಗುವುದು. ಇದು ಸ್ವಲ್ಪ ತಾಂತ್ರಿಕವಾಗಿ ತೊಂದರೆಯಾಗಿತ್ತು. ಈಗ ಅದು ಸರಿಪಡಿಸಲಾಗಿದೆ. ಇನ್ನು 10 ದಿನಗಳಲ್ಲಿ ತಾಂತ್ರಿಕ ತೊಂದರೆ ಸರಿಹೊಂದಲಿದೆ. ತಕ್ಷಣವೇ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ₹140 ಕೋಟಿ ವೆಚ್ಚದಲ್ಲಿ ಮರಿಯಮ್ಮನಹಳ್ಳಿ ಹೋಬಳಿಯಲ್ಲಿ ರಸ್ತೆಗಳನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು.ಜಿ.ನಾಗಲಾಪುರದ ಶ್ರೀಗುರು ಒಪ್ಪತ್ತೇಶ್ವರ ಮಠದ ನಿರಂಜನ ಪ್ರಭು ಶ್ರೀಗಳು, ಸ್ಥಳೀಯ ಮುಖಂಡರಾದ ಗರಗ ಪ್ರಕಾಶ್, ಮಲ್ಲಿಕಾರ್ಜುನ, ಎಚ್. ಎಂ. ಶಿವಶಂಕ್ರಯ್ಯ, ಸೋಮಪ್ಪ, ಎಚ್. ಎರ್ರಿಸ್ವಾಮಿ, ವಿ, ಶಿವಪ್ರಕಾಶ್, ಸೋಮಶೇಖರ್, ಎಲ್. ನಾರಾಯಣ, ಎರ್ರಿಸ್ವಾಮಿ, ಬ್ಯಾಲಕುಂದಿ ಸಿದ್ರಾಮಪ್ಪ, ಮಂಜುನಾಥ, ಅಂಕಮನಾಳ ಜಾಥಪ್ಪ, ಪ್ರಕಾಶ್, ನಾಗರಾಜ, ಪಿ. ಓಬಪ್ಪ, ಬಿ.ಎಸ್. ರಾಜಪ್ಪ, ಬಿ. ದೊಡ್ಜ ಬಸಪ್ಪ ರೆಡ್ಡಿ, ನಾಗರಾಜ ಬ್ಯಾಟಿ, ಗುತ್ತಿಗೆದಾರ ಚಂದ್ರಪ್ಪ ದಾವಣಗೇರಿ ಸೇರಿದಂತೆ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.