ಚುನಾವಣೆ ಸಿದ್ಧತೆಗಾಗಿ ಅರೆಸೇನಾ ಪಡೆ,ಪೊಲೀಸರಿಂದ ಪಥಸಂಚಲನ

| Published : Mar 21 2024, 01:09 AM IST

ಚುನಾವಣೆ ಸಿದ್ಧತೆಗಾಗಿ ಅರೆಸೇನಾ ಪಡೆ,ಪೊಲೀಸರಿಂದ ಪಥಸಂಚಲನ
Share this Article
  • FB
  • TW
  • Linkdin
  • Email

ಸಾರಾಂಶ

ರಾಜಕೀಯ ಪಕ್ಷಗಳು ನೀಡುವ ಆಸೆ, ಆಮಿಷಗಳಿಗೆ ಬಲಿಯಾಗದೆ ನಿರ್ಭೀತಿಯಿಂದ ತಮ್ಮ ಹಕ್ಕನ್ನು ಚಲಾಯಿಸಿ. ೨೦೨೪ರ ಲೋಕಸಭೆ ಚುನಾವಣೆಯಲ್ಲಿ ಅಹಿತಕರ ಘಟನೆಗಳು ಜರುಗದಂತೆ ಶಾಂತಿ, ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸ್ ಇಲಾಖೆ ಮತ್ತು ಸಶಸ್ತ್ರ ಸೀಮಾ ಬಲದ ಸಿಬ್ಬಂದಿಯೊಂದಿಗೆ ಸಾರ್ವಜನಿಕರಲ್ಲಿ ವಿಶ್ವಾಸ ತುಂಬಲು ಫಥ ಸಂಚಲನ ಮಾಡಲಾಗಿದೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ವಸಂತ್‌ಕುಮಾರ್ ಹೇಳಿದರು.

ಕನ್ನಡಪ್ರಭ ವಾರ್ತೆ ಮಾಲೂರು

೨೦೨೪ರ ಲೋಕಸಭೆ ಚುನಾವಣೆಯಲ್ಲಿ ಮುಕ್ತ ಹಾಗೂ ನಿರ್ಭೀತಿಯಿಂದ ಮತದಾನ ನಡೆಯಲು ಪೊಲೀಸ್ ಜಿಲ್ಲಾ ವರಿಷ್ಠಾಧಿಕಾರಿ ಎಂ.ನಾರಾಯಣ್ ಮಾರ್ಗದರ್ಶನದಲ್ಲಿ ತಾಲೂಕಿನಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಸರ್ಕಲ್ ಇನ್ಸ್ಪೆಕ್ಟರ್ ವಸಂತ್‌ಕುಮಾರ್ ಹೇಳಿದರು.

ಲೋಕಸಭೆ ಚುನಾವಣೆಯ ಹಿನ್ನೆಲೆ ಪಟ್ಟಣದಲ್ಲಿ ಅರಸೇನಾ ಪಡೆ ಮತ್ತು ಪೊಲೀಸರೊಂದಿಗೆ ಫಥಸಂಚಲನ ನಡೆಸಿ ಮಾತನಾಡಿದ ಅವರು, ರಾಜಕೀಯ ಪಕ್ಷಗಳು ನೀಡುವ ಆಸೆ, ಆಮಿಷಗಳಿಗೆ ಬಲಿಯಾಗದೆ ನಿರ್ಭೀತಿಯಿಂದ ತಮ್ಮ ಹಕ್ಕನ್ನು ಚಲಾಯಿಸಿ. ೨೦೨೪ರ ಲೋಕಸಭೆ ಚುನಾವಣೆಯಲ್ಲಿ ಅಹಿತಕರ ಘಟನೆಗಳು ಜರುಗದಂತೆ ಶಾಂತಿ, ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸ್ ಇಲಾಖೆ ಮತ್ತು ಸಶಸ್ತ್ರ ಸೀಮಾ ಬಲದ ಸಿಬ್ಬಂದಿಯೊಂದಿಗೆ ಸಾರ್ವಜನಿಕರಲ್ಲಿ ವಿಶ್ವಾಸ ತುಂಬಲು ಫಥ ಸಂಚಲನ ಮಾಡಲಾಗಿದೆ ಎಂದರು.

ಸಮಾಜದಲ್ಲಿ ಚುನಾವಣೆ ವೇಳೆಯಲ್ಲಿ ಶಾಂತಿ ಕದಡುವ ಶಕ್ತಿಗಳ ವಿರುದ್ಧ ನಿರ್ಧಾಕ್ಷಣ್ಯ ಕ್ರಮ ಜರುಗಿಸಲಾಗುವುದು. ಏ.೨೬ರಂದು ನಡೆಯುವ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಹಿರಿಯ ಅಧಿಕಾರಿಗಳ ಆದೇಶದನ್ವಯ ಪೊಲೀಸರು ಮುಖ್ಯವಾಗಿ ಸೈನಿಕರನ್ನು ನಿಯೋಜಿಸಲಾಗಿದೆ ಎಂದ ಸಿಪಿಐ ವಸಂತ್ ಅವರು, ೯೦ ಅರೆಸೇನಾ ಪಡೆಯ ಯೋಧರು, ೨೫ಪೊಲೀಸ್ ಸಿಬ್ಬಂದಿ ಪಥಸಂಚಲನ ನಡೆಸುತ್ತಿದ್ದಾರೆ ಎಂದರು.

ತಾಲೂಕಿನ ೨೪೯ ಮತಗಟ್ಟೆಗಳಲ್ಲಿ ತಲಾ ಪೇದೆ ಅಥವಾ ಗೃಹರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಿದ್ದು, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ೧0 ಪೊಲೀಸ್ ಸಿಬ್ಬಂದಿಯನ್ನು ಹಾಗೂ ಸಂಪಂಗೆರೆ, ಚಿಕ್ಕತಿರುಪತಿ, ಕಟ್ಟಿಗೇನಹಳ್ಳಿಗಳಲ್ಲಿ ಸೇರಿ ೩ ಚೆಕ್‌ಪೋಸ್ಟ್ಗಳನ್ನು ತೆರೆಯಲಾಗಿದೆ ಎಂದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರ ವಹಿಸಲಾಗಿದೆ. ಮತದಾರರಿಗೆ ಧೈರ್ಯ ತುಂಬಿ ಮತದಾನದ ಹಕ್ಕು ಚಲಾಯಿಸಲು ಅರಿವು ಮೂಡಿಸಲಾಗುವುದು ಎಂದರು.

ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಪಥ ಸಂಚಲನದಲ್ಲಿ ಅರೆಸೇನಾ ಪಡೆಯ ಕೆ.ಜೆ.ಸಿಂಗ್, ಸೆಬಾಸ್ಟಿಯನ್, ಸಬ್‌ಇನ್ಸ್ಪೆಕ್ಟರ್ ಮಂಗಳಮ್ಮ, ರಾಮಚಂದ್ರ, ಎಸ್‌ಐ ಆನಂದ್, ಆರ್.ವೆಂಕಟೇಶ್, ಸಿಬ್ಬಂದಿ ಆಂಜಿನಪ್ಪ, ಆಶೋಕ್, ರಮೇಶ್, ಕಡತೂರು ಮಂಜುನಾಥ್, ಯಶ್‌ವಂತರಾವ್ ಇದ್ದರು.