ಏರೋ ಇಂಡಿಯಾ ಶೋಗಾಗಿ ರಸ್ತೆ ರಿಪೇರಿ, ಕಸ ವಿಲೇವಾರಿ

| Published : Jan 10 2025, 01:45 AM IST

ಸಾರಾಂಶ

ಬೆಂಗಳೂರಿನ ಯಲಹಂಕದಲ್ಲಿ ಫೆಬ್ರವರಿ 10ರಿಂದ ಆರಂಭ ಆಗುವ ಏರೋ ಇಂಡಿಯಾ ವೈಮಾಜಿಕ ಪ್ರದರ್ಶನಕ್ಕೆ ಸಿದ್ಧತೆ ಆರಂಭವಾಗಿದೆ. ರಸ್ತೆ ದುರಸ್ತಿ, ವಿದ್ಯುತ್‌ ದೀಪಗಳ ದುರಸ್ತಿ ಮಾಡಲಾಗುತ್ತಿದೆ.

ವಿಶ್ವನಾಥ ಮಲೇಬೆನ್ನೂರು

ಕನ್ನಡಪ್ರಭ ವಾರ್ತೆ ಬೆಂಗಳೂರು

ಫೆಬ್ರವರಿಯಲ್ಲಿ ನಡೆಯಲಿರುವ 15ನೇ ಅಂತಾರಾಷ್ಟ್ರೀಯ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಹಿನ್ನೆಲೆಯಲ್ಲಿ ರಸ್ತೆ, ಚರಂಡಿ. ಕಸ ವಿಲೇವಾರಿ ಸೇರಿದಂತೆ ಮೊದಲಾದ ಮೂಲಸೌಕರ್ಯಗಳ ಸಜ್ಜುಗೊಳಿಸುವ ಕಾರ್ಯ ಆರಂಭಗೊಂಡಿದೆ.

ಎರಡು ವರ್ಷಗಳಿಗೆ ಒಮ್ಮೆ ಬೆಂಗಳೂರಿನ ಹೊರ ವಲಯದ ಯಲಹಂಕದ ರಕ್ಷಣಾ ಇಲಾಖೆಯ ವಾಯುನೆಲೆಯಲ್ಲಿ ಫೆ.10ರಿಂದ 14 ರವರೆಗೆ ಐದು ದಿನ ಏಷ್ಯಾದ ಅತೀ ದೊಡ್ಡ ವೈಮಾನಿಕ ಪ್ರದರ್ಶನ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಈಗಾಗಲೇ ಬೆಂಗಳೂರು ನಗರ ಸಂಚಾರಿ ಪೊಲೀಸ್‌ ಅಧಿಕಾರಿಗಳು ಸರ್ವೇ ನಡೆಸಿ 352 ವಿವಿಧ ಕಾಮಗಾರಿ ನಡೆಸುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಕಾಮಗಾರಿ ನಡೆಸುವುದಕ್ಕೆ ಮನವಿ ಮಾಡಿದ್ದಾರೆ. ಈ ಪೈಕಿ ಬಿಬಿಎಂಪಿಯು ತನ್ನ ವ್ಯಾಪ್ತಿಗೆ ಒಳಪಡುವ 263 ಕಾಮಗಾರಿ ನಡೆಸುವುದಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

25 ರಸ್ತೆ ಡಾಂಬರೀಕರಣ:

ಸಂಚಾರಿ ಪೊಲೀಸರು ಯಲಹಂಕ ವಾಯುನೆಲೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಪೈಕಿ 25 ರಸ್ತೆಗಳಿಗೆ ಡಾಂಬರೀಕರಣ ಮಾಡುವುದಕ್ಕೆ ಮನವಿ ಮಾಡಿದ್ದಾರೆ. ಈ ಪೈಕಿ ಬಿಬಿಎಂಪಿ ವ್ಯಾಪ್ತಿಯ 17 ರಸ್ತೆಗಳಿವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ 4, ಪಿಡಬ್ಲ್ಯೂಡಿಗೆ 2 ಹಾಗೂ ಕೆಆರ್‌ಡಿಸಿಎಲ್‌ನ 1 ರಸ್ತೆ ಡಾಂಬರೀಕರಣಕ್ಕೆ ಶಿಫಾರಸು ಮಾಡಲಾಗಿದೆ.

ಈ ಪೈಕಿ ಬಿಬಿಎಂಪಿ ವ್ಯಾಪ್ತಿಯ ರಸ್ತೆಗಳು ಹೆಚ್ಚಾಗಿದ್ದು, ಸುಮಾರು 12 ರಿಂದ 15 ಕಿ.ಮೀ. ಉದ್ದದ ರಸ್ತೆಗಳನ್ನು ಡಾಂಬರೀಕರಣ ಮಾಡಬೇಕಾಗಲಿದೆ. ಈಗಾಗಲೇ ಬಿಬಿಎಂಪಿಯ 695 ಕಿ.ಮೀ. ಉದ್ದದ ರಸ್ತೆಗಳ ಡಾಂಬರೀಕರಣಕ್ಕೆ ಟೆಂಡರ್‌ ಪ್ರಕ್ರಿಯೆ ನಡೆಸಿದೆ. ವೈಮಾನಿಕ ಪ್ರದರ್ಶನ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳೂ ಅದರಲ್ಲಿ ಇವೆ ಎಂದು ರಸ್ತೆ ಮತ್ತು ಮೂಲಸೌಕರ್ಯ ವಿಭಾಗದ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

131 ರಸ್ತೆ ಗುಂಡಿ:

ಸಂಚಾರಿ ಪೊಲೀಸರು ಸರ್ವೇ ವೇಳೆ ವಿವಿಧ ರಸ್ತೆಗಳಲ್ಲಿ ಒಟ್ಟು 131 ರಸ್ತೆ ಗುಂಡಿ ಇವೆ. ಇನ್ನು 52 ಕಡೆ ಮಳೆ ಬಂದರೆ ನೀರು ನಿಂತುಕೊಂಡು ವಾಹನ ಸಂಚಾರಕ್ಕೆ ತೊಂದರೆ ಉಂಟಾಗಲಿದೆ ಎಂದು ಗುರುತಿಸಲಾಗಿದ್ದು, ಆ ಸ್ಥಳದಲ್ಲಿಯೂ ದುರಸ್ತಿ ಕಾಮಗಾರಿ ನಡೆಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ವಿವಿಧ ಕಾಮಗಾರಿಗೆ₹1.6 ಕೋಟಿ ಟೆಂಡರ್‌

ಉಳಿದಂತೆ ಬಿಬಿಎಂಪಿಯು ರಸ್ತೆ ವಿಭಜಕ ದುರಸ್ತಿಗೆ, ರಸ್ತೆಗೆ ಹಳದಿ ಹಾಗೂ ಬಿಳಿ ಪಟ್ಟಿ ಬಳಿಯುವುದಕ್ಕೆ, ಸಂಚಾರಿ ಫಲಕ ಅಳವಡಿಕೆಗೆ ಸೇರಿದಂತೆ ಸುಮಾರು ಆರು ಕಾಮಗಾರಿಗೆ ಸಂಬಂಧಿಸಿದಂತೆ ಬಿಬಿಎಂಪಿಯ ರಸ್ತೆ ವಿಭಾಗದಿಂದ ₹1.6 ಕೋಟಿ ವೆಚ್ಚದಲ್ಲಿ ಟೆಂಡರ್‌ ಆಹ್ವಾನಿಸಲಾಗಿದೆ.

ಏರೋ ಇಂಡಿಯಾದ ಇಲಾಖೆವಾರು ಪ್ರಮುಖ ಕಾಮಗಾರಿ ವಿವರ

ಕಾಮಗಾರಿಬಿಬಿಎಂಪಿರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕೆಆರ್‌ಡಿಸಿಎಲ್‌ಪಿಡಬ್ಲ್ಯೂಡಿ

ರಸ್ತೆ ಡಾಂಬರೀಕರಣ17412

ರಸ್ತೆ ಗುಂಡಿ9111326

ನೀರು ನಿಲ್ಲುವ ಸ್ಥಳ3810-4

ವಿದ್ಯುತ್‌ ದೀಪ ರಿಪೇರಿ1322

ಹೊಸ ವಿದ್ಯುತ್‌ ದೀಪ6---

ಫಲಕ ಅಳವಡಿಕೆ33---