ಪಟ್ಟಣದೊಳಗೆ ಸಂಚರಿಸುವ ಏಕೈಕ ಮುಖ್ಯ ರಸ್ತೆಯ ಸಂಪೂರ್ಣ ಹದಗೆಟ್ಟು ಹೋಗಿದ್ದು, ಸಾಗರಿಕರು ಸಹಿತ ಬೈಕ್ ಸವಾರು ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ಪುರಸಭೆ ವತಿಯಿಂದ ದುರಸ್ತಿ ಕಾರ್ಯ ಮಾಡದೇ ತನಗೂ ಇದಕ್ಕೂ ಸಂಬಂಧವಿಲ್ಲದಂತಿದ್ದು, ಈ ರಸ್ತೆಯಲ್ಲಿ ರಾತ್ರಿ ಸಂಚಾರದ ವೇಳೆ ವಾಹನಗಳು ನಿತ್ಯವೂ ಅಪಘಾತಕ್ಕೊಳಗಾಗುತ್ತಿವೆ. ಕೂಡಲೇ ದುರಸ್ತಿ ಕಾರ್ಯ ನಡೆಸವಬೇಕು ಎಂದು ಪುರಸಭೆ ಮಾಜಿ ಸದಸ್ಯ ಜಗನ್ನಾಥ್ ಗುತ್ತೇದಾರ್ ಮತ್ತು ಕನ್ನಡ ರಕ್ಷಣಾ ವೇದಿಕೆ ಮುಖಂಡ ಶ್ರೀಕಾಂತ್ ಜಾನಕಿ ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ಚಿಂಚೋಳಿ
ಪಟ್ಟಣದೊಳಗೆ ಸಂಚರಿಸುವ ಏಕೈಕ ಮುಖ್ಯ ರಸ್ತೆಯ ಸಂಪೂರ್ಣ ಹದಗೆಟ್ಟು ಹೋಗಿದ್ದು, ಸಾಗರಿಕರು ಸಹಿತ ಬೈಕ್ ಸವಾರು ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ಪುರಸಭೆ ವತಿಯಿಂದ ದುರಸ್ತಿ ಕಾರ್ಯ ಮಾಡದೇ ತನಗೂ ಇದಕ್ಕೂ ಸಂಬಂಧವಿಲ್ಲದಂತಿದ್ದು, ಈ ರಸ್ತೆಯಲ್ಲಿ ರಾತ್ರಿ ಸಂಚಾರದ ವೇಳೆ ವಾಹನಗಳು ನಿತ್ಯವೂ ಅಪಘಾತಕ್ಕೊಳಗಾಗುತ್ತಿವೆ. ಕೂಡಲೇ ದುರಸ್ತಿ ಕಾರ್ಯ ನಡೆಸವಬೇಕು ಎಂದು ಪುರಸಭೆ ಮಾಜಿ ಸದಸ್ಯ ಜಗನ್ನಾಥ್ ಗುತ್ತೇದಾರ್ ಮತ್ತು ಕನ್ನಡ ರಕ್ಷಣಾ ವೇದಿಕೆ ಮುಖಂಡ ಶ್ರೀಕಾಂತ್ ಜಾನಕಿ ಆಗ್ರಹಿಸಿದರು.ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತಾಡಿದ ಅವರು, ಚಿಂಚೋಳಿ ಪಟ್ಟಣದ ಒಳಗೆ ಹೋಗುವ ಏಕೈಕ ರಸ್ತೆ ಇದಾಗಿದ್ದು, ಸಾಕಷ್ಟು ಕೆಟ್ಟು ಹೋಗಿದ್ದರೂ ಅದರ ದುರಸ್ತಿ ಕಾರ್ಯ ಇದುವರೆಗೆ ಮಾಡಿಲ್ಲ. ಪಟ್ಟಣದ ಮರಗಮ್ಮದೇವತೆ ಹತ್ತಿರ ಹಳೆ ನಿಜಾಮನ ಸರ್ಕಾರದಲ್ಲಿ ನಿರ್ಮಿಸಿದ ಸೇತುವೆ ತುಂಬಾ ಹಳೆದಾಗಿದ್ದು, ಸೇತುವೆ ಮೇಲೂ ಅನೇಕ ಕಡೆ ಹಾಳಾಗಿವೆ. ಅಲ್ಲದೆ ಅಕ್ಕಪಕ್ಕ ಗಿಡಗಳು ಹೆಚ್ಚು ಬೆಳೆದಿವೆ. ಚಿಂಚೋಳಿ ಪಟ್ಟಣದೊಳಗೆ ಸಂಚರಿಸುವ ರಸ್ತೆ, ಬಡಿದರ್ಗಾ, ಬೈವಾಡ ಚೂಟಿ ದರ್ಗಾ ಕಲ್ಯಾಣ ಗಡ್ಡಿ, ಭೋವಿ ಗಲ್ಲಿ, ಮೊಮ್ಮಿನಪುರ ಮತ್ತು ಗಡಿ ಏರಿಯಾ ಮುಂತಾದ ಬಡಾವಣೆಗೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ ಮಾರ್ಗ ಇದಾಗಿದ್ದು, ಈಗಾಗಲೇ ಸಂಪೂರ್ಣ ಹಾಳಾಗಿ ಹೋಗಿದೆ. ಪುರಸಭೆ ವತಿಯಿಂದಲೂ ಈ ರಸ್ತೆ, ಸೇತುವೆಯ ದುರಸ್ತಿ ಮಾಡುವ ಆಸಕ್ತಿ ಇದ್ದಂತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ಅನೇಕ ಬಡಾವಣೆಯಲ್ಲಿ ಚರಂಡಿಗಳು, ಶೌಚಾಲಯಗಳು ಕೆಟ್ಟು ಹೋಗಿವೆ. ವಿದ್ಯುತ್ ದೀಪಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಕೂಡಲೇ ಪುರಸಭೆ ಮುಖ್ಯ ಅಧಿಕಾರಿಗಳು ಪ್ರತಿ ವಾರ್ಡಿಗೆ ಭೇಟಿ ನೀಡಿ ಜನರಿಗೆ ಮೂಲ ಸೌಕರ್ಯ ಮತ್ತು ಸಮಸ್ಯೆಗಳ ಬಗ್ಗೆ ಪರಿಶೀಲನೆ ನಡೆಸಬೇಕು. ಕೆಟ್ಟು ಹೋಗಿದ್ದ ರಸ್ತೆ ದುರಸ್ತಿ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕು. ಪುರಸಭೆ ಆಡಳಿತ ಅಧಿಕಾರಿ ಸಾರ್ವಜನಿಕ ಸಮಸ್ಯೆಗಳತ್ತ ಗಮನ ಹರಿಸಿ ನಿವಾರಿಸುತ್ತಿಲ್ಲ ಎಂದು ಜಗನ್ನಾಥ್ ಗುತ್ತೇದಾರ್, ಶ್ರೀಕಾಂತ್ ಜಾನಕಿ ಆರೋಪಿಸಿದರು.---ಫೋಟೊ-----
24ಜಿಯು.ಸಿಎಚ1ಚಿಂಚೋಳಿ ಪಟ್ಟಣದೊಳಗೆ ಸಂಚರಿಸುವ ಮುಖ್ಯ ರಸ್ತೆ ಹದಗೆಟ್ಟು ಹೋಗಿರುವುದು.
