ರಸ್ತೆ ನಿಯಮ ಪಾಲಸಿ ಜೀವ ಉಳಿಸಿ

| Published : Feb 23 2025, 12:31 AM IST

ಸಾರಾಂಶ

ಹೊಸಕೋಟೆ: ರಸ್ತೆ ಸುರಕ್ಷತೆ ನಿಯಮ ಪಾಲಿಸದೆ ಪ್ರತಿವರ್ಷ ರಾಜ್ಯದಲ್ಲಿ ಒಂದುವರೆ ಲಕ್ಷಕ್ಕೂ ಅಧಿಕ ವಾಹನ ಸವಾರರು ಸಾವನಪ್ಪಿದ್ದಾರೆ. ಸಾವಿನ ಸಂಖ್ಯೆ ಕಡಿತಗೊಳಿಸಲು ರಸ್ತೆ ನಿಯಮ ಪಾಲಿಸಿ ಎಂದು ಅಪರ ಸಾರಿಗೆ ಆಯುಕ್ತ ಸಿ.ಮಲ್ಲಿಕಾರ್ಜುನ್ ತಿಳಿಸಿದರು.

ಹೊಸಕೋಟೆ: ರಸ್ತೆ ಸುರಕ್ಷತೆ ನಿಯಮ ಪಾಲಿಸದೆ ಪ್ರತಿವರ್ಷ ರಾಜ್ಯದಲ್ಲಿ ಒಂದುವರೆ ಲಕ್ಷಕ್ಕೂ ಅಧಿಕ ವಾಹನ ಸವಾರರು ಸಾವನಪ್ಪಿದ್ದಾರೆ. ಸಾವಿನ ಸಂಖ್ಯೆ ಕಡಿತಗೊಳಿಸಲು ರಸ್ತೆ ನಿಯಮ ಪಾಲಿಸಿ ಎಂದು ಅಪರ ಸಾರಿಗೆ ಆಯುಕ್ತ ಸಿ.ಮಲ್ಲಿಕಾರ್ಜುನ್ ತಿಳಿಸಿದರು.

ನಗರದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಪ್ರಾದೇಶಿಕ ಸಾರಿಗೆ, ಶಿಕ್ಷಣ, ಪೊಲೀಸ್ ಇಲಾಖೆ ಹಾಗೂ ವಿವಿಧ ಸ್ಥಳೀಯ ಚಾಲಕ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಪ್ರಯುಕ್ತ ಕಾಲ್ನಡಿಗೆ ಜಾಥಾಗೆ ಚಾಲನೆ ನೀಡಿ ಮಾತನಾಡಿ, ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್‌ ಧರಿಸಿ ವಾಹನ ಚಲಾಯಿಸಬೇಕು. ಕಾರು ಚಾಲಕರಿಗೆ ಸೀಟ್ ಬೆಲ್ಟ್ ಕಡ್ಡಾಯ. ಗ್ರಾಮಾಂತರ ಪ್ರದೇಶಗಳಲ್ಲಿ ಬಹುತೇಕರು ನಿಯಮ ಪಾಲಿಸುತ್ತಿಲ್ಲ. ಅಪ್ರಾಪ್ತರ ಕೈಗೆ ವಾಹನಗಳನ್ನು ನೀಡದಂತೆ ಸಲಹೆ ನೀಡಿದರು.

ಹಿರಿಯ ಮೋಟಾರ್ ವಾಹನ ನಿರೀಕ್ಷಕ ಕಮಲ್ ಬಾಬು ಮಾತನಾಡಿ, ಸಂಚಾರ ನಿಯಮಗಳ ಪಾಲನೆ ಮಾಡದ್ದರೆ ನಿಯಮಾನುಸಾರ ದಂಡ ವಿಧಿಸುವ ಜೊತೆಗೆ ವಾಹನ ಪರವಾನಗಿ ರದ್ದು ಪಡಿಸಲೂಬಹುದು. ಆದ್ದರಿಂದ ಕಡ್ಡಾಯ ರಸ್ತೆ ಸುರಕ್ಷತಾ ನಿಯಮ ಪಾಲಿಸಬೇಕು ಎಂದರು.

ಶಾಲಾ ಮಕ್ಕಳ ಜೊತೆ ಅಧಿಕಾರಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾದಲ್ಲಿ ಪಾಲ್ಗೊಂಡಿದ್ದರು.

ಹೊಸಕೋಟೆ ಪೊಲೀಸ್ ಉಪ ವಿಭಾಗದ ಉಪ ಪೊಲೀಸ್ ಅಧೀಕ್ಷಕ ಶಂಕರೇಗೌಡ ಅಣ್ಣಪ್ಪ ಸಾಹೇಬ್ ಪಾಟೀಲ್, ಸಂಚಾರ ವಿಭಾಗದ ಆರಕ್ಷಕ ವೃತ್ತ ನಿರೀಕ್ಷಕ ಶ್ರೀಕಂಠಯ್ಯ, ಪ್ರಾದೇಶಿಕ ಸಾರಿಗೆ ಅಧಿಕಾರಿ ಪಿ.ಉಮೇಶ್, ಸಹಾಯಕ ಸಾರಿಗೆ ಅಧಿಕಾರಿ ಫಿಲಿಪ್, ಹಿರಿಯ ಮೋಟಾರ್ ವಾಹನ ನಿರೀಕ್ಷಕರಾದ ಕೇಶವಪ್ಪ, ಕಮಲ್ ಬಾಬು, ಕೆ.ವಿ. ಸುಂದರ್, ಯೋಗೇಶ್, ಜಗದೀಶ್, ಪವಿತ್ರ, ಸಂಗಮೇಶ್, ಸಾರಿಗೆ ಇಲಾಖೆ ಅಧೀಕ್ಷಕರಾದ ದೊಡ್ಡಲಿಂಗಯ್ಯ, ಪ್ರಖ್ಯಾತ್‌ ಇತರರು ಹಾಜರಿದ್ದರು.

ಫೋಟೋ: 20 ಹೆಚ್‌ಎಸ್‌ಕೆ 1

ಹೊಸಕೋಟೆಯ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಪ್ರದೇಶಿಕ ಸಾರಿಗೆ ಇಲಾಖೆ, ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ರಸ್ತೆ ಸುರಕ್ಷತಾ ಮಾಸಾಚರಣೆ ಪ್ರಯುಕ್ತ ಕಾಲ್ನಡಿಗೆ ಜಾಥಾ ನಡೆಯಿತು.