ಸಾರಾಂಶ
ನರೇಗಲ್ಲ: ಜೀವ ಅತ್ಯಮೂಲ್ಯ,ಸಾರ್ವಜನಿಕರು ವಾಹನ ಸಂಚರಿಸುವ ವೇಳೆ ಕಡ್ಡಾಯವಾಗಿ ರಸ್ತೆ ಸುರಕ್ಷತಾ ನಿಯಮ ಅನುಸರಿಸುವ ಮೂಲಕ ಸುಗಮ ಸಂಚಾರಕ್ಕೆ ಹಾಗೂ ಜೀವ ಸಂರಕ್ಷಣೆಗೆ ಪ್ರತಿಯೊಬ್ಬರೂ ಮುಂದಾಗಬೇಕೆಂದು ಸ್ಥಳೀಯ ಪೊಲೀಸ್ ಠಾಣಾ ಎ.ಎಸ್.ಐ ಶೇಖರ ಹೊಸಳ್ಳಿ ಹೇಳಿದರು.
ಪಟ್ಟಣದ ಬಸ್ ನಿಲ್ದಾಣದ ಹತ್ತಿರ ಶುಕ್ರವಾರ ವಾಹನ ಸವಾರರಿಗೆ ರಸ್ತೆ ಸುರಕ್ಷತಾ ಕ್ರಮ ಕುರಿತು ತಿಳಿವಳಿಕೆ ನೀಡಿ ಮಾತನಾಡಿದರು.ಇತ್ತೀಚಿನ ದಿನಮಾನಗಳಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚುತ್ತಿದ್ದು, ಅದಕ್ಕೆ ಕಾರಣ ಸುರಕ್ಷತಾ ಕ್ರಮ ಅನುಸರಿಸದಿರುವುದು, ಕುಡಿದು ವಾಹನ ಚಲಾಯಿಸುವುದು, ಹೆಲ್ಮೆಟ್ ಧರಿಸದೇ ವೇಗವಾಗಿ ವಾಹನ ಚಲಾಯಿಸುವುದು, ವಾಹನದ ದಾಖಲಾತಿ, ಡ್ರೈವಿಂಗ್ ಲೈಸನ್ಸ್ ಇಲ್ಲದೇ ಅಪ್ರಾಪ್ತ ಮಕ್ಕಳ ಕೈಯಲ್ಲಿ ಪಾಲಕರು ವಾಹನ ನೀಡುವುದು ಈ ರೀತಿಯ ತಪ್ಪು ಮಾಡುವುದರಿಂದ ಸಂಚಾರದ ವೇಳೆ ಅಪಘಾತಗಳು ಸಂಭವಿಸಿದಾಗ ಅಪಘಾತಕ್ಕೊಳಗಾದ ವ್ಯಕ್ತಿಗಳಿಗೆ ಯಾವುದೇ ಪರಿಹಾರ ದೊರೆಯುದಿಲ್ಲ. ಮನೆಯಲ್ಲಿ ಅವಲಂಭಿತರಿದ್ದರೆ ಅವರ ಪರಿಸ್ಥಿತಿ ಚಿಂತಾಜನಕವಾಗುತ್ತದೆ ಕಾರಣ ವಾಹನ ಚಲಾಯಿಸುವ ಪ್ರತಿಯೊಬ್ಬರು ತಮ್ಮ ಜೀವದ ಬಗೆಗೆ ಗಮನಹರಿಸಿದಲ್ಲಿ ಹಾಗೂ ದಾಖಲಾತಿ ಸರಿಯಾಗಿಟ್ಟುಕೊಂಡು ಸಂಚರಿಸುವುದರಿಂದ ನಿಮ್ಮನ್ನವಲಂಭಿತ ಕುಟುಂಬಗಳು ಸುರಕ್ಣಿತವಾಗಿರುತ್ತವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪೊಲೀಸ್ ಸಿಬ್ಬಂದಿ ಬಿ.ಆರ್. ನದಾಫ, ಉಮೇಶ ಬಂಗಾರಿ, ವಸಂತ ರಾಠೋಡ, ಅಂದಪ್ಪ ಯತ್ನಟ್ಟಿ, ವಿರುಪಾಕ್ಷಪ್ಪ ಕಲಾಲಬಂಡಿ, ಬಸವರಾಜ ನಡವಲಗುಡ್ಡ, ತೋಶೀಫ್ ದೊಡ್ಡಮನಿ, ಮುರ್ತುಜಾ ಜಕ್ಕಲಿ, ಬುಡ್ನೇಸಾಬ್ ಗದಗ, ಹುಸೇನ ಅತ್ತಾರ, ಮುರ್ತುಜಾ ಬೆಟಗೇರಿ, ಪ್ರಕಾಶ ಸಂಕನೂರ, ಮಂಜು ರಾಠೋಡ, ಮಹಮ್ಮದ ನಶೇಖಾನ ಸೇರಿದಂತೆ ವಾಹನ ಚಾಲಕರು ಉಪಸ್ಥಿತರಿದ್ದರು.