ಸಾರಾಂಶ
ಗೋಕುಲ ರಸ್ತೆಯ ಕೆಎಲ್ಇ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ವಿದ್ಯಾನಗರದ ಬಿವಿಬಿ ಕಾಲೇಜು ಕ್ಯಾಂಪಸ್ ವರೆಗೆ ರ್ಯಾ ಲಿ ನಡೆಯಿತು.
ಹುಬ್ಬಳ್ಳಿ: ರಸ್ತೆ ಸುರಕ್ಷತಾ ಸಪ್ತಾಹದಂಗವಾಗಿ ಇಲ್ಲಿನ ಕೆಎಲ್‌ಇ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಬೈಕ್ ಹಾಗೂ ಕಾರ್ ರ್‍ಯಾಲಿ ನಡೆಸಲಾಯಿತು.
ಜಿಲ್ಲಾಡಳಿತ, ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ, ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಉತ್ತರ, ಕೆಎಲ್‌ಇ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ, ಕೆಎಲ್‌ಇ ತಾಂತ್ರಿಕ ವಿವಿ ಹಾಗೂ ಹುಬ್ಬಳ್ಳಿ ಧಾರವಾಡ ಮೋಟರ್ ಡ್ರೈವಿಂಗ್ ಸ್ಕೂಲ್ ಅಸೋಸಿಯೇಷನ್‌ಗಳ ಸಂಯುಕ್ತಾಶ್ರಯದಲ್ಲಿ ರ್‍ಯಾಲಿ ಆಯೋಜಿಸಲಾಗಿತ್ತು.ರಸ್ತೆ ಸುರಕ್ಷತೆ ನಮ್ಮ ಮೊದಲ ಆದ್ಯತೆ ಎಂಬ ಧ್ಯೇಯವಾಕ್ಯದಡಿ ನಡೆದ ರ್‍ಯಾಲಿಗೆ ಅಪರ ಸಾರಿಗೆ ಆಯುಕ್ತ ಮಾರುತಿ ಸಾಂಬ್ರಾಣಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಗೋಕುಲ ರಸ್ತೆಯ ಕೆಎಲ್ಇ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ವಿದ್ಯಾನಗರದ ಬಿವಿಬಿ ಕಾಲೇಜು ಕ್ಯಾಂಪಸ್ ವರೆಗೆ ರ‍್ಯಾಲಿ ನಡೆಯಿತು.ಜಂಟಿ ಸಾರಿಗೆ ಆಯುಕ್ತೆ ಓಂಕಾರೇಶ್ವರಿ ಎಂ.ಪಿ., ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಕೆ. ದಾಮೋದರ, ಭೀಮನಗೌಡ ಪಾಟೀಲ, ಕೆಎಲ್‌ಇ ಐಟಿ ಪ್ರಾಚಾರ್ಯ ಪ್ರೊ. ಶರದ ಜೋಶಿ, ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಉತ್ತರ ಅಧ್ಯಕ್ಷ ಡಾ. ನಾಗರಾಜ ಶೆಟ್ಟಿ, ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಉತ್ತರ ಕಾರ್ಯದರ್ಶಿ ಪ್ರಕಾಶ ಇರಕಲ್ಲ, ಇವೆಂಟ್ ಚೇರಮನ್ ಶಂಕರ ಹಿರೇಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.