ರಸ್ತೆ ಅಗಲೀಕರಣ ಕಾರ್ಯ ಚುರುಕು

| Published : Aug 31 2025, 02:00 AM IST

ಸಾರಾಂಶ

ಹೈಕೋರ್ಟ ಕೊಟ್ಟಿರುವ ನಕ್ಷೆಯಲ್ಲಿ ಸರ್ಕಾರಿ ಜಾಗವಿಲ್ಲ, ಏನಿದ್ದರೂ ರೈತರ ಭೂಮಿ ಸ್ವಾಧೀನಪಡಿಸಿಕೊಂಡು ಬೈಪಾಸ್ ಮಾಡಬೇಕಾಗುವುದು ಅನಿವಾರ್ಯ

ಬ್ಯಾಡಗಿ: ಮುಖ್ಯರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಕೋರ್ಟ ನಿರ್ದೇಶನದ ಹಿನ್ನೆಲೆಯಲ್ಲಿ ಶನಿವಾರ ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಹಾಗೂ ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬಳೆ ಸೇರಿದಂತೆ ಅಧಿಕಾರಿಗಳ ತಂಡ ಬ್ಯಾಡಗಿ ಪಟ್ಟಣ ಸೇರಿದಂತೆ ಸುತ್ತಮುತ್ತಲ ಸ್ಥಳ ಪರಿಶೀಲನೆ ನಡೆಸಿದರು.

ಮುಖ್ಯರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ಮುಖ್ಯರಸ್ತೆ 77 ಮಾಲೀಕರು ಹೈಕೋರ್ಟ ಮೆಟ್ಟಿಲೇರಿದ್ದು, ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ದೂರುದಾರರು ಕೆಲ ಬೇಡಿಕೆ ಪರಿಶೀಲಿಸಿ 2 ವಾರಗಳಲ್ಲಿ ವರದಿ ಸಲ್ಲಿಸುವಂತೆ ಆದೇಶಿಸಿತ್ತು, ಕಾನೂನು ರೀತಿ ಮುಖ್ಯರಸ್ತೆ ಅಗಲೀಕರಣಗೊಳಿಸುವುದೂ ಸೇರಿದಂತೆ ಬೈಪಾಸ್ ಅಥವಾ ರಿಂಗ್ ರೋಡ್ ನಿರ್ಮಾಣಕ್ಕೆ ಅವಕಾಶವಿದ್ದಲ್ಲಿ ಪರಿಶೀಲಿಸುವಂತೆ 72 ಜನರು ಲಿಖಿತ ಮನವಿ ಮಾಡಿದ್ದರಿಂದ ಜಿಲ್ಲಾಧಿಕಾರಿಗಳ ನೇತೃತ್ವದ ಅಧಿಕಾರಿಗಳು ತಂಡ ಪರಿಶೀಲನೆ ನಡೆಸಿತು.

ಸರ್ಕಾರಿ ಜಾಗ ಎಲ್ಲಿದೆ:ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ತಾವು ಹೈಕೋರ್ಟ ಕೊಟ್ಟಿರುವ ನಕ್ಷೆಯಲ್ಲಿ ಸರ್ಕಾರಿ ಜಾಗವಿಲ್ಲ, ಏನಿದ್ದರೂ ರೈತರ ಭೂಮಿ ಸ್ವಾಧೀನಪಡಿಸಿಕೊಂಡು ಬೈಪಾಸ್ ಮಾಡಬೇಕಾಗುವುದು ಅನಿವಾರ್ಯ ಈ ವೇಳೆ ಮುಖ್ಯರಸ್ತೆಯಲ್ಲಿ ಕೆಲ ವರ್ತಕರು ಬೈಪಾಸ್ ಹಾಗೂ ರಿಂಗ್ ರೋಡದ ನಿರ್ಮಾಣ ಮಾಡಲು ನಕ್ಷೆಯಲ್ಲಿ ತೋರಿಸುವ ಪ್ರಯತ್ನ ನಡೆಸಿದರು, ಆದರೆ ತೋರಿಸಿದ ನಕ್ಷೆಯಲ್ಲಿ ಯಾವುದೇ ಸರ್ಕಾರಿ ಜಾಗವಿರಲಿಲ್ಲ ಈ ಹಿನ್ನೆಲೆಯಲ್ಲಿ ನಿಮ್ಮ ದೂರನ್ನು ಪರಿಶೀಲನೆ ನಡೆಸುವುದಾಗಿ ಹೇಳಿ ತೆರಳಿದರು.

750 ಮೀಟರ್ ನಡಿಗೆ:ನಿರಂತರ ಮಳೆಯಿಂದ ಪಟ್ಟಣದ ಮುಖ್ಯರಸ್ತೆ ಸಂಪೂರ್ಣ ಜಲಾವೃತವಾಗಿದ್ದು, ಇದರಲ್ಲಿಯೇ ಪಟ್ಟಣದ ಕೆಸಿಸಿ ಬ್ಯಾಂಕ್‌ನಿಂದ ಬೀರೇಶ್ವರ ದೇವಸ್ಥಾನದವರೆಗೆ ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳು ನಡೆದು ಅಕ್ಕಪಕ್ಕ ಕಟ್ಟಡಗಳು ಹಾಗೂ ಉಳಿದಂತೆ ಎಲ್ಲ ವಿಷಯ ಗಮನಿಸಿದರು.

ಈ ವೇಳೆ ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಯಪ್ಪಗೋಳ, ಪಿಡಬ್ಲ್ಯೂಡಿ ಅಧಿಕಾರಿಗಳು, ಭೂಮಾಪನ ಇಲಾಖೆ ಅಧಿಕಾರಿಗಳ ತಂಡ ಉಪಸ್ಥಿತರಿದ್ದರು.

ನ್ಯಾಯಾಲಯ ನೀಡಿದ ನಿರ್ದೇಶನ ಪಾಲಿಸುತ್ತಿದ್ದೇನೆ ದೂರುದಾರರು ಸಲ್ಲಿಸಿರುವ ಆಕ್ಷೇಪಣೆ, ಸಲಹೆ ಹಾಗೂ ದಾಖಲೆ ಪರಿಶೀಲಿಸುತ್ತಿದ್ದು ಸೂಕ್ತ ಆದೇಶ ಹೊರಡಿಸುತ್ತೇನೆ, ಅಗಕಲೀಕರಣಕ್ಕೆ ಚುರುಕು ನೀಡುವ ಮೂಲಕ ಜನರ ಸಮಸ್ಯೆಗೆ ಶಾಶ್ವತ ಪರಿಹಾರ ಎಂದು ಜಿಲ್ಲಾಧಿಕಾರಿ ವಿಜಯ ಮಹಾಂತೇಶ ದಾನಮ್ಮನವರ ಹೇಳಿದರು.