ಸಾರಾಂಶ
-ಬಜ್ಪೆಯಲ್ಲಿ ಹಿಂದೂ ಕಾರ್ಯಕರ್ತನ ಹತ್ಯೆ ಖಂಡಿಸಿ ಬಿಜೆಪಿ, ವಿಶ್ವಹಿಂದೂ ಪರಿಷತ್, ಭಜರಂಗದಳದಿಂದ ರಸ್ತೆ ತಡೆ, ಪ್ರತಿಭಟನೆ
--ಕನ್ನಡಪ್ರಭ ವಾರ್ತೆ ಸಾಗರ
ಮಂಗಳೂರಿನ ಬಜ್ಪೆಯಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ಸಂಜೆ ಬಿಜೆಪಿ, ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳದ ವತಿಯಿಂದ ಶಿವಪ್ಪನಾಯಕ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಲಾಯಿತು.ಪ್ರತಿಭಟನೆಯಲ್ಲಿ ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹೆಚ್.ಹಾಲಪ್ಪ ಮಾತನಾಡಿ, ಹಾಡುಹಗಲೆ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಅವರನ್ನು ಭೀಕರವಾಗಿ ಹತ್ಯೆ ಮಾಡಿರುವ ಮುಸ್ಲಿಂ ಜಿಹಾದಿಗಳ ಕೃತ್ಯ ಖಂಡನೀಯ. ಸುಹಾಸ್ ಶೆಟ್ಟಿ ಅವರ ಹತ್ಯೆ ಮಾಡಿದವರನ್ನು ಬಂಧಿಸಿ ಠಾಣೆಯಲ್ಲಿರಿಸಿ ರಾಜಾತಿಥ್ಯ ಕೊಡುವುದು ಬೇಡ. ಹತ್ಯೆಕೋರರನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲಿ, ಹಿಂದೂಗಳ ಹತ್ಯೆ ಹೆಚ್ಚುತ್ತಿರುವ ಕಾಲಘಟ್ಟದಲ್ಲಿ ಪೊಲೀಸರ ಕೈಗೆ ಬಂದೂಕು ಕೊಟ್ಟಿರುವುದು ಅಲಂಕಾರಕ್ಕಲ್ಲ. ಹತ್ಯೆ ಮಾಡಿದವರನ್ನು ನಿರ್ಧಾಕ್ಷಿಣ್ಯವಾಗಿ ಸಾಯಿಸುವ ಮೂಲಕ ಇಂತಹ ಕೃತ್ಯ ಮರುಕಳಿಸದಂತೆ ನೋಡಿಕೊಳ್ಳಿ. ಸಾರ್ವಜನಿಕವಾಗಿ ಕ್ರೌರ್ಯ ಮೆರೆಯುವವರು, ದೇಶವನ್ನು ಒಡೆಯುವವರನ್ನು ಹುಡುಕಿಕೊಂಡು ಹೋಗಿ ಗುಂಡಿಕ್ಕಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಜಿಹಾದಿಗಳಿಗೆ ಬೆಂಬಲ ನೀಡುತ್ತಿದೆ. ಸಾರಿಗೆ ಬಸ್ ನಿಲ್ಲಿಸಿ ನಮಾಜ್ ಮಾಡುತ್ತಿದ್ದಾರೆ. ಸರ್ಕಾರ ಏನು ಮಾಡುತ್ತಿದೆ. ಕಾನೂನು ತನ್ನ ಮಾನ್ಯತೆ ಕಳೆದುಕೊಳ್ಳುತ್ತಿದೆ. ನಮ್ಮ ಪೊಲೀಸರು ದಕ್ಷರಿದ್ದಾರೆ. ಆದರೆ, ಸಿದ್ದರಾಮಯ್ಯ ಅವರ ಸರ್ಕಾರ ಪೊಲೀಸರ ಕೈಕಟ್ಟಿ ನಿಲ್ಲಿಸಿದೆ. ಕೊಲೆ ನಡೆದು ಒಂದು ದಿನ ಕಳೆದರೂ ಆರೋಪಿಗಳನ್ನು ಈತನಕ ಬಂಧಿಸಿಲ್ಲ. ಜಿಹಾದಿಗಳನ್ನು ಪೋಷಿಸುವವರನ್ನು ಮೊದಲು ಬಂಧಿಸಿ. ಕೂಡಲೆ ಸರ್ಕಾರ ಆರೋಪಿಗಳಿಗೆ ಯಾರೇ ರಕ್ಷಣೆ ಕೊಟ್ಟರೂ ಅವರ ಮನೆ ಧ್ವಂಸ ಮಾಡುತ್ತೇವೆ ಎಂದು ಆದೇಶ ಹೊರಡಿಸಲಿ. ತಕ್ಷಣ ಸುಹಾಸ್ ಶೆಟ್ಟಿ ಕೊಲೆಗಡುಕರಿಗೆ ತಕ್ಕ ಶಿಕ್ಷೆ ಕೊಡಲೇಬೇಕು ಎಂದು ಒತ್ತಾಯಿಸಿದರು.ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷೆ ಪ್ರತಿಮಾ ಜೋಗಿ ಮಾತನಾಡಿ, ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಹತ್ಯೆ ಮಾಡಿರುವ ಜಿಹಾದಿಗಳನ್ನು ತಕ್ಷಣ ಬಂಧಿಸಬೇಕು ಎಂದು ಒತ್ತಾಯಿಸಿದರು.
ಟಿ.ಡಿ.ಮೇಘರಾಜ್, ಗಣೇಶ್ ಪ್ರಸಾದ್, ಸಂತೋಷ್ ಶಿವಾಜಿ, ಮೈತಿ ಪಾಟೀಲ್. ದೇವೇಂದ್ರಪ್ಪ ಮಾತನಾಡಿದರು. ಸವಿತಾ ವಾಸು, ವಿನೋದ್ ರಾಜ್, ಅ.ಶ್ರೀ.ಆನಂದ್, ರಮೇಶ್ ಎಚ್.ಎಸ್., ಮಧುರಾ ಶಿವಾನಂದ್, ಪ್ರೇಮ ಸಿಂಗ್, ವ.ಶಂ.ರಾಮಚಂದ್ರ ಭಟ್, ವಿ.ಮಹೇಶ್, ಸಂತೋಷ್ ಶೇಟ್, ಸಂತೋಷ್ ರಾಯಲ್, ಕೊಟ್ರಪ್ಪ, ಕೋಮಲ್ ರಾಘವೇಂದ್ರ ಇದ್ದರು.ಫೋಟೊ: ೩ಕೆ.ಎಸ್.ಎ.ಜಿ.೧ರಸ್ತೆ ತಡೆ ಪ್ರತಿಭಟನೆಯಲ್ಲಿ ಹೆಚ್.ಹಾಲಪ್ಪ ಮಾತನಾಡಿದರು