ದಾಬಸ್‍ಪೇಟೆ: ಕಳೆದ ಒಂದೂವರೆ ತಿಂಗಳಿಂದ ಮಳೆ ಇಲ್ಲದೆ ಕಂಗೆಟ್ಟಿದ್ದ ಧರೆಗೆ ಮಳೆರಾಯ ತಂಪನ್ನೆರೆದಿದೆ. ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ಗುಡುಗು ಮಿಂಚಿನ ಆರ್ಭಟದೊಂದಿಗೆ ಆರಂಭವಾದ ಮಳೆ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಧಾರಾಕಾರವಾಗಿಯೇ ಸುರಿಯಿತು. ಏಕಾಏಕಾಕಿ ಸುರಿದ ಮಳೆಯಲ್ಲಿ ಜನ ಪರದಾಡಿದರು
ದಾಬಸ್‍ಪೇಟೆ: ಕಳೆದ ಒಂದೂವರೆ ತಿಂಗಳಿಂದ ಮಳೆ ಇಲ್ಲದೆ ಕಂಗೆಟ್ಟಿದ್ದ ಧರೆಗೆ ಮಳೆರಾಯ ತಂಪನ್ನೆರೆದಿದೆ. ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ಗುಡುಗು ಮಿಂಚಿನ ಆರ್ಭಟದೊಂದಿಗೆ ಆರಂಭವಾದ ಮಳೆ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಧಾರಾಕಾರವಾಗಿಯೇ ಸುರಿಯಿತು. ಏಕಾಏಕಾಕಿ ಸುರಿದ ಮಳೆಯಲ್ಲಿ ಜನ ಪರದಾಡಿದರು.
ಈ ವರ್ಷದ ಮೊದಲ ಮಳೆಗೆ ರೈತರು ರಾಗಿ, ತೊಗರಿ, ಜೋಳ ಬಿತ್ತನೆ ಮಾಡಿದ್ದರು. ನಂತರ ಕಳೆದ ಎರಡು ತಿಂಗಳಿಂದ ಮಳೆ ಇಲ್ಲದೆ ಕಂಗಾಲಾಗಿದ್ದರು. ಜಾನುವಾರುಗಳಿಗೆ ಮೇವಿಲ್ಲದೆ ಪರದಾಡುತ್ತಿದ್ದರು. ಮಳೆಗಾಗಿ ಕೆಲವೆಡೆ ರೈತರು ವಿಶೇಷ ಪೂಜೆಯನ್ನೂ ಸಹ ಸಲ್ಲಿಸಿದ್ದರು.ವಾಡಿಕೆಯಂತೆ ಯುಗಾದಿ ಹಬ್ಬದ ಹಿಂದೆ ಮುಂದೆ ಪ್ರತಿ ವರ್ಷ ಮುಂಗಾರು ಪೂರ್ವ ಮಳೆ ಬೀಳುತ್ತಿತ್ತು. ಈ ವರ್ಷ ಬಿರುಬಿಸಿಲಿನ ನಡುವೆ ಜುಲೈ ತಿಂಗಳ ಮೂರನೇ ವಾರದಲ್ಲಿ ಮುಂಗಾರು ಮಳೆ ಬಂದಿದ್ದು ಬಿಟ್ಟರೆ ಮತ್ತೆ ಮಳೆ ಬರಲಿಲ್ಲ. ಕಳೆದ ವರ್ಷ ಇಷ್ಟೊತ್ತಿಗಾಗಲೇ ನಾಲ್ಕೈದು ಸಲ ಮಳೆಯಾಗಿತ್ತು. ತಡವಾಗಿಯಾದರೂ ಮಳೆ ಬಂದಿದ್ದು ನೆಮ್ಮದಿ ತಂದಿದೆ ಎಂದು ರೈತರು ಹರ್ಷ ವ್ಯಕ್ತಪಡಿಸಿದರು.
ಶಿವಗಂಗೆ ವೃತ್ತದ ವೀರಸಾಗರ ರಸ್ತೆ ಜಲಾವೃತಗೊಂಡು ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ಕೆಲ ಸಮಯ ಪರದಾಡಿದರು. ಅದಲ್ಲದೆ ರಾಷ್ಟ್ರೀಯ ಹೆದ್ದಾರಿ-48ರ ರಸ್ತೆಯಲ್ಲಿ ಅರ್ಧ ಅಡಿ ನೀರು ರಸ್ತೆ ಮೇಲೆ ಹರಿದು ಸವಾರರು ವಾಹನ ಚಲಿಸಲಾಗದೆ ಟ್ರಾಫಿಕ್ ಜಾಮ್ ಉಂಟಾಗಿತ್ತು.ಕೆಲ ತಿಂಗಳುಗಳಿಂದ ಚರಂಡಿಯಲ್ಲಿ ಬಿದ್ದಿದ್ದ ಕಸಕಡ್ಡಿ, ಪ್ಲಾಸ್ಟಿಕ್ ವಸ್ತುಗಳು ಮಳೆಯಿಂದ ತುಂಬಿದ ಚರಂಡಿ ಮುಖಾಂತರ ರಸ್ತೆಯಲ್ಲೆಲ್ಲಾ ತೇಲುತ್ತಿದ್ದವು. ಸೋಮವಾರ ಸಂಜೆ 5.30ರಿಂದ ರಾತ್ರಿ 8 ಗಂಟೆವರೆಗೆ ಸುರಿದ ಮಳೆಯಿಂದ ಭಾರಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು.
ಪೋಟೋ 4 * 5 : ಜಲಾವೃತಗೊಂಡಿರುವ ಶಿವಗಂಗೆ ರಸ್ತೆ.ಪೋಟೋ 6 : ರಾಷ್ಟ್ರೀಯ ಹೆದ್ದಾರಿ-48ರಲ್ಲಿ ಅರ್ಧ ಅಡಿ ನೀರು ರಸ್ತೆ ಮೇಲೆ ನಿಂತಿರುವುದು.