ಸಾರಾಂಶ
ಬಾಳೆಹೊನ್ನೂರು: ಬಾಳೆಹೊನ್ನೂರಿನಿಂದ ಮೆಣಸುಕೊಡಿಗೆ ಮೂಲಕ ಮೇಲ್ಪಾಲ್-ಕೊಪ್ಪ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಬದಿಯಲ್ಲಿ ಧರೆ ಕುಸಿದು ರಸ್ತೆ ಸಂಪರ್ಕ ಕಡಿತದ ಆತಂಕ ಎದುರಾಗಿದೆ.
ಬಾಳೆಹೊನ್ನೂರು: ಬಾಳೆಹೊನ್ನೂರಿನಿಂದ ಮೆಣಸುಕೊಡಿಗೆ ಮೂಲಕ ಮೇಲ್ಪಾಲ್-ಕೊಪ್ಪ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಬದಿಯಲ್ಲಿ ಧರೆ ಕುಸಿದು ರಸ್ತೆ ಸಂಪರ್ಕ ಕಡಿತದ ಆತಂಕ ಎದುರಾಗಿದೆ.ಮೆಣಸುಕೊಡಿಗೆ ಭಗತ್‌ಸಿಂಗ್ ಕ್ರೀಡಾಂಗಣ ಸಮೀಪದ ಮುಖ್ಯರಸ್ತೆಯ ತಿರುವಿನಲ್ಲಿ ಇತ್ತೀಚೆಗೆ ಸುರಿದ ನಿರಂತರ ಮಳೆಗೆ ಧರೆ ಕುಸಿದು ದೊಡ್ಡ ಕಂದಕ ನಿರ್ಮಾಣವಾಗಿರುವ ಜತೆಗೆ ರಸ್ತೆಯ ಅಂಚಿನವರೆಗೆ ಭೂಮಿ ಕುಸಿದಿದೆ. ಮಳೆ ಇನ್ನೂ ಅಧಿಕಗೊಂಡಲ್ಲಿ ರಸ್ತೆಯೇ ಕುಸಿದು ಬಾಳೆಹೊನ್ನೂರಿನಿಂದ ಮೇಲ್ಪಾಲ್-ಕೊಪ್ಪ ಸಂಪರ್ಕವೇ ಕಡಿತ ಗೊಳ್ಳಲಿದೆ. ಲೋಕೋಪಯೋಗಿ ಹಾಗೂ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕೂಡಲೇ ಇತ್ತ ಗಮನಹರಿಸಿ ಕುಸಿದ ಜಾಗದಲ್ಲಿ ಸೂಕ್ತ ಕಾಮಗಾರಿ ನಿರ್ವಹಿಸಿ ಮುನ್ನೆಚ್ಚರಿಕಾ ಕ್ರಮಕೈಗೊಳ್ಳಬೇಕು ಎಂದು ಬಿ.ಕಣಬೂರು ಗ್ರಾಪಂಸದಸ್ಯ ಬಿ.ಜಗದೀಶ್ಚಂದ್ರ ಒತ್ತಾಯಿಸಿದ್ದಾರೆ. ೨೩ಬಿಹೆಚ್‌ಆರ್ ೬: ಬಾಳೆಹೊನ್ನೂರು ಸಮೀಪದ ಮೆಣಸುಕೊಡಿಗೆ ಬಳಿ ಮೇಲ್ಪಾಲ್-ಕೊಪ್ಪ ಮುಖ್ಯರಸ್ತೆಯ ಬದಿಯಲ್ಲಿ ಕುಸಿತಗೊಂಡು ಕಂದಕ ನಿರ್ಮಾಣಗೊಂಡಿರುವುದು.