ದರೋಡೆ ಪ್ರಕರಣ: ಎಂಟು ಮಂದಿ ಆರೋಪಿಗಳ ಬಂಧನ

| Published : Apr 08 2024, 01:08 AM IST

ಸಾರಾಂಶ

ಒರ್ವ ಆರೋಪಿ ನಾಪತ್ತೆಯಾಗಿದ್ದಾನೆ. ಕೃತ್ಯಕ್ಕೆ ಬಳಸಿದ ಸ್ಕಾರ್ಪಿಯೋ, 2 ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ಕುಶಾಲನಗರ

ಯುವಕನನ್ನು ಅಪಹರಿಸಿ ಗುರುವಾರ ರಾತ್ರಿ ನಡೆದ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆ ಸೇರಿದಂತೆ ಒಟ್ಟು 8 ಮಂದಿಯನ್ನು ಕುಶಾಲನಗರ ಪೊಲೀಸರ ತಂಡ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಮರಾಜ್ ಮಾಹಿತಿ ನೀಡಿದ್ದಾರೆ.

ಅವರು ಕುಶಾಲನಗರ ಪಟ್ಟಣ ಪೊಲೀಸ್ ಠಾಣೆ ಆವರಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ಕೃತ್ಯಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಮೈಸೂರಿನ ರಾಜೀವ್ ನಗರದ ಯಾಸಿನ್ (21), ಮಹಿಳೆ ಮೈಸೂರಿನ ಶ್ರೀರಾಮಪುರದ ರುಕ್ಸಾನ (23), ಗೌಸಿಯ ನಗರದ ಅಬ್ದುಲ್ 21, ಸುಹೇಲ್ ಅಹ್ಮದ್ 30, ಪಿರಿಯಾಪಟ್ಟಣದ ಯಾಸೀನ್ 23, ಮೈಸೂರು ಗೌಸಿಯ ನಗರದ ಫೈಸಲ್ ಖಾನ್ 23, ಮೈಸೂರು ರಾಜೀವ್ ನಗರದ ಮುದಾಸೀರ್ 24 , ಎಂಬವರನ್ನು ಬಂಧಿಸಲಾಗಿದೆ ಎಂದು.

ಓರ್ವ ಆರೋಪಿ ನಾಪತ್ತೆಯಾಗಿದ್ದಾನೆ. ಕೃತ್ಯಕ್ಕೆ ಬಳಸಿದ ಸ್ಕಾರ್ಪಿಯೊ ಮತ್ತು 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನೋರ್ವ ಆರೋಪಿ ಮೈಸೂರಿನ ಗೌಸಿಯ ನಗರದ ಪಿಳ್ಳೈ ಎಂಬಾತ ತಲೆಮರೆಸಿಕೊಂಡಿದ್ದಾನೆ ಎಂದು

ಮೈಸೂರು ನಗರದ ಶ್ರೀರಾಮಪುರದ ಮಹಿಳೆ ರುಕ್ಸಾನ (23)ಮೂಲಕ ಕುಶಾಲನಗರದ ಖಾಸಗಿ ಬಸ್ ನಿರ್ವಾಹಕ ಹೇಮಂತ್ ಎಂಬಾತನನ್ನು ಸಂಪರ್ಕಿಸಿ ಮೈಸೂರಿನ ಗ್ಯಾಂಗ್ ಒಂದು ಈ ಕೃತ್ಯ ನಡೆಸಿದ್ದು ಒಟ್ಟು ಎಂಟು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಓರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ರಾಮರಾಜನ್ ತಿಳಿಸಿದ್ದಾರೆ.

ಕುಶಾಲನಗರದಲ್ಲಿ ಖಾಸಗಿ ಬಸ್ ನಿರ್ವಾಹಕನಾಗಿ ಕೆಲಸ ಮಾಡುತ್ತಿದ್ದ ಹೇಮಂತ್ (27) ಗುರುವಾರ ಸಂಜೆ ಮಹಿಳೆಯೊಬ್ಬಳ ಮೂಲಕ ಸಂಪರ್ಕಿಸಿ ಸಹಾಯ ಕೋರಿದ್ದು ಕುಶಾಲನಗರ ಪಟ್ಟಣದ ಸರ್ಕಾರಿ ಬಸ್ ನಿಲ್ದಾಣ ಸಮೀಪ ಬಂದ ವೇಳೆ ಹೇಮಂತ್ ನನ್ನು ಮೈಸೂರು ಕಡೆಯಿಂದ ಬಂದ ಏಳು ಮಂದಿ ಆಗಂತುಕರು ಅಪಹರಣ ಮಾಡಿದ್ದಾರೆ. ಹೇಮಂತ್ ಬೈಕನ್ನು ಆರೋಪಿಯೊಬ್ಬ ಚಾಲನೆ ಮಾಡಿ ಮೈಸೂರು ಕಡೆಗೆ ತೆಗೆದುಕೊಂಡು ಹೋಗಿದ್ದಾನೆ. ಪ್ರಕರಣದ ಕಿಂಗ್ ಪಿನ್ ಮಹಿಳೆ ತನ್ನ ಸ್ಕೂಟಿಯಲ್ಲಿ ಸ್ಥಳದಿಂದ ಪರಾರಿಯಾಗಿದ್ದಾಳೆ. ಆಕೆಯ ಸ್ಕೂಟಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಹೇಮಂತ್ ನನ್ನು ಆಗಂತುಕರು ತಾವು ಬಂದಿರುವ ಕಪ್ಪು ಬಣ್ಣದ ಸ್ಕಾರ್ಪಿಯೋ ವಾಹನದಲ್ಲಿ ಕೂರಿಸಿ ಕೊಪ್ಪ ಮೂಲಕ ಹೆದ್ದಾರಿಯಲ್ಲಿ ಸಾಗಿ ಹುಣಸೂರಿಗೆ ತೆರಳಿ ಅಜ್ಞಾತ ಪ್ರದೇಶ ಒಂದರಲ್ಲಿ ಹೇಮಂತ್ ಮೇಲೆ ಹಲ್ಲೆ ನಡೆಸಿ ಆತನಲ್ಲಿದ್ದ ಚಿನ್ನದ ಉಂಗುರ , ಚೈನ್, 4000 ನಗದು, ಮೊಬೈಲ್ ಮತ್ತು ವಾಚ್ ದೋಚಿ ನಂತರ 5 ಲಕ್ಷ ಹಣಕ್ಕೆ ಇಟ್ಟಿದ್ದರು ಎಂದು ಎಸ್ ಪಿ ಕೆ ರಾಮರಾಜನ್ ತಿಳಿಸಿದರು.

ನಂತರ ಆತನನ್ನು ಹುಣಸೂರಿನ ಅಜ್ಞಾತ ಸ್ಥಳದಲ್ಲಿ ಬಿಟ್ಟು ಆರೋಪಿಗಳು ಮೈಸೂರು ಕಡೆಗೆ ಪರಾರಿಯಾಗಿದ್ದಾರೆ.

ಬೆಳಗ್ಗೆ ಕುಶಾಲನಗರ ಪಟ್ಟಣ ಪೊಲೀಸ್ ಠಾಣೆಗೆ ತೆರಳಿ ಹೇಮಂತ್ ತನಗೆ ಆಗಿರುವ ವಂಚನೆ ಮತ್ತು ಹಲ್ಲೆ ದರೋಡೆ ಬಗ್ಗೆ ಹೇಮಂತ್ ಮಾಹಿತಿ ನೀಡಿದ್ದು ಈ ಹಿನ್ನೆಲೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಂದರ ರಾಜ್ ಮಾರ್ಗದರ್ಶನದಲ್ಲಿ ಕುಶಾಲನಗರ ಡಿ ವೈ ಎಸ್ ಪಿ ಆರ್ ವಿ ಗಂಗಾಧರಪ್ಪ ಮತ್ತು ಪೊಲೀಸ್ ಇನ್ಸ್ಪೆಕ್ಟರ್ ಪ್ರಕಾಶ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿ ಮೈಸೂರು ಕಡೆಗೆ ತೆರಳಿದಾಗ ಆರೋಪಿಗಳ ಸುಳಿವು ದೊರೆತು ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಮಂದಿಯನ್ನು ವಶಕ್ಕೆ ತೆಗೆದುಕೊಂಡು ಕ್ರಮ ಕೈಗೊಳ್ಳಲಾಗಿದೆ.

ಕೃತ್ಯಕ್ಕೆ ಬಳಸಿದ KA01MB 0602 ನೋಂದಣಿಯ ಸ್ಕಾರ್ಪಿಯೊ ವಾಹನ, 30 ಗ್ರಾಂ ತೂಕದ ಚಿನ್ನಾಭರಣ, ಎರಡು ಮೊಬೈಲ್, 2 ಸ್ಕೂಟಿ ದ್ವಿಚಕ್ರ ವಾಹನಗಳು, ನಗದು 5 ಸಾವಿರ , ಆರೋಪಿತರಿಗೆ ಸೇರಿದ 7 ಮೊಬೈಲ್ ಸೇರಿದಂತೆ 5,97,0000 ರೂ ಮೌಲ್ಯದ ವಸ್ತುಗಳನ್ನು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ ಎಂದು ರಾಮರಾಜನ್ ಮಾಹಿತಿ ನೀಡಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಧಿಕಾರಿ ಕೆ ರಾಮರಾಜನ್ ಮತ್ತು ಕೊಡಗು ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕೆ ಎಸ್ ಸುಂದರ್ ರಾಜ್ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡುವ ಮೂಲಕ ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್ಪಿ ಆರ್ ವಿ ಗಂಗಾಧರಪ್ಪ ಮತ್ತು ಕುಶಾಲನಗರ ಪಟ್ಟಣ ಪೊಲೀಸ್ ಇನ್ಸ್ಪೆಕ್ಟರ್ ಪ್ರಕಾಶ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕುಶಾಲನಗರ ಸಂಚಾರಿ ಪೊಲೀಸ್ ಠಾಣಾಧಿಕಾರಿ ಕಾಶಿನಾಥ್ ಬಗಲಿ, ಅಪರಾಧ ಪತ್ತೆ ವಿಭಾಗದ ಎಸ್ ಐ ಪಿ ಎಸ್ ಉಮಾ, ಸಿಬ್ಬಂದಿಗಳಾದ ಸುದೀಶ್, ರಂಜಿತ್, ಜಯಪ್ರಕಾಶ್, ಸಂದೀಪ್, ಪ್ರಕಾಶ್, ಉಮೇಶ್, ಸಮಂತ್, ಸಂದೇಶ್ ಪಾಲ್ಗೊಂಡಿದ್ದರು.