ಸಂವಹನ, ಭಾವನಾತ್ಮಕ ಬುದ್ಧಿವಂತಿಕೆ, ನಿರ್ಧಾರ ತೆಗೆದುಕೊಳ್ಳುವುದು, ನಿಯೋಗ ಮತ್ತು ಸಬಲೀಕರಣ, ಹೊಂದಿಕೊಳ್ಳುವಿಕೆ ಕಾರ್ಯತಂತ್ರದ ಚಿಂತನೆ ಮತ್ತು ಹೊಣೆಗಾರಿಕೆ, ನಂಬಿಕೆಯನ್ನು ಬೆಳೆಸಲು ಮತ್ತು ಫಲಿತಾಂಶಗಳನ್ನು ಹೆಚ್ಚಿಸಲು ಜನರು ದೃಷ್ಟಿ ಮತ್ತು ಕಾರ್ಯಗತಗೊಳಿಸುವಿಕೆಯ ಮೇಲೆ ಕೃತಕ ಬುದ್ದಿ ಮತ್ತೆಯನ್ನು ಯಾವ ರೀತಿ ಕೇಂದ್ರೀಕರಿಸುತ್ತೇವೆ ಎಂಬುದು ಮುಖ್ಯವಾಗುತ್ತದೆ.
ಕನ್ನಡಪ್ರಭ ವಾರ್ತೆ, ತುಮಕೂರು
ರೊಬೊಟಿಕ್ಸ್ ನಲ್ಲಿ ಕಾರ್ಯತಂತ್ರ ಮತ್ತು ಮುಂಚೂಣಿ ನಾಯಕತ್ವವು ತಾಂತ್ರಿಕ ಪರಿಣತಿಯ ದೃಷ್ಟಿಕೋನದೊಂದಿಗೆ ಬೆಸದುಕೊಂಡು ಕೆಲಸ ಮಾಡುವುದರಿಂದ ಹೆಚ್ಚು ಪ್ರಗತಿ ಸಾಧಿಸಬಹುದು ಎಂದು ಐಇಇಇನ ರೊಬೊಟಿಕ್ಸ್ ಮತ್ತು ಆಟೋಮೆಷನ್ ಸೊಸೈಟಿ ರಾಜ್ಯ ಘಟಕದ ಅಧ್ಯಕ್ಷ ಡಾ. ನಿಪ್ಪುನ್ ಕುಮಾರ್ ಎ.ಎ. ಅಭಿಪ್ರಾಯಪಟ್ಟರು.ನಗರದ ಶ್ರೀ ಸಿದ್ಧಾರ್ಥ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಐಇಇಇ ರೊಬೊಟಿಕ್ಸ್ ಮತ್ತು ಆಟೊಮೇಷನ್ ಸೊಸೈಟಿ ವಿದ್ಯಾರ್ಥಿ ಶಾಖೆಯ ಉದ್ಘಾಟನೆ ಮಾಡಿ ‘ಕೃತಕ ಬುದ್ದಿ ಮತ್ತೆ ಯುಗದಲ್ಲಿ ಬುದ್ಧಿವಂತ ಯಂತ್ರಗಳನ್ನು ನಿರ್ಮಿಸುವುದು " ಎಂಬ ವಿಷಯದ ಕುರಿತು ಅವರು ಮಾತನಾಡಿದರು.
ಕೃತಕ ಬುದ್ದಿ ಮತ್ತೆ ಕಾರ್ಯಾಚರಣೆಯಲ್ಲಿ ನೈತಿಕ ನಿಯೋಜನೆಯ ಮೇಲೆ ಕೇಂದ್ರೀಕರಿಸುವುದು ಮತ್ತು ಮಾನವ-ರೋಬೋಟ್ ಸಹಯೋಗವನ್ನು ಬೆಳೆಸಲು ಬದಲಾವಣೆಯನ್ನು ನಿರ್ವಹಿಸುವುದು ಅಗತ್ಯವಾಗಿರುತ್ತದೆ. ಪರಿಣಾಮಕಾರಿ ಮತ್ತು ಕ್ರಿಯಾತ್ಮಕ ತಂಡಗಳನ್ನು ಬೆಳೆಸಬೇಕು. ಕೈಗಾರೀಕರಣದ ಪರಿಣಾಮವನ್ನು ನಿರ್ವಹಿಸಲು ಹೆಚ್ಚಿನ ಭಾವನಾತ್ಮಕ ಬುದ್ಧಿವಂತಿಕೆಯನ್ನು ಹೊಂದಿರಬೇಕು. ಜೊತೆಗೆ ಪಾರದರ್ಶಕತೆಯನ್ನು ಕಾಪಾಡಿಕೊಂಡು ನಾವೀನ್ಯತೆಯನ್ನು ಹೆಚ್ಚಿಸಬೇಕು ಎಂದು ಡಾ. ನಿಪ್ಪುನ್ ಕುಮಾರ್ ಕರೆ ನೀಡಿದರು.ಸಂವಹನ, ಭಾವನಾತ್ಮಕ ಬುದ್ಧಿವಂತಿಕೆ, ನಿರ್ಧಾರ ತೆಗೆದುಕೊಳ್ಳುವುದು, ನಿಯೋಗ ಮತ್ತು ಸಬಲೀಕರಣ, ಹೊಂದಿಕೊಳ್ಳುವಿಕೆ ಕಾರ್ಯತಂತ್ರದ ಚಿಂತನೆ ಮತ್ತು ಹೊಣೆಗಾರಿಕೆ, ನಂಬಿಕೆಯನ್ನು ಬೆಳೆಸಲು ಮತ್ತು ಫಲಿತಾಂಶಗಳನ್ನು ಹೆಚ್ಚಿಸಲು ಜನರು ದೃಷ್ಟಿ ಮತ್ತು ಕಾರ್ಯಗತಗೊಳಿಸುವಿಕೆಯ ಮೇಲೆ ಕೃತಕ ಬುದ್ದಿ ಮತ್ತೆಯನ್ನು ಯಾವ ರೀತಿ ಕೇಂದ್ರೀಕರಿಸುತ್ತೇವೆ ಎಂಬುದು ಮುಖ್ಯವಾಗುತ್ತದೆ ಎಂದು ಅವರು ಹೇಳಿದರು.
ಶ್ರೀ ಸಿದ್ಧಾರ್ಥ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಶೋಧನಾ ವಿಭಾಗದ ಸಂಯೋಜಕರಾದ ಡಾ. ಶ್ರೀಕಂಠೇಶ್ವರ ಸ್ವಾಮಿ ಮಾತನಾಡಿ, ರೊಬೊಟಿಕ್ಸ್ ಮತ್ತು ಆಟೊಮೇಷನ್ ಸೊಸೈಟಿ ವಿದ್ಯಾರ್ಥಿ ಶಾಖೆ ಅಧ್ಯಾಯದ ರಚನೆಯು ಕೇವಲ ಒಂದು ಕ್ಲಬ್‌ನ ಆರಂಭವಲ್ಲ. ಇದು ರೊಬೊಟಿಕ್ಸ್‌ನಲ್ಲಿ ಕಲಿಕೆ, ಸಹಯೋಗ, ಸಂಶೋಧನೆ ಮತ್ತು ನಾಯಕತ್ವಕ್ಕಾಗಿ ರಚನಾತ್ಮಕ ಪರಿಸರ ವ್ಯವಸ್ಥೆಯ ಆರಂಭವಾಗಿದೆ ಎಂದು ಹೇಳಿದರು.ರೊಬೊಟಿಕ್ಸ್ ಮತ್ತು ಆಟೊಮೇಷನ್ ಸೊಸೈಟಿ ಪ್ರಾಧ್ಯಾಪಕ ವಿಭಾಗದ ಸಲಹೆಗಾರರಾದ ಡಾ. ಕೋಮಲಾ ಅವರು ಮಾತನಾಡಿ, ತಾಂತ್ರಿಕ ಶ್ರೇಷ್ಠತೆಯನ್ನು ಬೆಳೆಸುವಲ್ಲಿ ವಿದ್ಯಾರ್ಥಿ ಘಟಕಗಳ ಪಾತ್ರ ಮುಖ್ಯವಾಗಿದೆ. ರೊಬೊಟಿಕ್ಸ್ ನಾವೀನ್ಯತೆಗೆ ಕೊಡುಗೆ ನೀಡುವ ಬಲವಾದ ತಾಂತ್ರಿಕ ಸಮುದಾಯವಾಗಿ ಬೆಳೆಯಬೇಕು ಎಂದು ಹೇಳಿದರು.ಪ್ರಾಧ್ಯಾಪಕರಾದ ಡಾ. ಸುರೇಶ್, ಡಾ. ಮನು, ವಿದ್ಯಾರ್ಥಿ ಘಟಕ ಹರ್ಷಿತ ಬಿ.ಎಸ್, ದೃಷ್ಟಿ ಸಿ. ಕಾರ್ಯಕ್ರಮದಲ್ಲಿ ಹಾಜರಿದ್ದರು.