ರೋಹನ್ ಕಾರ್ಪೊರೇಶನ್, ಮಲೇರಿಯಾ ಪತ್ತೆ ಹಾಗೂ ತಡೆ ಕಾರ್ಯಗಳಲ್ಲಿ ಆರೋಗ್ಯ ಇಲಾಖೆಗೆ ಬೆಂಬಲ ನೀಡುವ ಉದ್ದೇಶದಿಂದ 100 ಟಾರ್ಚ್‌ಗಳನ್ನು ವಿತರಿಸುವ ಸಮಾಜಮುಖಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತು.

ಮಂಗಳೂರು: ಮಂಗಳೂರಿನ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆಯಾದ ರೋಹನ್ ಕಾರ್ಪೊರೇಶನ್, ಮಲೇರಿಯಾ ಪತ್ತೆ ಹಾಗೂ ತಡೆ ಕಾರ್ಯಗಳಲ್ಲಿ ಆರೋಗ್ಯ ಇಲಾಖೆಗೆ ಬೆಂಬಲ ನೀಡುವ ಉದ್ದೇಶದಿಂದ 100 ಟಾರ್ಚ್‌ಗಳನ್ನು ವಿತರಿಸುವ ಸಮಾಜಮುಖಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತು.ಈ ಕಾರ್ಯಕ್ರಮ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಕಚೇರಿಯಲ್ಲಿ ನಡೆಯಿತು.

ಜಿಲ್ಲಾ ರೋಗವಾಹಕ ಅಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಜಸಿಂತ ಡಿಸೋಜಾ ಉಪಸ್ಥಿತರಿದ್ದು ರೋಹನ್ ಕಾರ್ಪೊರೇಶನ್‌ನ ಸೇಲ್ಸ್ ಮ್ಯಾನೇಜರ್ ಸವಿಲ್ ಅವರು ಆರೋಗ್ಯ ಇಲಾಖೆಗೆ ಟಾರ್ಚ್‌ಗಳನ್ನು ಹಸ್ತಾಂತರಿಸಿದರು.

ಜಿಲ್ಲಾ ರೋಗವಾಹಕ ಅಶ್ರಿತ ರೋಗಗಳ ನಿಯಂತ್ರಣ ಅಧಿಕಾರಿ ಡಾ.ಜಸಿಂತ ಡಿಸೋಜಾ, ಮಲೇರಿಯಾ ಪತ್ತೆ ಮತ್ತು ತಡೆ ಕಾರ್ಯಗಳಲ್ಲಿ ಕ್ಷೇತ್ರ ಮಟ್ಟದ ಪರಿಶೀಲನೆ ಅತ್ಯಂತ ಪ್ರಮುಖವಾಗಿದೆ. ಇಂತಹ ಸಂದರ್ಭಗಳಲ್ಲಿ ಟಾರ್ಚ್‌ಗಳಂತಹ ಉಪಕರಣಗಳು ಅಗತ್ಯವಾಗಿದ್ದು, ರೋಹನ್ ಕಾರ್ಪೊರೇಶನ್ ನೀಡಿರುವ ಈ ಸಹಕಾರ ಆರೋಗ್ಯ ಇಲಾಖೆಯ ಕಾರ್ಯಕ್ಷಮತೆಯನ್ನು ಇನ್ನಷ್ಟು ಬಲಪಡಿಸುತ್ತದೆ ಎಂದು ಹೇಳಿದರು.

ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಶ್ರಮಿಸುತ್ತಿರುವ ಆರೋಗ್ಯ ಸಿಬ್ಬಂದಿಗಳಿಗೆ ಅಗತ್ಯ ಸಾಧನಗಳನ್ನು ಒದಗಿಸುವುದು ನಮ್ಮ ಹೊಣೆಗಾರಿಕೆ. ಈ ಸಮಾಜಮುಖಿ ಕಾರ್ಯಕ್ರಮ ರೋಹನ್ ಕಾರ್ಪೊರೇಶನ್‌ನ ಸಾಮಾಜಿಕ ಜವಾಬ್ದಾರಿಯ ಭಾಗವಾಗಿದೆ ಎಂದು ರೋಹನ್ ಕಾರ್ಪೊರೇಶನ್‌ನ ಸೇಲ್ಸ್ ಮ್ಯಾನೇಜರ್ ಸವಿಲ್ ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಕೀಟ ಶಾಸ್ತ್ರಜ್ಞರು ಮಂಜುಳ, ವಿಭಾಗೀಯ ಕೀಟ ಶಶಾಂಜ್ಞರು ಚೇತನ್, ಹಿರಿಯ ಆರೋಗ್ಯ ನಿರೀಕ್ಷಕರು ಸಲೀಮ್ ಪಾಷಾ, ಕೃಷ್ಣ ಮೂರ್ತಿ ಆರೋಗ್ಯ ನಿರೀಕ್ಷಕರು ಹಾಗೂ ರೋಹನ್ ಕಾರ್ಪೊರೇಶನ್‌ನ ಸುರಕ್ಷತಾ ಅಧಿಕಾರಿ ಶ್ರೀ ಪುನೀತ್ ಉಪಸ್ಥಿತರಿದ್ದರು.