2025- 28ನೇ ಸಾಲಿನ ಅವಧಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಚುನಾಯಿತರಾದ ಅಧ್ಯಕ್ಷ ರಾಜು ಹೆಬ್ಬಳ್ಳಿ, ಉಪಾಧ್ಯಕ್ಷ ವಿ.ಡಿ. ಕಣವಿ, ಪ್ರಭುಸ್ವಾಮಿ ಅರವಟಗಿಮಠ, ಕಾರ್ಯದರ್ಶಿ ಸಂಗಪ್ಪ ವ್ಯಾಪಾರಿ ಇತರರನ್ನು ಸನ್ಮಾನಿಸಲಾಯಿತು.

ಗದಗ: ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಪತ್ರಕರ್ತರ ಪಾತ್ರವೂ ಪ್ರಮುಖವಾಗಿದೆ ಎಂದು ಸಿಆರ್‌ಪಿಎಫ್ ಎಎಸ್‌ಐ ಎಂ.ವೈ. ರೋಣದ ತಿಳಿಸಿದರು.

ಭಾನುವಾರ ನಗರದ ಪತ್ರಿಕಾ ಭವನದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕಕ್ಕೆ 2025- 28ನೇ ಸಾಲಿನ ಅವಧಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಚುನಾಯಿತರಾದ ಎಲ್ಲ ಪದಾಧಿಕಾರಿಗಳು ಹಾಗೂ ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರಿಗೆ ಹುಯಿಲಗೋಳ ಗ್ರಾಮದ ರಫ್ ಆ್ಯಂಡ್ ಟಫ್ ಯುವಕ ಮಂಡಳ ಹಾಗೂ ಸ್ವಾಮಿ ವಿವೇಕಾನಂದ ಯುವಕ ಮಂಡಳ ಜಂಟಿಯಾಗಿ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಯುವ ಮುಖಂಡ ಶ್ರೀಕಾಂತ ಹಟ್ಟಿ ಮಾತನಾಡಿ, ಜೀವನದಲ್ಲಿ ಪ್ರಾಮಾಣಿಕತೆ ಇದ್ದರೆ ನಿಗದಿತ ಗುರಿ ಸಾಧಿಸುವ ಹಾದಿ ಸುಗಮವಾಗಲಿದೆ ಎಂದರು.

ಎಸ್.ಎನ್. ಸೊರಟೂರ ಮಾತನಾಡಿ, ಕಾನಿಪ ನೂತನ ಅಧ್ಯಕ್ಷ ರಾಜು ಹೆಬ್ಬಳ್ಳಿ ಅವರು 1996- 97ರಲ್ಲಿ ಗ್ರಾಮದಲ್ಲಿ ಸ್ಥಾಪನೆಗೊಂಡ ರಫ್ ಆಂಡ್ ಟಫ್ ಯುವಕ ಮಂಡಳಿಯ ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿಯಾಗಿ ಸಾರ್ವಜನಿಕ ಜೀವನಕ್ಕೆ ತೆರೆದುಕೊಳ್ಳಲು ವೇದಿಕೆ ಸಿಕ್ಕಿತು. ಅಲ್ಲಿಂದ ಗ್ರಾಪಂ ಸದಸ್ಯರಾಗಿ, ಪತ್ರಿಕೋದ್ಯಮ ಪ್ರವೇಶಿಸಿ, ವಿವಿಧ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸಿ, ಇದೀಗ ಸತತ ಎರಡನೇ ಅವಧಿಗೆ ಅಧ್ಯಕ್ಷರಾಗಿರುವುದು ನಮ್ಮೆಲ್ಲ ಸ್ನೇಹಿತರಿಗೆ ಹೆಮ್ಮೆಯ ಸಂಗತಿ ಎಂದರು.

2025- 28ನೇ ಸಾಲಿನ ಅವಧಿಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಚುನಾಯಿತರಾದ ಅಧ್ಯಕ್ಷ ರಾಜು ಹೆಬ್ಬಳ್ಳಿ, ಉಪಾಧ್ಯಕ್ಷ ವಿ.ಡಿ. ಕಣವಿ, ಪ್ರಭುಸ್ವಾಮಿ ಅರವಟಗಿಮಠ, ಕಾರ್ಯದರ್ಶಿ ಸಂಗಪ್ಪ ವ್ಯಾಪಾರಿ, ಖಜಾಂಚಿ ರಾಮಣ್ಣ ವಗ್ಗಿ, ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ವೆಂಕಟೇಶ ಇಮರಾಪೂರ, ರುದ್ರಗೌಡ ಪಾಟೀಲ, ಮೌನೇಶ ಬಡಿಗೇರ, ಮಂಜುನಾಥ ಪತ್ತಾರ, ಸಂತೋಷ ಕೊಣ್ಣೂರ, ಯಲ್ಲಪ್ಪ ತಳವಾರ ಅವರಿಗೆ ತಾಲೂಕಿನ ಹುಯಿಲಗೋಳ ಗ್ರಾಮದ ರಫ್ ಆಂಡ್ ಟಫ್ ಯುವಕ ಮಂಡಳ ಹಾಗೂ ಸ್ವಾಮಿ ವಿವೇಕಾನಂದ ಯುವಕ ಮಂಡಳ ಜಂಟಿಯಾಗಿ ಸನ್ಮಾನಿಸಲಾಯಿತು.

ಛಾಯಾಗ್ರಾಹಕ ವಿನಾಯಕ ಚೌಡಾಪೂರ, ವೈ.ಎಸ್. ಮಹೇಂದ್ರಕರ, ಪತ್ರಿಕಾ ಭವನದ ಪರಶುರಾಮ ಹಳ್ಳದ ಅವರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಯುವಕ ಸಂಘದ ಸಂಸ್ಥಾಪಕ ಹೇಮಂತ ದಾಸರ, ಎಚ್.ಎಫ್. ನದಾಫ, ಪ್ರವೀಣ ಹಟ್ಟಿ, ದೇವೇಂದ್ರಪ್ಪ ನೀರಲಗಿ, ಫಕ್ಕೀರೇಶ ಅಂಗಡಿ, ಮಾಜಿ ಸೈನಿಕ ದ್ಯಾಮನಗೌಡ ದಿಡ್ಡಿಮನಿ, ರಾಜು ಹೊಸೂರ, ಮುತ್ತು ಅಂಗಡಿ ಸೇರಿ ಹುಯಿಲಗೋಳ ಹಾಗೂ ನರಸಾಪುರ ಗ್ರಾಮದ ಯುವಕರು ಉಪಸ್ಥಿತರಿದ್ದರು. ನ್ಯಾಯವಾದಿ ಮಹೇಶ ಹಾಳಕೇರಿ ಸ್ವಾಗತಿಸಿ, ನಿರೂಪಿಸಿದರು.