ಸಾರಾಂಶ
ವಿದ್ಯಾರ್ಥಿಗಳ ಜೀವನ ದೋಣಿ ಇದ್ದಂತೆ. ನೀವು ಇಂತಹ ಸಂದರ್ಭ ಹಾಳು ಮಾಡಿಕೊಳ್ಳದೇ ಚೆನ್ನಾಗಿ ಓದಿ ಭವಿಷ್ಯ ರೂಪಿಸಿಕೊಳ್ಳಬೇಕು.
ಹರಪನಹಳ್ಳಿ: ದೇಶದ ಪ್ರಗತಿಯಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಪಾತ್ರ ಬಹುಮುಖ್ಯವಾಗಿದೆ ಎಂದು ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನಸ್ವಾಮಿ ಕಲ್ಮಠ್ ತಿಳಿಸಿದರು.
ತಾಲೂಕಿನ ಚಿರಸ್ತಹಳ್ಳಿ ಗ್ರಾಮದ ಶಾಲಾ ಆವರಣದಲ್ಲಿ ಅಂಬ್ಲಿ ದೊಡ್ಡಭರಮಪ್ಪ ಪ್ರಥಮದರ್ಜೆ ಕಾಲೇಜು ವತಿಯಿಂದ ಬುಧವಾರ ನಡೆದ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ವಾರ್ಷಿಕ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಎನ್ಎಸ್ಎಸ್ ಸ್ವಾತಂತ್ರ್ಯ ಪೂರ್ವದಲ್ಲಿ ಆರಂಭವಾದ ಸಂಸ್ಥೆ ಹೆಮ್ಮರವಾಗಿ ಬೆಳೆದಿದೆ. ನಾಲ್ಕು ಮಿಲಿಯನ್ ಶಿಬಿರಾರ್ಥಿಗಳನ್ನು ಹೊಂದಿದ್ದು, ದೇಶ ಸೇವೆಯಲ್ಲಿ ತೊಡಗಿದೆ. ಜತೆಗೆ ದೇಶಪ್ರೇಮ ಬೆಳೆಸುತ್ತದೆ ಎಂದರು.
ಶಿಬಿರಾರ್ಥಿಗಳು ರಾಷ್ಟ್ರೀಯ ಪರಂಪರೆಯ ಇತಿಹಾಸ ತಿಳಿದುಕೊಳ್ಳುವ ಮೂಲಕ ಸತ್ಪ್ರಜೆಗಳಾಗಿ ಶಿಸ್ತು, ಸರಳತೆ, ಸಂಯಮ ಬೆಳೆಸಿಕೊಳ್ಳಬೇಕು ಎಂದರು.ಮುಖಂಡ ಆನಂದ ಮಾತನಾಡಿ, ಶಿಬಿರದಲ್ಲಿ ಕಲಿತ ಮಾನವೀಯ ಮೌಲ್ಯಗಳನ್ನು ಶಿಬಿರಾರ್ಥಿಗಳು ಜೀವನದಲ್ಲಿ ಅಳವಡಿಕೊಳ್ಳಬೇಕು ಎಂದರು.
ಗ್ರಾಪಂ ಸದಸ್ಯ ರೇಣುಕಪ್ಪ ಮಾತನಾಡಿ, ವಿದ್ಯಾರ್ಥಿಗಳ ಜೀವನ ದೋಣಿ ಇದ್ದಂತೆ. ನೀವು ಇಂತಹ ಸಂದರ್ಭ ಹಾಳು ಮಾಡಿಕೊಳ್ಳದೇ ಚೆನ್ನಾಗಿ ಓದಿ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.ಗ್ರಾಪಂ ಸದಸ್ಯ ಲಿಂಬ್ಯಾನಾಯ್ಕ್ ಮಾತನಾಡಿ, ವಿದ್ಯಾರ್ಥಿಗಳು ಓದಿನ ಜತೆಗೆ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಗ್ರಾಪಂ ಅಧ್ಯಕ್ಷ ಪರಶುರಾಮ, ಪ್ರಾಚಾರ್ಯ ಬಸವರಾಜ, ಮಲ್ಲಿಕಾರ್ಜುನ ಕಲ್ಮಠ್ ,ಪಿಡಿಒ ಪ್ರಭುನಾಯ್ಕ್, ಶ್ರೀನಿವಾಸ, ಚನ್ನಮಲ್ಲಿಕಾರ್ಜುನಸ್ವಾಮಿ, ಲಿಂಬ್ಯಾನಾಯ್ಕ್, ಚಂದ್ರಪ್ಪ, ಲತಾ ಚಂದ್ರಪ್ಪ, ರೇಣುಕಪ್ಪ, ಪ್ರಾಚಾರ್ಯ ಸಿದ್ಧಲಿಂಗಮೂರ್ತಿ, ಜಿ.ಬಿ. ನಾಗನೌಡ, ತಿಪ್ಪೇಸ್ವಾಮಿ, ಆನಂದ, ರಾಜಶೇಖರ, ನವಾಜ್, ಚಂದ್ರಪ್ಪ ರೇಣುಕಾ ಪ್ರಸಾದ ಕಲ್ಮಠ್ ಸೇರಿದಂತೆ ಶಿಬಿರಾರ್ತಿಗಳು ಇದ್ದರು.