ಸದೃಢ ಸಮಾಜದ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಹಿರಿದು: ಶಾಸಕ ನಾಯಕ

| Published : Oct 01 2024, 01:19 AM IST

ಸದೃಢ ಸಮಾಜದ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಹಿರಿದು: ಶಾಸಕ ನಾಯಕ
Share this Article
  • FB
  • TW
  • Linkdin
  • Email

ಸಾರಾಂಶ

Role of teachers in building a strong society: MLA leader

-ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟನಾ ಸಮಾರಂಭ

----

ಕನ್ನಡಪ್ರಭ ವಾರ್ತೆ ಸುರಪುರ

ಮಕ್ಕಳ ಭವಿಷ್ಯ ಮತ್ತು ಸದೃಢ ಸಮಾಜದ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ಹಿರಿದಾಗಿದ್ದು, ಜವಾಬ್ದಾರಿ ಅರಿತು ಕರ್ತವ್ಯ ನಿರ್ವಹಿಸಬೇಕು ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಹೇಳಿದರು.

ನಗರದ ಗರುಡಾದ್ರಿ ಕಲಾಮಂದಿರಲದಲ್ಲಿ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿವಿಧ ಕ್ಷೇತ್ರಗಳಲ್ಲಿ ಕಾರ್ಯ ನಿರ್ವಹಿಸಿಲು ಶಿಕ್ಷಣ ಅತ್ಯಗತ್ಯವಾಗಿದೆ. ಕಳೆದ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಗಣನೀಯವಾಗಿ ಕುಸಿದಿದೆ. ಉತ್ತಮ ಫಲಿತಾಂಶ ತರಲು ಶ್ರಮಿಸಬೇಕು. ಆಗದಿದ್ದವರು ಬೇರೆಡೆ ಹೋಗಬಹುದು. ಈ ಬಾರಿ ಪ್ರತಿಯೊಂದು ಶಾಲೆಯ ಕಲಿಕೆಯ ಮೌಲ್ಯಮಾಪನ ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಹೈದ್ರಾಬಾದ್ ಕರ್ನಾಟಕದಲ್ಲಿ 5000 ಶಿಕ್ಷಕರ ಕೊರತೆಯಿದೆ. ಸರಕಾರ ಮತ್ತು ಶಿಕ್ಷಣ ಸಚಿವ ಮಧುಬಂಗಾರಪ್ಪನವರ ಗಮನಕ್ಕೆ ತಂದು ನೇಮಕಾತಿಗೆ ಶ್ರಮಿಸಲಾಗುತ್ತದೆ. ಈ ಭಾಗ ಅಭಿವೃದ್ಧಿ ಹೊಂದಲು ಶಿಕ್ಷಣದಿಂದ ಮಾತ್ರ ಸಾಧ್ಯ. ಪ್ರತಿಯೊಬ್ಬರೂ ಮಕ್ಕಳ ಶಿಕ್ಷಣಕ್ಕೆ ಕೈಜೋಡಿಸಬೇಕು ಎಂದು ತಿಳಿಸಿದರು.

ತಾಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಸಜ್ಜನ್ ಮಾತನಾಡಿ, ಶಿಕ್ಷಕರು ತಪ್ಪು ಮಾಡಿದರೆ ಇಡೀ ದೇಶದ ಭವಿಷ್ಯ ಕತ್ತಲೆಯತ್ತ ಸಾಗುತ್ತದೆ. ಇದನ್ನು ಶಿಕ್ಷಕರು ಅರಿಯಬೇಕು. ಸಾಮಾಜಿಕ ಮೌಲ್ಯಗಳನ್ನು ಮಕ್ಕಳಲ್ಲಿ ಬಿತ್ತಿ ಉತ್ತಮ ಸಾಧನೆಗೈಯ್ಯುವಂತೆ ಮಾಡಬೇಕು. ಕರ್ತವ್ಯ ಅವಧಿಯಲ್ಲಿ ಶಿಕ್ಷಕರು ಮೊಬೈಲ್ ಬಳಸಬಾರದು ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ್ ವಜ್ಜಲ್, ಬಿಆರ್‌ಸಿ ಪಂಡಿತ್ ನಿಂಬೂರ ಸೇರಿದಂತೆ ಇತರರು ಮಾತನಾಡಿದರು.

- ಸನ್ಮಾನ:

ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿ ರಾಜ್ಯ ಮತ್ತು ಜಿಲ್ಲಾಮಟ್ಟದಲ್ಲಿ ಪ್ರಶಸ್ತಿ ಪಡೆದ ಹಾಗೂ ವಯೋನಿವೃತ್ತರಾದ ಶಿಕ್ಷಕರನ್ನು ಸನ್ಮಾನಿಸಲಾಯಿತು. ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಪ್ರಕಾಶ್ ಗುತ್ತೇದಾರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜ ಬಾಚಿಮಟ್ಟಿ, ಜಿಪಂ ಮಾಜಿ ಸದಸ್ಯ ದೇಸಾಯಿ ಗೋನಾಲ, ಬಿಇಒ ಯಲ್ಲಪ್ಪ ಕಾಡ್ಲೂರು, ಅನಿಲ್ ಎ., ಸಂಜೀವಪ್ಪ ದರಬಾರಿ, ಸಿದ್ಧನಗೌಡ ಚೌಧರಿ, ಖಾದರ ಪಟೇಲ್, ಯಂಕಣ್ಣಗೌಡ ಅರಕೇರಿ, ಗೋವಿಂದಪ್ಪ ತನಿಕೆದಾರ, ಕೊಟ್ರೇಶ ಕೊಳೂರ, ಶರಣಗೌಡ ಪಾಟೀಲ್, ಶರಣಪ್ಪ ಪಾಕರಡ್ಡಿ, ಚನ್ನು ಪಟೇಲ್, ಸಾಹೇಬ ರೆಡ್ಡಿ, ನಿರ್ಮಲಾ ಹುಬ್ಬಳ್ಳಿ, ಗೋಪಾಲ ನಾಯಕ, ಕೃಷ್ಣ ದರಬಾರಿ, ಅಪ್ಪಣ್ಣ ಕುಲಕರ್ಣಿ, ಶಾಂತಪ್ಪ ಅಗ್ನಿ, ರಾಮಣ್ಣ ಪೂಜಾರಿ, ಯುನುಸ್ ಬೇಪಾರಿ, ಶಿವನಗೌಡ ಪಾಟೀಲ, ಗಂಗಾಧರ ಪತ್ತಾರ, ಕಾಂತೇಶ ಹಗಿಮನಿ, ಸುರೇಶ ಹಾದಿಮನಿ, ಬಸವರಾಜ ಅಂಬಿಗೇರ, ಮಹಮದ್ ರಫಿ, ಮಲ್ಲಣ್ಣ ದೊಡ್ಡಮನಿ, ಶಿವಪುತ್ರ ಸೇರಿದಂತೆ ಶಾಲೆಯ ಶಿಕ್ಷಕರು ಪಾಲ್ಗೊಂಡಿದ್ದರು.

----

30ವೈಡಿಆರ್5: ಸುರಪುರ ನಗರದ ಗರುಡಾದ್ರಿ ಕಲಾಮಂದಿರಲದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಶಾಸಕ ರಾಜಾ ವೇಣುಗೋಪಾಲ ನಾಯಕ ಉದ್ಘಾಟಿಸಿದರು.

-----

30ವೈಡಿಆರ್6: ಸುರಪುರ ನಗರದ ಗರುಡಾದ್ರಿ ಕಲಾಮಂದಿರಲದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿ ರಾಜ್ಯ ಮತ್ತು ಜಿಲ್ಲಾಮಟ್ಟದ ಪ್ರಶಸ್ತಿ ಪಡೆದವರು ಮತ್ತು ನಿವೃತ್ತರನ್ನು ಶಾಸಕ ಆರ್‌ವಿಎನ್ ಸನ್ಮಾನಿಸಿದರು.