ಶಿಕ್ಷಣ, ಸಂಸ್ಕಾರ ನೀಡುವಲ್ಲಿ ಶಿಕ್ಷಕರ ಪಾತ್ರ ಮುಖ್ಯ: ಶಾಸಕ ಭೀಮಣ್ಣ ನಾಯ್ಕ

| Published : Sep 06 2025, 01:01 AM IST

ಶಿಕ್ಷಣ, ಸಂಸ್ಕಾರ ನೀಡುವಲ್ಲಿ ಶಿಕ್ಷಕರ ಪಾತ್ರ ಮುಖ್ಯ: ಶಾಸಕ ಭೀಮಣ್ಣ ನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕ್ಷಣ ಹಾಗೂ ಸಂಸ್ಕಾರ ನೀಡುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ

ಶಿರಸಿ: ದೇಶದ ಪ್ರಗತಿ ಹಾಗೂ ಜ್ಞಾನವಂತರನ್ನು ತಯಾರು ಮಾಡುವವರು ಶಿಕ್ಷಕರು. ಶಿಕ್ಷಣ ಹಾಗೂ ಸಂಸ್ಕಾರ ನೀಡುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.ಅವರು ಶುಕ್ರವಾರ ನಗರದ ಡಾ.ಬಿ.ಆರ್. ಅಂಬೇಡ್ಕರ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಶಾಲಾ ಶಿಕ್ಷಣ ಇಲಾಖೆ ಶಿರಸಿ ಶೈಕ್ಷಣಿಕ ಜಿಲ್ಲೆ, ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ ನಿಧಿ, ಉಪನಿರ್ದೇಶಕರ ಕಾರ್ಯಾಲಯ, ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಗುರು ಗೌರವಾರ್ಪಣೆ ಸಮಾರಂಭ ಉದ್ಘಾಟಿಸಿ, ಜಿಲ್ಲಾ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.

ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜೀವನ ನಮಗೆಲ್ಲರಿಗೂ ಆದರ್ಶ. ಸಮಾಜದಲ್ಲಿ ಶಿಕ್ಷಕರಿಗೆ ಸಮಾಜದಲ್ಲಿ ಉನ್ನತ ಸ್ಥಾನಮಾನವಿದೆ. 60 ವರ್ಷಕ್ಕೆ ಶಿಕ್ಷಕ ವೃತ್ತಿಯಿಂದ ಮಾತ್ರ ನಿವೃತ್ತಿಯಾಗಿರುತ್ತಾರೆ.‌ ಆದರೆ ಅವರಲ್ಲಿರುವ ಜ್ಞಾನ ನಿವೃತ್ತಿಯಾಗುವುದಿಲ್ಲ. ತಮ್ಮ ಜ್ಞಾನವನ್ನು ಸದಾ ತಮ್ಮ ಶಿಷ್ಯರಿಗೆ ಧಾರೆ ಎರೆಯುತ್ತಾರೆ. ಸಮಾಜದಲ್ಲಿ ಎಲ್ಲ ವರ್ಗದವರಿಗೂ ಉತ್ತಮ ಶಿಕ್ಷಣ ದೊರೆಯಬೇಕೆಂಬ ನಿಟ್ಟಿನಲ್ಲಿ ಸರ್ಕಾರದ ಜತೆ ಹಲವಾರು ಸಂಘ-ಸಂಸ್ಥೆಗಳು ಶಾಲಾ-ಕಾಲೇಜುಗಳನ್ನು ಆರಂಭಿಸಿದೆ. ಶಿಕ್ಷಕರ ಪರಿಶ್ರಮದಿಂದ ಶಿಕ್ಷಣದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗಿದ್ದು, ಕ್ಷೇತ್ರದ ಶಾಸಕನಾಗಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಒತ್ತು ನೀಡಿದ್ದೇನೆ. ಶಾಲಾ, ಕಾಲೇಜುಗಳಿಗೆ ಬೇಕಾದ ಮೂಲ ಸೌಕರ್ಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದರು.

ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾದ ಕಿರಿಯ ಪ್ರಾಥಮಿಕ ವಿಭಾಗದಿಂದ ಜೊಯಿಡಾ ತಾಲೂಕಿನ ಸಕಿಪ್ರಾಶಾಲೆ ಕ್ಯಾಸಲ್‌ರಾಕ್ ಶಾಲೆಯ ಸಹಶಿಕ್ಷಕ ಮುತ್ತಪ್ಪ ವಠಾರ, ಹಳಿಯಾಳ ತಾಲೂಕಿನ ಹೊಸಹಡಗಲಿ ಶಾಲೆಯ ಶಿಕ್ಷಕಿ ವನಶ್ರೀ ಸಿಂಧೆ, ಯಲ್ಲಾಪುರ ತಾಲೂಕಿನ ಅಲ್ಕೇರಿ ಗೌಳಿವಾಡ ಶಾಲೆಯ ಗಂಗಪ್ಪ.ಎಸ್.ಲಮಾಣಿ, ಮಂಡಗೋಡ ತಾಲೂಕಿನ ತಟ್ಟಿಹಳ್ಳಿ ಶಾಲೆಯ ಶಿಕ್ಷಕಿ ಸುನೀತಾ ಕೃಷ್ಣಪ್ಪ ಪವಾರ, ಸಿದ್ದಾಪುರ ತಾಲೂಕಿನ ಕೊಳಗಿ ಶಾಲೆಯ ಧರ್ಮಣ್ಣ ಹಾಗೂ ಶಿರಸಿ ತಾಲೂಕಿನ ಭದ್ರಾಪುರ ಶಾಲೆಯ ಶಿಕ್ಷಕಿ ರಂಜನಾ ಹೆಗಡೆ, ಹಿರಿಯ ಪ್ರಾಥಮಿಕ ವಿಭಾಗದಿಂದ ಜೊಯಿಡಾ ತಾಲೂಕಿನ ಮೌವಳಿಂಗ ಶಾಲೆಯ ಶಿಕ್ಷಕ ಶ್ರೀಕಾಂತ ನಾಯ್ಕ, ಹಳಿಯಾಳ ತಾಲೂಕಿನ ಕೇರವಾಡ ಶಾಲೆಯ ಶಿಕ್ಷಕಿ ಸುನೀತಾ ಹುಲಸ್ವಾರ, ಯಲ್ಲಾಪುರ ತಾಲೂಕಿನ ಅರಬೈಲ್ ಶಾಲೆಯ ಶಿಕ್ಷಕಿ ಶಿವಲೀಲಾ ಹುಣಸಗಿ, ಮುಂಡಗೋಡ ತಾಲೂಕಿನ ಹಿರೇಹಳ್ಳಿ ಶಾಲೆಯ ಶಿಕ್ಷಕಿ ಪೂರ್ಣೀಮಾ ಕೈಟಕರ್, ಸಿದ್ದಾಪುರ ತಾಲೂಕಿನ ವಾಜಗದ್ದೆ ಶಾಲೆಯ ವಿನಾಯಕ ಹೆಗಡೆ ಹಾಗೂ ಶಿರಸಿ ತಾಲೂಕಿನ ರಾಮನಬೈಲ್ ಶಾಲೆಯ ಶಿಕ್ಷಕ ಎನ್.ಬಿ.ನಾಯ್ಕ, ಪ್ರೌಢಶಾಲಾ ವಿಭಾಗದಿಂದ ಜೊಯಿಡಾ ತಾಲೂಕಿನ ಬಾಪೇಲಿಕ್ರಾಸ್ ಪ್ರೌಢಶಾಲೆಯ ಶಿಕ್ಷಕ ಶಿವಾನಂದ ಕೆ.ಎಚ್, ಹಳಿಯಾಳ ತಾಲೂಕಿನ ದಾಂಡೇಲಿ ಜನತಾ ವಿದ್ಯಾಲಯದ ಶಿಕ್ಷಕ ಕಿಶೋರ ಕಿಂದಳಕರ, ಯಲ್ಲಾಪುರ ವಿಶ್ವದರ್ಶನ ಪ್ರೌಢಶಾಲೆಯ ಮುಖ್ಯಶಿಕ್ಷಕಿ ಮುಕ್ತಾಬಾಯಿ ಎಸ್ ಹೆಗಡೆ, ಮುಂಡಗೋಡ ತಾಲೂಕಿನ ಮುಳಗಿ ಪಬ್ಲಿಕ್ ಶಾಲೆಯ ಶಿಕ್ಷಣ ಶಿಕ್ಷಕ ಅಶೋಕ ಸಂಕ್ರಿಕೊಪ್ಪ, ಸಿದ್ದಾಪುರ ತಾಲೂಕಿನ ಬೇಡ್ಕಣಿ ಜನತಾ ವಿದ್ಯಾಲಯದ ಶಿಕ್ಷಕ ಪ್ರಕಾಶ ಮಂಜುನಾಥ ನಾಯ್ಕ ಹಾಗೂ ಶಿರಸಿ ತಾಲೂಕಿನ ಬಿಸ್ಲಕೊಪ್ಪ ಸೂರ್ಯನಾರಾಯಣ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಗಣೇಶ ಭಟ್ಟ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಇದೇ ರೀತಿ ಪ್ರಸಕ್ತ ಸಾಲಿನಲ್ಲಿ ನಿವೃತ್ತರಾದ ಶಿಕ್ಷಕರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು.

ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಗ್ಯಾರೆಂಟಿ ಪ್ರಾಧಿಕಾರದ ಅಧ್ಯಕ್ಷ ಸತೀಶ ನಾಯ್ಕ, ಸಹಾಯಕ ಆಯುಕ್ತೆ ಕೆ.ವಿ.ಕಾವ್ಯಾರಾಣಿ, ತಹಸೀಲ್ದಾರ, ತಾಪಂ ಇಒ ಚೆನ್ನಬಸಪ್ಪ ಹಾವಣಗಿ, ಡಯಟ್ ಪ್ರಾಚಾರ್ಯ ಎಂ.ಎಸ್.ಹೆಗಡೆ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ, ನಗರಸಭೆ ಪೌರಾಯುಕ್ತ ಪಿ.ಎಂ.ಚನ್ನಪ್ಪನವರ ಕಿರಣಕುಮಾರ ನಾಯ್ಕ ಉಪಸ್ಥಿತರಿದ್ದರು. ಶಿರಸಿ ಶೈಕ್ಷಣಿಕ ಜಿಲ್ಲಾ ಉಪನಿರ್ದೇಶಕ ಡಿ.ಆರ್.ನಾಯ್ಕ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕರಾದ ಜಯಲಕ್ಷ್ಮೀ ಹೆಗಡೆ, ಕೆ.ಎಚ್‌.ಶ್ರೀಧರ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ ವಂದಿಸಿದರು.