ಮಹಿಳಾ ಸ್ವಸಹಾಯ ಸಂಘಗಳ ಪಾತ್ರ ಬಹು ಮುಖ್ಯ: ಜಿಗಣೇಹಳ್ಳಿ ನೀಲಕಂಠಪ್ಪ

| Published : Oct 26 2024, 12:46 AM IST

ಮಹಿಳಾ ಸ್ವಸಹಾಯ ಸಂಘಗಳ ಪಾತ್ರ ಬಹು ಮುಖ್ಯ: ಜಿಗಣೇಹಳ್ಳಿ ನೀಲಕಂಠಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಕಡೂರು, ಗ್ರಾಮೀಣ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿ ಜೀವನ ನಡೆಸಲು ಮಹಿಳಾ ಸ್ವಸಹಾಯ ಸಂಘಗಳ ಪಾತ್ರ ಬಹು ಮುಖ್ಯ ಎಂದು ಕಡೂರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ ಹೇಳಿದರು.

ಸಂಜೀವಿನಿ ಗ್ರಾಪಂ ಮಟ್ಟದ ಸ್ವಸಹಾಯ ಸಂಘ ಗಳ ಒಕ್ಕೂಟದ ವಾರ್ಷಿಕ ಮಹಾಸಭೆ ಉದ್ಘಾಟನೆ

ಕನ್ನಡಪ್ರಭ ವಾರ್ತೆ, ಕಡೂರು

ಗ್ರಾಮೀಣ ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿ ಜೀವನ ನಡೆಸಲು ಮಹಿಳಾ ಸ್ವಸಹಾಯ ಸಂಘಗಳ ಪಾತ್ರ ಬಹು ಮುಖ್ಯ ಎಂದು ಕಡೂರಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ ಹೇಳಿದರು.

ತಾಲೂಕಿನ ಜಿಗಣೇಹಳ್ಳಿ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೇವಸ್ಥಾನ ಆವರಣದಲ್ಲಿ ನಡೆದ ಸಂಜೀವಿನಿ ಗ್ರಾಪಂ ಮಟ್ಟದ ಸ್ವಸಹಾಯ ಸಂಘ ಗಳ ಒಕ್ಕೂಟದ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿ, ಪರಸ್ಪರ ಸಹಕಾರ ತತ್ವದಡಿ ಯಾವುದೇ ಕಾರ್ಯ ಮಾಡಿದರೆ ಯಶಸ್ಸು ದೊರೆ ಯುತ್ತದೆ. ಸ್ತ್ರೀ ಶಕ್ತಿ ಸಂಘಗಳ ಮೂಲ ಉದ್ದೇಶವೂ ಅದೇ ಆಗಿದೆ. ಕೇಂದ್ರ ಸರ್ಕಾರದ ಶೇ. 60,ರಾಜ್ಯದ ಶೇ.40ರ ಸಹಯೋಗದಲ್ಲಿ ಸಂಜೀವಿನಿ ಸ್ವಸಹಾಯ ಸಂಘಗಳಿಗೆ ಆರಂಭಿಕ ನಿಧಿ, ಉದ್ಯಮಶೀಲತಾ ತರಬೇತಿ ನೀಡಿ ಮಹಿಳೆಯರಿಗೆ ಸ್ವಾವಲಂಬಿ ಜೀವನಕ್ಕೊಂದು ದಾರಿ ತೋರುವ ಕಾರ್ಯವನ್ನು ಮಾಡುತ್ತಿದೆ ಎಂದರು.

ಮಹಿಳೆಯೊಬ್ಬರು ಎಂತಹ ಎತ್ತರಕ್ಕೆ ಬೇಕಾದರೂ ಏರುತ್ತಾರೆ ಎಂಬುದಕ್ಕೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಾಕ್ಷಿ. ಮಹಿಳೆಯರು ಯೋಜನೆಗಳ ಸದುಪಯೋಗವನ್ನು ಮಹಿಳೆಯರು ಪಡೆದುಕೊಳ್ಳಬೇಕು ಎಂದರು.

ಸಂಜೀವಿನಿ ಯೋಜನೆ ಸಂಯೋಜಕ ನಂದಕುಮಾರ್ ಮಾತನಾಡಿ, ಸಂಘಗಳ ಸದಸ್ಯರಾದವರು ಸಂಜೀವಿನಿ ಯೋಜನೆಯಲ್ಲಿ ನೀಡುವ ಕಿರು ಉದ್ಯಮ ಶೀಲತಾ ತರಬೇತಿ ಮುಂತಾದ ಸೌಲಭ್ಯ ಪಡೆದು ಸ್ವ ಉದ್ಯೋಗದತ್ತ ಗಮನಹರಿಸಿ ಆರ್ಥಿಕ ಲಾಭ ಪಡೆಯಲು ಗಮನ ಹರಿಸಬೇಕು ಎಂದು ಕೋರಿದರು.

2023-2024 ರ ಆಡಿಟ್ ವರದಿಯನ್ನು ಸಭೆಯಲ್ಲಿ ರಮ್ಯಾ ಮಂಡಿಸಿದರು. ಒಕ್ಕೂಟದ ಅಧ್ಯಕ್ಷೆ ಚಂದ್ರಮ್ಮ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಸದಸ್ಯರಾದ ಲಕ್ಷ್ಮಮ್ಮ, ಕಾಂತಮ್ಮ, ಪಿಡಿಒ ಆದಿನಾಥ್, ರೆಹಮಾನ್, ಸ್ವಾತಿ ಹಾಗು 25 ಕ್ಕೂ ಹೆಚ್ಚು ಸ್ವಸಹಾಯ ಸಂಘಗಳ ಸದಸ್ಯರು ಇದ್ದರು.

24ಕೆಕೆಡಿಯು2.

ಕಡೂರು ತಾಲೂಕಿನ ಜಿಗಣೇಹಳ್ಳಿಯ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಸಂಜೀವಿನಿ ಗ್ರಾಪಂ ಮಟ್ಟದ ಸ್ವಸಹಾಯ ಸಂಘಗಳ ಒಕ್ಕೂಟದ ವಾರ್ಷಿಕ ಮಹಾಸಭೆ ನಡೆಯಿತು.