ಸಾರಾಂಶ
ದೇವರಹಿಪ್ಪರಗಿ: ತಾಲೂಕಿನ ಮುಳಸಾವಳಗಿ ಗ್ರಾಮದಲ್ಲಿ ಶುಕ್ರವಾರ ಸಂಜೆ ಸುರಿದ ಭಾರಿ ಮಳೆ, ಗಾಳಿಗೆ 12 ಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿ ಹಾರಿ ಹೋಗಿ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಗ್ರಾಮದ ಸಿದ್ದಪ್ಪ ಬಸರಕೋಡ, ರೇಣುಕಾ .ಸಾಲೋಟಗಿ,ಶರಣಪ್ಪ ನಾಟೀಕಾರ, ಯಲ್ಲವ್ವ ಕೋಳಿ, ಸಾಹೇಬಗೌಡ ಖ್ಯಾಡಗಿ, ನಾನಾಗೌಡ ಬಿರಾದಾರ, ಬಸವರಾಜ ಬಿರಾದಾರ, ಮಲಕಪ್ಪ ನಾಯ್ಕೋಡಿ, ಸಾಯಬಣ್ಣ ಸೊನ್ನಳ್ಳಿ, ಬಾಬು ಕಟ್ಟಿಮನಿ, ಶ್ರೀಶೈಲ ನಾಯ್ಕೋಡಿ, ಪರಸಪ್ಪ ನಾಯ್ಕೋಡಿ ಎಂಬುವರಿಗೆ ಸೇರಿದ ಮನೆಗಳ ಮೇಲ್ಛಾವಣಿಯ ತಗಡುಗಳು ಹಾರಿ ಹೋಗಿವೆ. ಮನೆಗಳಲ್ಲಿ ಸಂಗ್ರಹಿಸಿಟ್ಟಿದ್ದ ದವಸ ಧಾನ್ಯಗಳು ಕೂಡಾ ಮಳೆಗೆ ಹಾಳಾಗಿವೆ. ಕೆಲವರು ರಾತ್ರಿ ಕಳೆಯಲು ಇತರರ ಮನೆಗಳಲ್ಲಿ ಆಶ್ರಯ ಪಡೆಯಬೇಕಾಯಿತು. ಪ್ರಕೃತಿ ವಿಕೋಪದಡಿ ನೀಡುವ ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕು ಎಂದು ನಿರಾಶ್ರಿತರು ತಹಸೀಲ್ದಾರ್‌ರನ್ನು ಒತ್ತಾಯಿಸಿದ್ದಾರೆ.ಇದಲ್ಲದೆ ಗ್ರಾಮದಲ್ಲಿ ಅಲ್ಲಲ್ಲಿ ಗಿಡಮರಗಳು ನೆಲಕ್ಕುರುಳಿದ ಪರಿಣಾಮ ರಾತ್ರಿಯಿಡೀ ವಿದ್ಯುತ್ ಸಂಪರ್ಕವಿಲ್ಲದೇ, ಕತ್ತಲಲ್ಲಿ ಕಳಿಯುವಂತಾಯಿತು. ಬಳಿಕ ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ಸದ್ದಾಂ ಮುಲ್ಲಾ ಭೇಟಿ ನೀಡಿ ಪರಿಶೀಲಿಸಿದ್ದಾರೆ.