ಸಾರಾಂಶ
ಅಲಂಕಾರಿಕಾ ಕೃತಕ ಹೂವು, ಪೇಪರ್ ಕಲೆ, ಅಲಂಕಾರಿಕಾ ವಸ್ತುಗಳನ್ನು ಪ್ರದರ್ಶಿಸಲಾಗಿದ್ದು, ಈ ಪ್ರದರ್ಶನವು ಅ.20 ರವರೆಗೆ ಮುಂದುವರೆಯಲಿದೆ.
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ಬೋಗಾದಿ ರಸ್ತೆಯಲ್ಲಿರುವ ಧ್ವನ್ಯಾಲೋಕದಲ್ಲಿ ರೋಸ್ ಪೆಟಲ್ ಸಂಸ್ಥೆಯು ಕಮಲ, ನೈದಿಲೆ ಹೂವಿನ ಚಿತ್ರಕಲಾ ಪ್ರದರ್ಶನವನ್ನು ಆಯೋಜಿಸಿದೆ.ಈ ಪ್ರದರ್ಶನದಲ್ಲಿ ವಿವಿಧ ಬಗೆಯ ಕಮಲ, ನೈದಿಲೆ ಹೂವಿನ ಗಿಡಗಳ ಪ್ರದರ್ಶಿಸಿ, ಮಾಹಿತಿ ಒದಗಿಸಲಾಗುತ್ತಿದೆ. ಈ ಸಸ್ಯಗಳ ಬೆಳವಣಿಗೆಯ ವಿವಿಧ ಹಂತಗಳ ಮಾಹಿತಿ ಪಡೆಯಬಹುದಾಗಿದೆ. ಈ ಹೂಗಳ ಆಧ್ಯಾತ್ಮಿಕ ಮಹತ್ವ, ಔಷಧೀಯ ಮೌಲ್ಯ, ಕೃಷಿ ತಂತ್ರ, ಪಾಕಶಾಲೆ ಕುರಿತ ವಿವರವನ್ನು ನೀಡಲಾಗುತ್ತಿದೆ.ಅಲ್ಲದೆ, ಅಲಂಕಾರಿಕಾ ಕೃತಕ ಹೂವು, ಪೇಪರ್ ಕಲೆ, ಅಲಂಕಾರಿಕಾ ವಸ್ತುಗಳನ್ನು ಪ್ರದರ್ಶಿಸಲಾಗಿದ್ದು, ಈ ಪ್ರದರ್ಶನವು ಅ.20 ರವರೆಗೆ ಮುಂದುವರೆಯಲಿದೆ. ಆಸಕ್ತರಿಗಾಗಿ ಕಾರ್ಯಾಗಾರವನ್ನು ಸಹ ಆಯೋಜಿಸಲಾಗಿದೆ. ಈ ವೇಳೆ ರೋಸ್ ಪೆಟಲ್ ಸಂಸ್ಥೆಯ ಸಂಸ್ಥಾಪಕಿ ಸಂಧ್ಯಾ ಮಂಜುನಾಥ್, ನಿವೃತ್ತ ಪ್ರಾದ್ಯಾಪಕಿ ಶಶಿಕಲಾ, ಸುಮನ್ ಅರಸ್ ಮೊದಲಾದವರು ಇದ್ದರು.