ನಗರದ ವಿಕಾಸಾಶ್ರಮ ಮೈದಾನದಲ್ಲಿ ಶಿರಸಿ ರೋಟರಿ ಮತ್ತು ಶಿರಸಿ ಹೆರಿಟೇಜ್‌ ಇನ್ನರ್‌ ವ್ಹೀಲ್‌ ಕ್ಲಬ್‌ಗಳಿಂದ ರೋಟರಿ ಆಹಾರ ಮೇಳ ಮತ್ತು ಆಲೆಮನೆ ಉತ್ಸವ 2026ನ್ನು 4ನೇ ವರ್ಷದ ಜ. 22, 23, 24, 25 ಮತ್ತು 26ರಂದು ಆಯೋಜಿಸಲಾಗಿದೆ.

ಶಿರಸಿ:

ನಗರದ ವಿಕಾಸಾಶ್ರಮ ಮೈದಾನದಲ್ಲಿ ಶಿರಸಿ ರೋಟರಿ ಮತ್ತು ಶಿರಸಿ ಹೆರಿಟೇಜ್‌ ಇನ್ನರ್‌ ವ್ಹೀಲ್‌ ಕ್ಲಬ್‌ಗಳಿಂದ ರೋಟರಿ ಆಹಾರ ಮೇಳ ಮತ್ತು ಆಲೆಮನೆ ಉತ್ಸವ 2026ನ್ನು 4ನೇ ವರ್ಷದ ಜ. 22, 23, 24, 25 ಮತ್ತು 26ರಂದು ಆಯೋಜಿಸಲಾಗಿದೆ ಎಂದು ರೋಟರಿ ಕ್ಲಬ್‌ ಅಧ್ಯಕ್ಷ ಶ್ರೀನಿವಾಸ ನಾಯ್ಕ ತಿಳಿಸಿದರು.

ನಗರದ ರೋಟರಿ ಸೆಂಟರ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ವೈವಿಧ್ಯಮಯ ಮಳಿಗೆಗಳ ಮೂಲಕ ಗೃಹ ನಿರ್ಮಾಣ, ಗೃಹೋಪಯೋಗಿ ಸಾಮಗ್ರಿ, ಕೃಷಿ ಉಪಕರಣ, ಖಾದ್ಯ ಪದಾರ್ಥ, ಬಟ್ಟೆ, ಪೀಠೋಪಕರಣ ಮುಂತಾದ ಮಳಿಗೆಗಳು ಇರಲಿದೆ. ಶ್ವಾನ ಪ್ರದರ್ಶನ, ಅಂತ್ಯಾಕ್ಷರಿ ಸ್ಪರ್ಧೆ, ಮಿಸ್ಟರ್‌ ಉತ್ತರ ಕನ್ನಡ - ದೇಹದಾರ್ಢ್ಯ ಸ್ಪರ್ಧೆ ಮತ್ತು ಮಿಸ್‌ ಉತ್ತರ ಕನ್ನಡ - ಸೌಂದರ್ಯ ಸ್ಪರ್ಧೆ ಮುಂತಾದ ಮೆಗಾ ಸ್ಪರ್ಧೆ ಏರ್ಪಡಿಸಲಾಗಿದೆ. ಈ ಸ್ಪರ್ಧೆಗಳ ಮೊದಲು ಮತ್ತು ನಂತರದಲ್ಲಿ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮನಡೆಯಲಿವೆ. ಸ್ಟಾಲ್‌ ಹೊರತಾಗಿ ವಿವಿಧ ಪ್ರಾಯೋಜಕತ್ವ ಮತ್ತು ಪ್ರಚಾರ ಅವಕಾಶ ಕಲ್ಪಿಸಲಾಗಿದೆ ಎಂದರು.

ಸ್ಥಳೀಯ ಕೃಷಿಕರಿಗೆ, ವ್ಯಾಪಾರಿಗಳಿಗೆ, ಉದ್ಯಮಿಗಳಿಗೆ, ಗಾಯಕರು–ನೃತ್ಯಪಟುಗಳು, ವಿಶೇಷ ಪ್ರತಿಭೆಗಳಿಗೆ ಮತ್ತು ಕಲಾವಿದರಿಗೆ ಹಾಗೂ ಆಸಕ್ತ ಕಲಾಭಿಮಾನಿಗಳಿಗೆ ಈ ಉತ್ಸವ ಅವಕಾಶವನ್ನು ಮತ್ತು ಪ್ರಯೋಜನವನ್ನೂ ನೀಡುತ್ತದೆ. ಈ ಕಾರ್ಯಕ್ರಮದಿಂದ ಉಳಿಯುವ ಹಣ ಒಂದಿಲ್ಲೊಂದು ಸಾಮಾಜಿಕ ಉದ್ದೇಶಕ್ಕೆ, ಯೋಜನೆಗೆ ಖಂಡಿತವಾಗಿಯೂ ಬಳಕೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಸಂಚಾಲಕ ಡಾ. ದಿನೇಶ ಹೆಗಡೆ (9448153406) ಅವರನ್ನು, ಸ್ಪರ್ಧೆ ಮತ್ತು ಮನೋರಂಜನೆ ಮಾಹಿತಿಗಾಗಿ ಗಣೇಶ ಕುರ್ಸೆ (9448129411) ಅವರನ್ನು ಸಂಪರ್ಕಿಸಬಹುದು ಎಂದರು.

ಸುದ್ದಿಗೋಷ್ಠಿಯಲ್ಲಿ ರೋಟರಿ ಕ್ಲಬ್‌ ಕಾರ್ಯದರ್ಶಿ ಹರೀಶ ಹೆಗಡೆ, ಖಜಾಂಚಿ ವಿನಾಯಕ ಶೇಟ್‌, ಕಾರ್ಯನಿರ್ವಾಹಕ ಕಾರ್ಯದರ್ಶಿ ಸತೀಶ ಭಟ್ಟ ನಾಡಗುಳಿ, ವಿದ್ಯಾ ನಾಯ್ಕ, ಸಂಧ್ಯಾ ನಾಯ್ಕ, ರವಿ ಹೆಗಡೆ ಗಡಿಹಳ್ಳಿ ಮತ್ತಿತರರು ಇದ್ದರು.