ರೋಟರಿ ಕ್ಲಬ್ ಸಮಾಜಸೇವೆ ಶ್ಲಾಘನೀಯ: ಶಾಸಕ ಜಿ.ಎಚ್.ಶ್ರೀನಿವಾಸ್

| Published : Jul 18 2024, 01:31 AM IST

ರೋಟರಿ ಕ್ಲಬ್ ಸಮಾಜಸೇವೆ ಶ್ಲಾಘನೀಯ: ಶಾಸಕ ಜಿ.ಎಚ್.ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ರೋಟರಿ ಕ್ಲಬ್ ನ ಸಮಾಜ ಸೇವೆ ಕಾರ್ಯ ಶ್ಲಾಘನೀಯ ವೆನಿಸಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.ರೋಟರಿ ಕ್ಲಬ್‌ ನಿಂದ ಪಟ್ಟಣದ ಅರಮನೆ ಹೋಟೆಲ್ ಸಭಾಂಗಣದಲ್ಲಿ ಏರ್ಪಡಿಸಿದ್ದ 2024-25ನೇ ಸಾಲಿನ ರೋಟರಿ ಕ್ಲಬ್.ನ ಪದವಿ ಪ್ರಧಾನ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ರೋಟರಿ ಶಾಲೆಗೆ ಅರ್ಥಿಕ ನೆರವು ನೀಡುವುದಾಗಿ ಅವರು ಹೇಳಿದರು.

ಕನ್ನಡಪ್ರಭ ವಾರ್ತೆ, ತರೀಕೆರೆ

ರೋಟರಿ ಕ್ಲಬ್ ನ ಸಮಾಜ ಸೇವೆ ಕಾರ್ಯ ಶ್ಲಾಘನೀಯ ವೆನಿಸಿದೆ ಎಂದು ಶಾಸಕ ಜಿ.ಎಚ್.ಶ್ರೀನಿವಾಸ್ ಹೇಳಿದ್ದಾರೆ.ರೋಟರಿ ಕ್ಲಬ್‌ ನಿಂದ ಪಟ್ಟಣದ ಅರಮನೆ ಹೋಟೆಲ್ ಸಭಾಂಗಣದಲ್ಲಿ ಏರ್ಪಡಿಸಿದ್ದ 2024-25ನೇ ಸಾಲಿನ ರೋಟರಿ ಕ್ಲಬ್.ನ ಪದವಿ ಪ್ರಧಾನ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ರೋಟರಿ ಶಾಲೆಗೆ ಅರ್ಥಿಕ ನೆರವು ನೀಡುವುದಾಗಿ ಅವರು ಹೇಳಿದರು.

ರೋಟರಿ ಡಿಸ್ಟ್ರಿಕ್ಟ್ ಗೌವರ್ನರ್ ಡಿ.ಎಸ್ ರವಿ ಮಾತನಾಡಿ, ತರೀಕೆರೆ ರೋಟರಿ ಕ್ಲಬ್ 2023-24 ರಲ್ಲಿ ಮಾಡಿದ 43 ಕ್ಕೂ ಹೆಚ್ಚು ಸಮಾಜಮುಖಿ ಕಾರ್ಯಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸೇವೆಯೇ ರೋಟರಿ ಧ್ಯೇಯ ಎಂದು ಹೇಳಿದರು.

ರೋಟರಿ ವಲಯ 7 ರ ಅಸಿಸ್ಟೆಂಟ್ ಗವರ್ನರ್ ನಾಸಿರ್ ಹುಸೇನ್ ಮಾತನಾಡಿ ರೋಟರಿ‌ ಕೊರೋನದಂತಹ ಸಮಯದಲ್ಲಿ ಸಾರ್ವಜನಿಕರಿಗೆ ಅಗತ್ಯ ಸೇವೆಗಳನ್ನು ನೀಡಿದೆ. ಈ ವರ್ಷ ನಮ್ಮ ರೋಟರಿ ಜಿಲ್ಲೆ ಅತಿ ಹೆಚ್ಚು ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ಹೇಳಿದರು.ಶಿಕ್ಷಕ ನಾಗರಾಜ್ ಮಾತನಾಡಿ, ವಲಯ 7 ರ ಝೋನಲ್ ಲೆಫ್ಟಿನೆಂಟ್ ಕೆ.ಎಚ್ ಮಂಜುನಾಥ್, 2023 -24ನೇ ಸಾಲಿನ ಅಧ್ಯಕ್ಷ ಶಶಿಕುಮಾರ್ ಪಿ, ಕಾರ್ಯದರ್ಶಿ ಪ್ರದೀಪ್ ಕುಮಾರ್ ಕೆ.ಜಿ. ನೂತನ ಅಧ್ಯಕ್ಷ ರಾಕೇಶ್ ಜಿ.ಸಿ. ನೂತನ ಕಾರ್ಯದರ್ಶಿ ಬಿ.ಪಿ.ರವಿಕುಮಾರ್, ಡಾ.ಕಿಶೋರ್ ಕುಮಾರ್, ಪ್ರವೀಣ್ ವಿ. ರೋಟರಿ ಸದಸ್ಯ, ರೋಟರಿ ಶಾಲೆ ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದದವರು, ರೋಟರಿ ಕುಟುಂಬದವರು, ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಪ್ರತಿಭಾ ಪುರಸ್ಕಾರ ಏರ್ಪಡಿಸಲಾಗಿತ್ತು. ಪುರಸಭಾ ಮುಖ್ಯಾಧಿಕಾರಿ ಪ್ರಶಾಂತ್ ಅವರು ರೋಟರಿ ಕ್ಲಬ್ ನ ಗೌರವ ಸದಸ್ಯರಾಗಿ ಸೇರ್ಪಡೆಯಾದರು ಹಾಗೂ ರಾಜು, ಗಿರೀಶ್, ಅಭಿಷೇಕ್ ,ಸತೀಶ್ ಕುಮಾರ್ ಅವರು ಹೊಸ ಸದಸ್ಯರಾಗಿ ಸೇರ್ಪಡೆಯಾದರು.