ಶ್ರೇಷ್ಠ ಶಿಕ್ಷಕ-ಶಿಕ್ಷಕಿ ಪ್ರಶಸ್ತಿ ಪ್ರದಾನ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಶಿಕ್ಷಕ-ಶಿಕ್ಷಕಿ ಪ್ರಶಸ್ತಿ ಪ್ರದಾನ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ

ಕನ್ನಡಪ್ರಭ ವಾರ್ತೆ ದಾಂಡೇಲಿ

ರೋಟರಿ ಕ್ಲಬ್, ದಾಂಡೇಲಿ ಶಿಕ್ಷಣ ಸಂಸ್ಥೆ ಮತ್ತು ಇನ್ನರ್ ವಿಲ್ ಕ್ಲಬ್ ಇವರ ಸಂಯುಕ್ತ ಆಶ್ರಯದಡಿ ನಗರದ ರೋಟರಿ ಶಾಲೆಯ ಆವರಣದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಕಾರ್ಯದಕ್ಷತೆ ಮತ್ತು ಸಾಧನೆ ತೋರಿದ ಶಿಕ್ಷಕರಿಗೆ ಶ್ರೇಷ್ಠ ಶಿಕ್ಷಕ-ಶಿಕ್ಷಕಿ ಪ್ರಶಸ್ತಿ ಪ್ರದಾನ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರೋಟರಿ ಜಿಲ್ಲಾ ಪ್ರಾಂತಪಾಲ ಅರುಣ್ ಭಂಡಾರಿ, ದಾಂಡೇಲಿಯ ರೋಟರಿ ಕ್ಲಬ್ ಹತ್ತು ಹಲವು ಸಮಾಜಮುಖಿ ಹಾಗೂ ಸೇವಾ ಕೈಂಕರ್ಯಗಳ ಮೂಲಕ ಗಮನ ಸೆಳೆಯುವುದರ ಜೊತೆಗೆ ಸದಾ ಕ್ರಿಯಾಶೀಲ ಕ್ಲಬ್ ಆಗಿ ಗುರುತಿಸಲ್ಪಟ್ಟಿದೆ. ದಾಂಡೇಲಿಯ ರೋಟರಿ ಕ್ಲಬ್ ರೋಟರಿ ಶಿಕ್ಷಣ ಸಂಸ್ಥೆಯ ಮೂಲಕ ಈ ಭಾಗದ ಶೈಕ್ಷಣಿಕ ಕ್ಷೇತ್ರಕ್ಕೆ ತನ್ನದೇ ಆದ ರೀತಿಯ ಬಹುಮೂಲ್ಯ ಕೊಡುಗೆ ನೀಡುತ್ತಿರುವುದು ನಿಜಕ್ಕೂ ಅತ್ಯಂತ ಶ್ಲಾಘಾನಾರ್ಹ ಎಂದರು.

ರೋಟರಿ ಕ್ಲಬ್‌ನ ಜಿಲ್ಲಾ ಸಹಾಯಕ ಪ್ರಾಂತಪಾಲ ಡಾ. ಸಮೀರಕುಮಾರ್ ನಾಯಕ, ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ರಾಘವೇಂದ್ರ ಜೆ.ಆರ್., ರೋಟರಿ ಕ್ಲಬ್‌ನ ಅಧ್ಯಕ್ಷ ಅಶುತೋಷ್ ಕುಮಾರ್ ರಾಯ್ ಮಾತನಾಡಿದರು.

ವೇದಿಕೆಯಲ್ಲಿ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶ್ವೇತಾ ಜಾಧವ, ಕಾರ್ಯದರ್ಶಿ ಡಾ. ರೇಖಾ ಹೆಗ್ಡೆ ಉಪಸ್ಥಿತರಿದ್ದರು.

ಶಿಕ್ಷಣ ಕ್ಷೇತ್ರದಲ್ಲಿ ದಕ್ಷ ಸೇವೆ ಸಲ್ಲಿಸಿದ 11 ಶಿಕ್ಷಕ-ಶಿಕ್ಷಕಿಯರಾದ ಜಯದೇವ ಸಿರಿಗೇರಿ, ಶಂಕರ ಕಿಲ್ಲೇಕರ, ಮೇನಕಾ ಜಿ.ಮಡಿವಾಳ, ಶಾಲಿನಿ ಪಿ. ಲೋಪಿಸ್, ಎಂ.ಜಿ. ಪತ್ತಾರ, ರೂಪಾ ಡಿ. ಭಜಂತ್ರಿ, ಶಶಿರೇಖಾ ಮುರಳಿ ಕನ್ಯಾಡಿ, ಶೋಭಾ ಆನಂದ ನಾಯ್ಕ, ಜಯಶ್ರೀ ಡಿ., ಜೂಲಿಯಾ ಪಿ. ಕಾಸ್ಟ, ಪಾರ್ವತಿ ಎಲಿಗೇರಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಇದೇ ಸಂದರ್ಭ ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ, ಐಟಿಐ, ಡಿಪ್ಲೋಮಾ, ನರ್ಸಿಂಗ್‌ನಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆಗೊಂಡ 29 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ನೂತನ ಸದಸ್ಯರನ್ನಾಗಿ ರಾಧೇಶ್ಯಾಮ್ ರಾಠಿ ಮತ್ತು ವಿಜಯ್ ವಿ. ತೇಲಿ ಅವರನ್ನು ಸೇರ್ಪಡೆಗೊಳಿಸಲಾಯಿತು. ರೋಟರಿ ಕ್ಲಬಿನ ಡಾ. ಪರಶುರಾಮ ಸಾಂಬ್ರೇಕರ ಅವರಿಗೆ ಪಿ.ಎಚ್.ಎಫ್ ಪಿನ್ ವಿತರಿಸಲಾಯಿತು. 2024-25 ನೇ ಸಾಲಿನಲ್ಲಿ ರೋಟರಿ ಸಂಸ್ಥೆಗೆ ಅತಿ ಹೆಚ್ಚಿನ ದೇಣಿಗೆ ನೀಡಿದ ಅಶುತೋಷ್ ಕುಮಾರ್ ರಾಯ್ ಗೆ ರೋಟರಿ ಜಿಲ್ಲಾ ಪ್ರಾಂತಪಾಲ ಅರುಣ್ ಭಂಡಾರಿ ಪಾರಿತೋಷಕ ನೀಡಿ ಗೌರವಿಸಿದರು.

ರೋಟರಿ ಕ್ಲಬ್‌ನ ರಾಹುಲ್ ಬಾವಾಜಿ ರೋಟರಿ ಪ್ರಾರ್ಥನೆ ಗೀತೆ ಹಾಡಿದರು. ರೋಟರಿ ಕ್ಲಬ್‌ನ ಅಭಿಷೇಕ ಕನ್ಯಾಡಿ, ಸುಧಾಕರ ಶೆಟ್ಟಿ ಮತ್ತು ರವಿಕುಮಾರ್ ನಾಯಕ ಅತಿಥಿ ಪರಿಚಯಿಸಿದರು. ನೂತನ ಸದಸ್ಯರನ್ನು ಸೋಮಕುಮಾರ್ ಎಸ್. ಮತ್ತು ವೆಂಕಟೇಶ್ ಪಾಂಡೆ ಪರಿಚಯಿಸಿದರು. ಆರ್.ಪಿ. ನಾಯ್ಕ ಶ್ರೇಷ್ಠ ಶಿಕ್ಷಕ-ಶಿಕ್ಷಕಿ ಪ್ರಶಸ್ತಿಯ ಪ್ರದಾನದ ಬಗ್ಗೆ ಮಾತನಾಡಿದರು. ರೋಟರಿ ಕ್ಲಬ್ ಕಾರ್ಯದರ್ಶಿ ಮಿಥುನ್ ನಾಯಕ ವಂದಿಸಿದರು. ಎಸ್. ಸೋಮಕುಮಾರ್ ಕಾರ್ಯಕ್ರಮ ನಿರೂಪಿಸಿದರು.