ಸಾರಾಂಶ
ಎಂಜಿನಿಯರ್ಸ್ ದಿನಾಚರಣೆ ಅಂಗವಾಗಿ ಅಭಿನಂದನೆ
ಕನ್ನಡಪ್ರಭ ವಾರ್ತೆ ಮೈಸೂರು
ನಗರದ ರೋಟರಿ ಕ್ಲಬ್ ವಿಜಯನಗರ ಮೈಸೂರು ವತಿಯಿಂದ ಎಂಜಿನಿಯರ್ಸ್ ದಿನಾಚರಣೆ ಅಂಗವಾಗಿ ರೇಲ್ವೆ ಇಲಾಖೆಯ ಮೈಸೂರು ವಿಭಾಗದಲ್ಲಿ ಅಸಿಸ್ಟೆಂಟ್ ಡಿವಿಷನಲ್ ಎಂಜಿನಿಯರ್ ಕೇಶವಮೂರ್ತಿ ಅವರ ಮಾಡಿರುವ ಸೇವೆ ಗುರುತಿಸಿ ಸನ್ಮಾನಿಸಲಾಯಿತು. ಅಧ್ಯಕ್ಷ ಆರ್. ಮಹೇಶ್, ಕಾರ್ಯದರ್ಶಿ ಡಿ. ಹರೀಶ್ ರಂಗನಾಥ್, ಜೋನ್ 8 ರ ಅಸಿಸ್ಟೆಂಟ್ ಗವರ್ನರ್ ಗಳಾದ ರಾಜೀವ್, ಕೇಶವ ಪ್ರಕಾಶ್, ವಲಯ ಸೇನಾನಿಗಳಾದ ಮರಿಸ್ವಾಮಿ ನಾಯ್ಕ್, ಗಣೇಶ್ ಲಾಡ್, ಮುನಿಸ್ವಾಮಿ ಗೌಡ, ಬಾಲರಾಜ್ ಅರಸ್ ಹಾಗೂ ರೋಟರಿ ಜಿಲ್ಲೆ 3181 ರ ಆರ್.ಎಲ್.ಐ. ಅಧ್ಯಕ್ಷ ಎಚ್.ಎಂ. ಹರೀಶ್, ಅಂಗನವಾಡಿ ಅಧ್ಯಕ್ಷ ರಾಜೇಶ್, ಪಿ. ಸುರೇಶ್ ಇದ್ದರು.