ನೆಲಮಂಗಲ: ಅಂಗನವಾಡಿ ಕೇಂದ್ರದಲ್ಲಿ ಅಡುಗೆ ಮಾಡುವ ವೇಳೆ ಪ್ರತಿಯೊಬ್ಬರು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಶುಚಿತ್ವ ಕಾಪಾಡಿಕೊಳ್ಳಬೇಕು ಎಂದು ರೋಟರಿ ಬೆಂಗಳೂರು ಅರುಣೋದಯ ಸಂಸ್ಥೆ ಅಧ್ಯಕ್ಷ ಹನುಮಂತರಾಜು ತಿಳಿಸಿದರು

ನೆಲಮಂಗಲ: ಅಂಗನವಾಡಿ ಕೇಂದ್ರದಲ್ಲಿ ಅಡುಗೆ ಮಾಡುವ ವೇಳೆ ಪ್ರತಿಯೊಬ್ಬರು ಮಕ್ಕಳ ಆರೋಗ್ಯದ ದೃಷ್ಟಿಯಿಂದ ಶುಚಿತ್ವ ಕಾಪಾಡಿಕೊಳ್ಳಬೇಕು ಎಂದು ರೋಟರಿ ಬೆಂಗಳೂರು ಅರುಣೋದಯ ಸಂಸ್ಥೆ ಅಧ್ಯಕ್ಷ ಹನುಮಂತರಾಜು ತಿಳಿಸಿದರು.

ನಗರಸಭೆ ವ್ಯಾಪ್ತಿಯ ಸೊಂಡೇಕೊಪ್ಪ ವೃತ್ತದ ಬಳಿಯ ಮಹಿಳಾ‌ ಮತ್ತು‌ ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿಯಲ್ಲಿ ರೋಟರಿ ಬೆಂಗಳೂರು ಅರುಣೋದಯ ಸಂಸ್ಥೆಯಿಂದ ತಾಲೂಕು ಅಂಗನವಾಡಿ ಕೇಂದ್ರಗಳ ಅಡುಗೆ ಸಿಬ್ಬಂದಿಗೆ ಆಯೋಜಿಸಿದ್ದ ಏಪ್ರನ್ ವಿತರಿಸಿ ಮಾತನಾಡಿದ ಅವರು, ರೋಟರಿ ಸಂಸ್ಥೆಯಿಂದ 302 ಏಪ್ರನ್‌ಗಳನ್ನು ವಿತರಿಸಲಾಗಿದೆ. ಅಡುಗೆ ಸಿಬ್ಬಂದಿ ಸ್ವಚ್ಛತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯೋಜನಾಧಿಕಾರಿ ನಾಗೇಶ್ ಮಾತನಾಡಿ, ತಾಲೂಕಿನ ಅಂಗನವಾಡಿಗಳಿಗೆ ರೋಟರಿ ಸಂಸ್ಥೆ ವಿಶೇಷ ಒತ್ತು ನೀಡುತ್ತಿದೆ. ಶುದ್ದ ಕುಡಿಯುವ ನೀರಿನ ಘಟಕ, ಕಟ್ಟಡ ನಿರ್ಮಾಣ, ಅಗತ್ಯ ವಸ್ತುಗಳ ಪೂರೈಕೆ ಮಾಡುತ್ತಿದೆ. ಈ ಬಾರಿ ವಿಶೇಷವಾಗಿ ಅಂಗನವಾಡಿ ಕೇಂದ್ರದಲ್ಲಿ ಅಡುಗೆ ಮಾಡುವ ಸಿಬ್ಬಂದಿಗೆ ಏಪ್ರಾನ್ ವಿತರಣೆ ಮಾಡಿದ್ದೇವೆ. ಇಲಾಖೆ ಪರವಾಗಿ ರೋಟರಿ ಬೆಂಗಳೂರು ಅರುಣೋದಯ ಸಂಸ್ಥೆಗೆ ಧನ್ಯವಾದಗಳು ಎಂದರು.

ಈ ಸಂದರ್ಭದಲ್ಲಿ ರೋಟರಿ ಜಿಲ್ಲಾ ಸಹಾಯಕ ಪಾಲಕ ಜಿ.ಆರ್.ನಾಗರಾಜು, ಕಾರ್ಯದರ್ಶಿ ಬಿ. ನಾಗೇಂದ್ರ, ಮಾರ್ಗದರ್ಶಕ ನವೀನ್ ಕುಮಾರ್, ನಿಕಟಪೂರ್ವ ಅಧ್ಯಕ್ಷ ಗಂಗಣ್ಣ, ನಿಯೋಜಿತ ಅಧ್ಯಕ್ಷ. ಕಿರಣ್ ಕುಮಾರ್, ನಿರ್ದೇಶಕರಾದ ನಟರಾಜು, ಗೋವಿಂದರಾಜು, ರವಿಕುಮಾರ್, ತಿಮ್ಮೇಗೌಡ, ಚಂದ್ರಶೇಖರ್, ಮಲ್ಲಿಕಾರ್ಜುನ್, ಸಿಡಿಪಿಒ ನಾಗೇಶ್, ಮೇಲ್ವಿಚಾರಕರಾದ ಹೇಮಲತಾ , ವಿಜಯಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.

ಪೊಟೊ-22ಕೆಎನ್‌ಎಲ್‌ಎಮ್‌1-

ನೆಲಮಂಗಲದ ಮಹಿಳಾ‌ ಮತ್ತು‌ ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿಯಲ್ಲಿ ರೋಟರಿ ಬೆಂಗಳೂರು ಅರುಣೋದಯ ಸಂಸ್ಥೆಯಿಂದ ತಾಲೂಕು ಅಂಗನವಾಡಿ ಕೇಂದ್ರಗಳ ಅಡುಗೆ ಸಿಬ್ಬಂದಿಗೆ ಅಧ್ಯಕ್ಷ ಹನುಮಂತರಾಜು ಏಪ್ರನ್ ವಿತರಿಸಿದರು.