ಸಾರಾಂಶ
ರೋಟರಿ ಕ್ಲಬ್ ಆಫ್ ಕಾರ್ಕಳದ ವತಿಯಿಂದ ಜಿಲ್ಲಾ ಗವರ್ನರ್, ರೊಟೇರಿಯನ್ ಎಂ.ಜೆ.ಡಿ. ಸಿಎ ದೇವ್ ಆನಂದ್ ಮತ್ತು ಪ್ರಥಮ ಮಹಿಳೆ ರೇಖಾ ದೇವ್ ಆನಂದ್ ದಂಪತಿ ಇಲ್ಲಿನ ಕುಕ್ಕುಂದೂರಿನ ವಿಜೇತ ವಿಶೇಷ ಶಾಲೆಗೆ ಭೇಟಿ ನೀಡಿದರು.
ಕನ್ನಡಪ್ರಭ ವಾರ್ತೆ ಕಾರ್ಕಳ
ರೋಟರಿ ಕ್ಲಬ್ ಆಫ್ ಕಾರ್ಕಳದ ವತಿಯಿಂದ ಜಿಲ್ಲಾ ಗವರ್ನರ್, ರೊಟೇರಿಯನ್ ಎಂ.ಜೆ.ಡಿ. ಸಿಎ ದೇವ್ ಆನಂದ್ ಮತ್ತು ಪ್ರಥಮ ಮಹಿಳೆ ರೇಖಾ ದೇವ್ ಆನಂದ್ ದಂಪತಿ ಇಲ್ಲಿನ ಕುಕ್ಕುಂದೂರಿನ ವಿಜೇತ ವಿಶೇಷ ಶಾಲೆಗೆ ಭೇಟಿ ನೀಡಿದರು.ಇದೇ ಸಂದರ್ಭದಲ್ಲಿ ಚೇತನಾ ಪ್ರಭು, ತಮ್ಮ ಹುಟ್ಟುಹಬ್ಬವನ್ನು ವಿಜೇತ ವಿಶೇಷ ಶಾಲಾ ಮಕ್ಕಳೊಂದಿಗೆ ಆಚರಿಸಿ ವಿಶೇಷ ಭೋಜನದ ವ್ಯವಸ್ಥೆ ಮಾಡಿದ್ದರು. ಯೋಗೀಶ್ ಪ್ರಭು, ಶಾಲಾ ಶ್ರೇಯೋಭಿವೃದ್ಧಿಗಾಗಿ ದೇಣಿಗೆ ಹಸ್ತಾಂತರಿಸಿದರು.ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅಸಿಸ್ಟೆಂಟ್ ಗವರ್ನರ್ ಅನಿಲ್ ಡೇಸಾ, ಝೋನಲ್ ಲೆಫ್ಟಿನಂಟ್ ಪಿಎಚ್‌ಎಫ್ ಸುರೇಶ್ ನಾಯಕ್, ಕಾರ್ಕಳ ರೋಟರಿ ಕ್ಲಬ್ ಅಧ್ಯಕ್ಷ ಇಕ್ಬಾಲ್ ಅಹಮ್ಮದ್, ಕಾರ್ಯದರ್ಶಿ ಗಣೇಶ್ ಸಾಲ್ಯಾನ್, ಅಸಿಸ್ಟೆಂಟ್ ಗವರ್ನರ್ ಶೈಲೇಂದ್ರ ರಾವ್, ವಿಜೇತ ವಿಶೇಷ ಶಾಲಾ ಸಂಸ್ಥಾಪಕಿ ಡಾ.ಕಾಂತಿ ಹರೀಶ್, ರೋಟರಿ ಕ್ಲಬ್ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವಿಶೇಷ ಶಿಕ್ಷಕಿ ಹರ್ಷಿತಾ ಕಿರಣ್ ನಿರೂಪಿಸಿದರು. ಡಾ.ಕಾಂತಿ ಹರೀಶ್ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿಶೇಷ ಶಿಕ್ಷಕಿ ಶ್ರೀನಿಧಿ ಅಶೋಕ್ ವಂದಿಸಿದರು.