ಸಾರಾಂಶ
ಪೊಲಿಯೋ ಮುಕ್ತ ಅಭಿಯಾನ
ಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರುವಿಶ್ವದ ಸುಮಾರು 200ಕ್ಕೂ ಹೆಚ್ಚು ದೇಶಗಳಲ್ಲಿ ಪೊಲಿಯೋ ನಿರ್ಮೂಲನೆಗಾಗಿ ರೋಟರಿ ಸಂಸ್ಥೆ ಕೋಟ್ಯಂತರ ರು. ದೇಣಿಗೆ ನೀಡಿದ್ದು, ಈ ದೇಣಿಗೆಯಿಂದ ಉಚಿತವಾಗಿ ಲಸಿಕೆಗಳನ್ನು ನೀಡಿ ಪೊಲಿಯೋ ಮುಕ್ತ ವಿಶ್ವವನ್ನಾಗಿ ಘೋಷಿಸಲಾಗಿದೆ ಎಂದು ರೋಟರಿ ಕ್ಲಬ್‌ನ ಮಾಜಿ ಅಸಿಸ್ಟೆಂಟ್ ಗವರ್ನರ್ ಕೆ.ಟಿ.ವೆಂಕಟೇಶ್ ಹೇಳಿದರು.ಪಟ್ಟಣದ ರೋಟರಿ ಕ್ಲಬ್, ಇನ್ನರ್ ವ್ಹೀಲ್ ಕ್ಲಬ್ ನಿಂದ ಜೇಸಿ ವೃತ್ತದಲ್ಲಿ ಆಯೋಜಿಸಿದ್ದ ಪೊಲಿಯೋ ಮುಕ್ತ ಅಭಿಯಾನದಲ್ಲಿ ಮಾತನಾಡಿದರು. ವಿಶ್ವದಲ್ಲಿ ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ಪೊಲಿಯೋ ಮುಕ್ತ ದೇಶಕ್ಕೆ ಸಹಕಾರ ನೀಡಲಿಲ್ಲ. ಆದರೆ ವಿಶ್ವದ ಇತರ ದೇಶಗಳು ಸಹಕಾರ ನೀಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಗ್ಗಟ್ಟಿನಿಂದ ಸೇವೆ ಸಲ್ಲಿಸಿ ಪೊಲಿಯೋ ಮುಕ್ತವಾಗಿಸಲು ಸಹಕರಿಸಿದ್ದಾರೆ ಎಂದರು.
ರೋಟರಿ ಕ್ಲಬ್ ಅಧ್ಯಕ್ಷ ಎಂ.ವಿ.ತಿಮ್ಮಯ್ಯಗೌಡ ಮಾತನಾಡಿ, ರೋಟರಿ ಸಂಸ್ಥೆ ಸಮಾಜ ಸೇವೆಯಲ್ಲಿ ಮುಂಚೂಣಿಯ ಸ್ಥಾನದಲ್ಲಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ. ಪೊಲಿಯೋ ಮುಕ್ತದ ವಿಶ್ವದ ಸಾಧನೆ ರೋಟರಿ ಸಂಸ್ಥೆಗೆ ಸಲ್ಲಲಿದ್ದು, ಪ್ರತಿಯೊಂದು ಪೊಲಿಯೋ ಹನಿಗಳ ಮೌಲ್ಯವನ್ನು ರೋಟರಿ ಸಂಸ್ಥೆ ಭರಿಸಿದೆ ಎಂದರು.ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಸಹನಾ ಯೋಗೇಶ್, ಕಾರ್ಯದರ್ಶಿ ಸುಪ್ರಿಯಾ ರಮೇಶ್, ರೋಟರಿ ಜೋನಲ್ ಲೆಫ್ಟಿನೆಂಟ್ ಎಂ.ಸಿ.ಯೋಗೀಶ್, ಕಾರ್ಯದರ್ಶಿ ಸೈಯ್ಯದ್ ಫಾಜಿಲ್ ಹುಸೇನ್, ಪ್ರಮುಖರಾದ ಎಚ್.ಎಚ್.ಕೃಷ್ಣಮೂರ್ತಿ, ಬಿ.ಎಸ್. ಸಾಗರ್, ಸತೀಶ್ ಅರಳೀಕೊಪ್ಪ, ಎಚ್.ಕೆ ವೆಂಕಟೇಶ್ ಮತ್ತಿತರರು ಹಾಜರಿದ್ದರು. ೨೬ಬಿಹೆಚ್‌ಆರ್ ೧:ಬಾಳೆಹೊನ್ನೂರಿನ ರೋಟರಿ ಕ್ಲಬ್, ಇನ್ನರ್‌ವ್ಹೀಲ್ ಕ್ಲಬ್ ನಿಂದ ಪೊಲಿಯೋ ಮುಕ್ತ ಅಭಿಯಾನದ ಅಂಗವಾಗಿ ಪಟ್ಟಣದಲ್ಲಿ ಜಾಗೃತಿ ಜಾಥಾ ನಡೆಸಲಾಯಿತು. ತಿಮ್ಮಯ್ಯಗೌಡ, ವೆಂಕಟೇಶ್, ಸಹನಾ, ಸುಪ್ರಿಯಾ, ಯೋಗೀಶ್, ಸೈಯ್ಯದ್ ಫಾಜಿಲ್ ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))