ತರೀಕೆರೆಪ್ರಪಂಚದಾದ್ಯಂತ ಪಲ್ಸ್ ಪೊಲಿಯೋ ಕಾರ್ಯಕ್ರಮಕ್ಕೆ ಅತಿ ಹೆಚ್ಚು ದೇಣಿಗೆಯನ್ನು ರೋಟರಿ ಕ್ಲಬ್ ನೀಡುತ್ತಿದೆ ಎಂದು ಶಾಸಕ ಜಿ.ಹೆಚ್.ಶ್ರೀನಿವಾಸ್ ಹೇಳಿದ್ದಾರೆ.

ತರೀಕೆರೆಯಲ್ಲಿ ರೋಟರಿ ಕ್ಲಬ್ 2025-26ರ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭ

ಕನ್ನಡಪ್ರಭ ವಾರ್ತೆ ತರೀಕೆರೆ

ಪ್ರಪಂಚದಾದ್ಯಂತ ಪಲ್ಸ್ ಪೊಲಿಯೋ ಕಾರ್ಯಕ್ರಮಕ್ಕೆ ಅತಿ ಹೆಚ್ಚು ದೇಣಿಗೆಯನ್ನು ರೋಟರಿ ಕ್ಲಬ್ ನೀಡುತ್ತಿದೆ ಎಂದು ಶಾಸಕ ಜಿ.ಹೆಚ್.ಶ್ರೀನಿವಾಸ್ ಹೇಳಿದ್ದಾರೆ.

ರೋಟರಿ ಕ್ಲಬ್ ನಿಂದ ಪಟ್ಟಣದ ಅರಮನೆ ಹೋಟೆಲ್ ಸಭಾಂಗಣದಲ್ಲಿ ನಡೆದ 2025-26ರ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಇಪ್ಪತ್ತಕ್ಕೂ ಹೆಚ್ಚು ವರ್ಷಗಳಿಂದ ನಾನು ರೋಟರಿ ಕ್ಲಬ್ ಸದಸ್ಯನಾಗಿದ್ದು, ರೋಟರಿ ವಿದ್ಯಾ ಸಂಸ್ಥೆಗೆ ಪ್ರತಿ ವರ್ಷ ಎಲ್ಲಾ ರೀತಿ ಸಹಾಯ ನೀಡುತ್ತೇನೆ ಎಂದು ತಿಳಿಸಿದರು.

ರೋ. ಐಪಿಡಿಜಿ ಸತೀಶ್ ಮಾಧವನ್ ಅವರು ನೂತನ ಅಧ್ಯಕ್ಷ ರವಿಕುಮಾರ್ ಬಿ.ಪಿ. ಮತ್ತು ಕಾರ್ಯದರ್ಶಿ ಪ್ರವೀಣ್ ಪಿ. ಪದವಿ ಪ್ರದಾನ ಮಾಡಿ ಮಾತನಾಡಿದರು. 1914ರಲ್ಲಿ ರಚನೆಯಾದ ರೋಟರಿ ಕ್ಲಬ್ ಇಂದು 37,673 ಕ್ಲಬ್ ಗಳಾಗಿ ವಿಸ್ತಿರಿಸಿಕೊಂಡು, 12 ಲಕ್ಷಕ್ಕೂ ಹೆಚ್ಚು ರೋಟರಿ ಸದಸ್ಯರು ಪ್ರಪಂಚದಾದ್ಯಂತ ವಿವಿಧ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ರೋಟರಿಗೆ ತರೀಕೆರೆ ಯಲ್ಲಿ 85 ಸದಸ್ಯರಿದ್ದು ಉತ್ತಮ ಸಮಾಜಮುಖಿ ಕೆಲಸಗಳನ್ನು ಪ್ರತಿ ವರ್ಷ ನಡೆಸಿಕೊಂಡು ಬಂರುತ್ತಿದ್ದಾರೆ ಎಂದು ಪ್ರಶಂಸಿಸಿದರು.

ನೂತನ ಅಧ್ಯಕ್ಷ ರವಿಕುಮಾರ್ ಬಿ.ಪಿ. ಮಾತನಾಡಿ ಮುಂಬರುವ ವರ್ಷಗಳಲ್ಲಿ ತರೀಕೆರೆಯಲ್ಲಿ ರಕ್ತನಿಧಿ ಕೇಂದ್ರ, ವೃದ್ಧಾಶ್ರಮ, ಕಿವುಡ ಮತ್ತು ಮೂಕರ ವಸತಿ ಶಾಲೆ ಸ್ಥಾಪಿಸುವ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು. 50 ವರ್ಷಗಳಿಂದ ತರೀಕೆರೆಗೆ ವೈದ್ಯಕೀಯ ಸೇವೆ ನೀಡಿದಂತಹ ವಸುಧಾ ಆಸ್ಪತ್ರೆ ಡಾ.ವಸಂತ್ ಅವರನ್ನು ಗೌರವ ಸದಸ್ಯರನ್ನಾಗಿ ಹಾಗೂ 9 ಹೊಸ ಸದಸ್ಯರನ್ನು ತರೀಕೆರೆ ರೋಟರಿ ಕ್ಲಬ್ ಗೆ ಸೇರ್ಪಡೆಗೊಳಿಸಲಾಯಿತು. ಪ್ರತಿಭಾ ಪುರಸ್ಕಾರ ಏರ್ಪಡಿಸಲಾಗಿತ್ತು.

ಸಹಾಯಕ ಗವರ್ನರ್ ರೊ. ಪ್ರವೀಣ್ ನಹರ್, ಜೋನ್ - 7 ರ ವಲಯ ಸೇನಾನಿ. ಮಂಜುನಾಥ್, ನಿಕಟಪೂರ್ವ ಅಧ್ಯಕ್ಷರಾದ ರಾಕೇಶ್ ಜಿ. ಸಿ, ಫಾಸ್ಟ್ ಅಸಿಸ್ಟೆಂಟ್ ಗವರ್ನರ್ ಗಳಾದ ಡಾ. ಜಿ.ಸಿ.ಶರತ್, ಗೋವರ್ಧನ್,ಬಿ.ವಿ. ದಿನೇಶ್ ಕುಮಾರ್, .ರಾಜಣ್ಣ, ಡಾ. ಎಸ್. ಎನ್.ಆಚಾರ್ಯ .ನಾಗರಾಜ್. ಪಿ, ಡಾ. ಗಿರೀಶ್, ಡಾ. ಚನ್ನಬಸಪ್ಪ, ಡಾ. ಚಂದ್ರಶೇಖರ್, ಡಾ.ಕಿಶೋರ್, ರೋಟರಿ ಕ್ಲಬ್ , ಇನ್ನರ್ ವ್ಹೀಲ್ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

6ಕೆಟಿಆರ್.ಕೆ.1ಃ ತರೀಕೆರೆಯಲ್ಲಿ ರೋಟರಿ ಕ್ಲಬ್ ವತಿಯಿಂದ 2025-26ರ ಪದಾದಿಕಾರಿಗಳ ಪದವಿ ಸ್ವೀಕಾರ ಸಮಾರಂಭ ಏರ್ಪಡಿಸಲಾಗಿತ್ತು. ರೊ.ಪಿ.ಹೆಚ್.ಎಫ್ ಶಾಸಕ ಜಿ.ಹೆಚ್.ಶ್ರೀನಿವಾಸ್ ಮತ್ತಿತರರು ಇದ್ದರು.