ಸಾರಾಂಶ
ಚಿಕ್ಕಮಗಳೂರುಅಲ್ಪಮಾನವನಿಗೆ ವಿಶ್ವಮಾನವನಾಗಿಸುವ ಸಾಮರ್ಥ್ಯ ರೋಟರಿಗಿದೆ. ಸಮಾಜದಲ್ಲಿ ಸ್ವಾರ್ಥವಿಲ್ಲದೇ ಸೇವಾಮನೋಭಾವ ಹಾಗೂ ಶಾಂತಿಮಂತ್ರದೊಂದಿಗೆ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ರೋಟರಿ ಸಾಮಾಜಿಕ ಕಾರ್ಯದಲ್ಲಿ ತಲ್ಲೀನವಾಗಿದೆ ಎಂದು ಹಿರಿಯ ವೈದ್ಯ ಡಾ. ಜೆ.ಪಿ.ಕೃಷ್ಣೇ ಗೌಡ ಹೇಳಿದರು.
ಎಂ.ಎಲ್.ವಿ. ರೋಟರಿ ಸಭಾಂಗಣದಲ್ಲಿ ಆಯೋಜಿಸಿದ್ಧ ವೈದ್ಯರ ದಿನಾಚರಣೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಅಲ್ಪಮಾನವನಿಗೆ ವಿಶ್ವಮಾನವನಾಗಿಸುವ ಸಾಮರ್ಥ್ಯ ರೋಟರಿಗಿದೆ. ಸಮಾಜದಲ್ಲಿ ಸ್ವಾರ್ಥವಿಲ್ಲದೇ ಸೇವಾಮನೋಭಾವ ಹಾಗೂ ಶಾಂತಿಮಂತ್ರದೊಂದಿಗೆ ವಿಶ್ವದ ಬಹುತೇಕ ರಾಷ್ಟ್ರಗಳಲ್ಲಿ ರೋಟರಿ ಸಾಮಾಜಿಕ ಕಾರ್ಯದಲ್ಲಿ ತಲ್ಲೀನವಾಗಿದೆ ಎಂದು ಹಿರಿಯ ವೈದ್ಯ ಡಾ. ಜೆ.ಪಿ.ಕೃಷ್ಣೇ ಗೌಡ ಹೇಳಿದರು.ನಗರದ ಎಂ.ಎಲ್.ವಿ. ರೋಟರಿ ಸಭಾಂಗಣದಲ್ಲಿ ಆಯೋಜಿಸಿದ್ಧ ವೈದ್ಯರ ದಿನಾಚರಣೆಯಲ್ಲಿ ಹಿರಿಯ ವೈದ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ ರೋಟರಿ ಸಂಸ್ಥಾಪಕ ಪಾಲ್‌ಹ್ಯಾರಿಸ್ ೧೯ನೇ ಶತಮಾತನದಲ್ಲೇ ಸರ್ಕಾರ ಎಲ್ಲಾ ಕಾರ್ಯ ಗಳನ್ನು ಜನತೆಗೆ ಪೂರೈಸದು ಎಂಬ ವಿಷಯ ಅರಿತು ಅಮೇರಿಕಾದಲ್ಲಿ ಕ್ಲಬ್ ಸ್ಥಾಪಿಸಿ ಸೇವಾಮನೋ ಭಾವ, ಸಮಗ್ರತೆಗೆ ಉತ್ತೇಜನ, ವ್ಯಾಪಾರ, ವೃತ್ತಿಪರ ಮತ್ತು ಸಮುದಾಯ ನಾಯಕರ ಸಹಭಾಗಿತ್ವದ ಮೂಲಕ ವಿಶ್ವ ತಿಳುವಳಿಕೆಗೆ ಒತ್ತು ನೀಡಿದವರು ಎಂದು ಹೇಳಿದರು.ರೋಟರಿ ಕ್ಲಬ್ ಅಧ್ಯಕ್ಷ ಎನ್.ಪಿ.ಲಿಖಿತ್ ಮಾತನಾಡಿ ಮಾನವೀಯತೆ, ಸೇವೆಗಾಗಿ ತಮ್ಮ ಜೀವನ ಮುಡಿಪಾಗಿಟ್ಟ ವೈದ್ಯರಿಗೆ ಕೃತಜ್ಞತೆಗಳು. ಅವರ ಕರುಣೆ, ಧೈರ್ಯ ಮತ್ತು ಬದ್ಧತೆ ರೋಟರಿ ಸೇವೆ ಎಂಬ ಧ್ಯೇಯ ಪ್ರತಿಬಿಂಬಿಸುತ್ತದೆ ಎಂದರು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವಥ್‌ಬಾಬು ಮಾತನಾಡಿ ಆರೋಗ್ಯ ಕ್ಷೇತ್ರಕ್ಕೆ ಮೊದಲ ಆಧಾರ ಸ್ಥಂಬವೇ ವೈದ್ಯರು. ಯಾವುದೇ ತಂತ್ರಜ್ಞಾನವಿಲ್ಲದ ವೇಳೆಯಲ್ಲಿ ಬಹಳಷ್ಟು ಸೇವೆ ಸಲ್ಲಿಸಿರುವ ಹಿರಿಯರನ್ನು ಗುರುತಿಸಿ ರೋಟರಿ ಕ್ಲಬ್ ಗೌರವಿಸುತ್ತಿರುವುದು ಅತ್ಯಂತ ಖುಷಿ ಸಂಗತಿ ಎಂದು ಹೇಳಿದರು.ಇದೇ ವೇಳೆ ಜಿಲ್ಲೆಯಲ್ಲಿ ಅನೇಕ ವರ್ಷಗಳಿಂದ ವೈದ್ಯಸೇವೆ ಸಲ್ಲಿಸಿರುವ ಹಿರಿಯರಾದ ಡಾ. ಕಣ್ಣಯ್ಯ, ಡಾ.ಟಿ.ಎಚ್.ರಾಜು, ಡಾ.ಖಾದರ್, ಡಾ. ಪ್ರಾಟ್ರಿಕ್, ಡಾ.ಜೆ.ಪಿ.ಕೃಷ್ಣೇಗೌಡ, ಡಾ.ಶುಭ ವಿಜಯ್, ಡಾ.ಪದ್ಮಾ ಪೈ, ಡಾ. ವೇಣುಗೋಪಾಲ್ ಅವರನ್ನು ಗೌರವಿಸಲಾಯಿತು.ಈ ಸಂದರ್ಭದಲ್ಲಿ ರೋಟರಿ ಕ್ಲಬ್ ವೃತ್ತಿ ಸೇವಾ ನಿರ್ದೇಶಕ ಬಿ.ಎಸ್.ವಿಂದ್ಯಾ, ಕಾರ್ಯದರ್ಶಿ ಹರ್ಷಿ ತಾ ವಶಿಷ್ಠ, ಪಿಡಿಜಿ ಎಂ.ಸಿ.ಶೇಖರ್, ಹಿರಿಯ ರೋಟರಿಯನ್ ಕೆ.ಎಸ್.ರಮೇಶ್, ನಿಕಟಪೂರ್ವ ಅಧ್ಯಕ್ಷ ಎಂ.ಎಲ್.ಸುಜಿತ್, ನಿರ್ದೇಶಕ ಶ್ರೀವತ್ಸ ಮತ್ತಿತರರಿದ್ದರು.