ಸಾರಾಂಶ
ಸರ್ಕಾರಿ ಶಾಲೆಯಲ್ಲಿ ಓದಿ ಪ್ರತಿಭೆಯಿಂದ ಐಐಟಿ ಪ್ರವೇಶ ಪಡೆದಿದ್ದ ವಿದ್ಯಾರ್ಥಿ ದೀಪಕ್ ಅವರಿಗೆ ರೋಟರಿ ಸಂಸ್ಥೆ ಆರ್ಥಿಕ ನೆರವು ನೀಡಿ ಗೌರವಿಸಿದೆ. ದೀಪಕ್ ಅವರ ಬಡತನದ ಹಿನ್ನೆಲೆ ಅರಿತು ರೋಟರಿ ಅಧ್ಯಕ್ಷ ಜ್ಯೋತಿ ಶ್ರೀನಿವಾಸ್, ವಲಯ ಅಧಿಕಾರಿ ಯಶವಂತ್ ಮತ್ತು ತಂಡವು ನೆರವಾಗಲು ಮುಂದಾಯಿತು. ದೀಪಕ್ ತನ್ನ ಬದುಕಿನ ನೋವಿನ ನಡುವೆಯೂ ಸಾಧನೆ ಮಾಡಿದ್ದಾನೆ. ಎಸ್.ಎಸ್.ಎಲ್.ಸಿ ವ್ಯಾಸಂಗ ಮಾಡುವಾಗ ತಾಯಿ ಮೃತಪಟ್ಟರೂ, ಮನೆಯಲ್ಲೇ ಕುಳಿತು ಓದಿ ಉತ್ತಮ ಅಂಕ ಪಡೆದಿದ್ದಾನೆ. ಇವನ ಸಾಧನೆ ಮತ್ತೊಬ್ಬರಿಗೆ ಪ್ರೇರಣೆಯಾಗಲಿ ಎಂದು ಆಶಿಸಿದರು.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಸರ್ಕಾರಿ ಶಾಲೆಯಲ್ಲಿ ಓದಿ ಪ್ರತಿಭೆಯಿಂದ ಐಐಟಿ ಪ್ರವೇಶ ಪಡೆದಿದ್ದ ವಿದ್ಯಾರ್ಥಿ ದೀಪಕ್ ಅವರಿಗೆ ರೋಟರಿ ಸಂಸ್ಥೆ ಆರ್ಥಿಕ ನೆರವು ನೀಡಿ ಗೌರವಿಸಿದೆ.ದೀಪಕ್ ಅವರ ಬಡತನದ ಹಿನ್ನೆಲೆ ಅರಿತು ರೋಟರಿ ಅಧ್ಯಕ್ಷ ಜ್ಯೋತಿ ಶ್ರೀನಿವಾಸ್, ವಲಯ ಅಧಿಕಾರಿ ಯಶವಂತ್ ಮತ್ತು ತಂಡವು ನೆರವಾಗಲು ಮುಂದಾಯಿತು.
ಪಟ್ಟಣದ ಕರ್ನಾಟಕ ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಜಿಲ್ಲಾಧಿಕಾರಿ ಎಚ್.ಎಂ.ನಾಗಪ್ಪ ನಿವೃತ್ತ ಉಪನ್ಯಾಸಕ ಎನ್. ನಾರಾಯಣ್ ಸೇರಿದಂತೆ ಹಲವು ಗಣ್ಯರು ದೀಪಕ್ ಅವರನ್ನು ಅಭಿನಂದಿಸಿದರು. ರೋಟರಿ ಸಂಸ್ಥೆ, ಪದವೀಧರ ಪತ್ತಿನ ಸಹಕಾರ ಸಂಘ, ಕರ್ನಾಟಕ ಸಂಘ ಮತ್ತು ಉದ್ಯಮಿ ಸಿ.ಎಸ್. ಆದಿಶೇಷ ಕುಮಾರ್ ಅವರು ಆರ್ಥಿಕ ನೆರವು ನೀಡಿದರು.ದೀಪಕ್ ಅವರ ಹಿಂದಿನ ಶಿಕ್ಷಕ ದೇವರಾಜೇಗೌಡರು ಮಾತನಾಡಿ, ದೀಪಕ್ ತನ್ನ ಬದುಕಿನ ನೋವಿನ ನಡುವೆಯೂ ಸಾಧನೆ ಮಾಡಿದ್ದಾನೆ. ಎಸ್.ಎಸ್.ಎಲ್.ಸಿ ವ್ಯಾಸಂಗ ಮಾಡುವಾಗ ತಾಯಿ ಮೃತಪಟ್ಟರೂ, ಮನೆಯಲ್ಲೇ ಕುಳಿತು ಓದಿ ಉತ್ತಮ ಅಂಕ ಪಡೆದಿದ್ದಾನೆ. ಇವನ ಸಾಧನೆ ಮತ್ತೊಬ್ಬರಿಗೆ ಪ್ರೇರಣೆಯಾಗಲಿ ಎಂದು ಆಶಿಸಿದರು.ನಿವೃತ್ತ ಜಿಲ್ಲಾಧಿಕಾರಿ ನಾಗಪ್ಪನವರು ಮಾತನಾಡಿ, ಕಠಿಣ ಪರಿಶ್ರಮದಿಂದ ಸಾಧನೆ ಮಾಡಿದ ದೀಪಕ್ ಉತ್ತಮ ಭವಿಷ್ಯ ಹೊಂದಿದ್ದಾನೆ. ಸಂಘಸಂಸ್ಥೆಗಳು ಇಂತಹ ಪ್ರತಿಭಾವಂತರಿಗೆ ನೆರವು ನೀಡಬೇಕು ಎಂದು ಕರೆ ನೀಡಿದರು.ರೋಟರಿ ಸಂಸ್ಥೆ ಪದಾಧಿಕಾರಿಗಳಾದ ಹರೀಶ್, ಹೇಮಲತಾ, ಹೇಮಚಂದ್ರ, ರಾಜು ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.